ಜಾರಿ ಬಿದ್ದು ಸಹೋದರರಿಬ್ಬರು ಮೃತ್ಯು
ದಾವಣಗೆರೆ, ಎ.3: ತೋಟದಲ್ಲಿದ್ದ ಹೊಂಡಕ್ಕೆ ಜಾರಿ ಬಿದ್ದು ಸಹೋದರರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಬಿಸಲೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲಿಕಾರ್ಜುನಪ್ಪಅವರ ಮಕ್ಕಳಾದ ಮನೋಜ್ (16) ಹಾಗೂ ವಿನೋದ್ (13) ಮೃತಪಟ್ಟ ಯುವಕರು. ಶನಿವಾರ ಮಧ್ಯಾಹ್ನ ತಮ್ಮ ಮನೆಯಿಂದ ತಮ್ಮದೆ ತೋಟಕ್ಕೆ ತೆರಳಿದ್ದ ವಿನೋದ್ ಹಾಗೂ ಮನೋಜ್ ಬಾಯಾರಿಕೆಯಿಂದ ತೋಟದಲ್ಲಿದ್ದ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋದ ಸಂದರ್ಭ ಕಾಲು ಜಾರಿ ಬಿದ್ದಿದ್ದಾರೆ. ಈಜು ಬಾರದ ಪರಿಣಾಮ 15 ಅಡಿ ಆಳದ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮನೋಜ್ 9ನೆ ತರಗತಿ ಹಾಗೂ ವಿನೋದ್ 7ನೆ ತರಗತಿಯಲ್ಲಿ ಓದುತ್ತಿದ್ದರು.
ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಠಾಣೆ ಎಎಸ್ಸೈ ರೇವಣಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





