ಕಡಬ : ಇನ್ನೋವಾ-ಸ್ಕೂಟರ್ ಢಿಕ್ಕಿ: ಸವಾರರಿಗೆ ಗಾಯ

ಕಡಬ, ಎ.3. ಇಲ್ಲಿನ ಆಲಂಕಾರು ನೆಕ್ಕರೆ ಎಂಬಲ್ಲಿ ಇನ್ನೋವಾ ಕಾರೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಬಜತ್ತೂರು ಗ್ರಾಮದ ಕೊರಗಪ್ಪ ಪೂಜಾರಿ ಹಾಗೂ ಬರೆಮೇಲು ಮನೆ ನಿವಾಸಿ ಶ್ರೀಧರ ಪೂಜಾರಿ ಎಂದು ಗುರುತಿಸಲಾಗಿದೆ. ಶ್ರೀಧರ ಪೂಜಾರಿಯವರ 2 ಕಾಲುಗಳು ತುಂಡರಿಸಿದ್ದು, ಕೊರಗಪ್ಪ ಪೂಜಾರಿಯವರ ಹಲ್ಲುಗಳು ಉದುರಿವೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





