ಅಂಕೋಲಾ: ಮನೆಗಳ್ಳತ

ಅಂಕೋಲಾ, ಎ.3: ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಜಮಗೋಡ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರು ಹಾಡಹಗಲೇ ಮನೆ ಎದುರಿನ ಬೀಗ ಮುರಿದು ಒಳ ಪ್ರವೇಶಿಸಿ ಕಪಾಟು ತೆರೆದು ಅದರಲ್ಲಿದ್ದ ಸುಮಾರು 20 ತೊಲೆ ಬಂಗಾರ ಹಾಗೂ 10 ಸಾವಿರ ರೂ. ನಗದು ದೋಚಿದ ಘಟನೆ ರವಿವಾರ ನಡೆದಿದೆ. ಕಳ್ಳತನ ನಡೆದಿರುವ ಮನೆ ಹೊನ್ನಾವರ ಕರ್ಕಿ ಮೂಲದ ಸೀತಾ ಹರಿಶ್ಚಂದ್ರ ಗೌಡರದ್ದಾಗಿದೆ. ಜಮಗೋಡದ ನಳನಿ ಗಜಾನನ ನಾಯಕ ಎನ್ನುವವರಿಗೆ ಸೇರಿದ ಮನೆಯಲ್ಲಿ ಸೀತಾ ಗೌಡ ಎನ್ನುವವರು ಕಳೆದ 7 ತಿಂಗಳಿಂದ ಬಾಡಿಗೆಗೆ ಇದ್ದರು. ಮಗ ಶಶಿಧರ ಗೌಡ ಕಾರವಾರದಲ್ಲಿ ಇಂಜಿ
Next Story





