ಬೈಕ್ ಮರಕ್ಕೆ ಢಿಕ್ಕಿ: ಹಿಂಬದಿ ಸವಾರ ಮೃತ್ಯು
ಚಿಕ್ಕಮಗಳೂರು, ಎ.3: ದ್ವಿಚಕ್ರ ವಾಹನವು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಸವಾರ ಮೃತಪಟ್ಟಿರುವ ಘಟನೆ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತ ಮಹಲ್ ಫಾರಂ ಬಳಿ ನಡೆದಿದೆ.
ಮೃತನನ್ನು ಮಂಜುನಾಥ್(25) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶ್ರೀಧರ್(27) ಗಾಯಗೊಂಡಿದ್ದಾರೆ. ಲಿಂಗದಹಳ್ಳಿ ಬಳಿಯ ದೇವಸ್ಥಾನವೊಂದಕ್ಕೆ ತೆರಳಿ ಹಿಂದಿರುತ್ತಿದಾಗ ಸವಾರನ ಅಜಾಗರೂಕತೆಯ ಪರಿಣಾಮ ಬೈಕ್ ಮರಕ್ಕೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದರು.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ. ಘಟನೆ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
Next Story





