ಕಮಲಾಕ್ಷಿ ಉಡುಪ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೋ. ಅ. ಉಡುಪರ ಧರ್ಮ ಪತ್ನಿ , ಯುಗಪುರುಷ ಮಾಸ ಪತ್ರಿಕೆಯ ಗೌರವ ಸಂಪಾದಕಿ ಕಮಲಾಕ್ಷಿ ಉಡುಪ ( 82) ಅವರು ಅಸೌಖ್ಯದಿಂದ ಮಣಿಪಾಲದ ಅಸ್ಪತ್ರೆಯಲ್ಲಿ ಎ. 2 ರಂದು ನಿಧನ ಹೊಂದಿದರು. ಮೃತರು ಕಿನ್ನಿಗೋಳಿ ಅನಂತಪ್ರಕಾಶ ಮಾಸ ಪತ್ರಿಕೆಯ ಸಂಪಾದಕ ಸಚ್ಚಿದಾನಂದ ಉಡುಪ, ಮಣಿಪಾಲ ಫಾರ್ಮಸಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ ನಯನಾಭಿರಾಮ ಉಡುಪ, ಪ್ರಸುತ್ತ ಯುಗಪುರುಷ ಮಾಸ ಪತ್ರಿಕೆಯ ಸಂಪಾದಕ ಭುವನಾಭಿರಾಮ ಉಡುಪ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story





