Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಮ್ಮ ಔಷಧ ಉದ್ಯಮದ ಕಾಯಿಲೆಯನ್ನು ...

ನಮ್ಮ ಔಷಧ ಉದ್ಯಮದ ಕಾಯಿಲೆಯನ್ನು ಗುಣಪಡಿಸುವವರ‍್ಯಾರು?

ರಾ.ನಾ.ರಾ.ನಾ.3 April 2016 11:45 PM IST
share
ನಮ್ಮ ಔಷಧ ಉದ್ಯಮದ ಕಾಯಿಲೆಯನ್ನು  ಗುಣಪಡಿಸುವವರ‍್ಯಾರು?

    ದುರದೃಷ್ಟಕರವೆಂದರೆ, ಲಾಭದಾಯಕವಾದ ಪಾಶ್ಚಾತ್ಯ ಮಾರುಕಟ್ಟೆಗಳಿಗಾಗಿ ಔಷಧ ಉತ್ಪನ್ನಗಳನ್ನು ತಯಾರಿಸುವ ಘಟಕಗಳಿಗೆ ಮಾತ್ರ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲಾಗುತ್ತದೆ. ಆದರೆ ಭಾರತ ಹಾಗೂ ಏಶ್ಯಾ ಹಾಗೂ ಆಫ್ರಿಕಗಳಲ್ಲಿರುವ ಬಡ ನೆರೆಹೊರೆಯ ರಾಷ್ಟ್ರಗಳಲ್ಲಿ ಸರಕಾರ ಅಥವಾ ಕಂಪೆನಿಗಳು ಔಷಧದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ವಿಶೇಷ ಕ್ರಮಗಳನ್ನು ತೆಗೆದುಕೊಂಡಿಲ್ಲ.

      ಭಾರತದ ಔಷಧ ನಿಯಂತ್ರಣ ಕಾರ್ಯಚೌಕಟ್ಟಿನಲ್ಲಿ ತ್ವರಿತ ಸುಧಾರಣೆ ಕೋರಿ ರೋಗಿಗಳಿಗೆ ಅತ್ಯುನ್ನತ ಗುಣಮಟ್ಟದ ಚಿಕಿತ್ಸೆಗಾಗಿ ಶ್ರಮಿಸುತ್ತಿರುವ ‘ಮೆಡಾಶ್ಯೂರ್ ಗ್ಲೋಬಲ್ ಕಾಂಪ್ಲಿಯನ್ಸ್ ಕಾರ್ಪೊರೇಷನ್’ನ ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ್ ಎಸ್.ಠಾಕೂರ್ ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಮಾರ್ಚ್ 11ರಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ರ್ಯಾನ್‌ಬಕ್ಸಿ ಪ್ರಕರಣದಲ್ಲಿ ರಹಸ್ಯವನ್ನು ಬಯಲುಗೊಳಿಸಿದ ಅನುಭವವು ಠಾಕೂರ್‌ಗೆ ಈ ಎರಡು ಪಿಐಎಲ್‌ಗಳನ್ನು ಸಲ್ಲಿಸಲು ಪ್ರೇರಣೆ ನೀಡಿತು. ರ್ಯಾನ್‌ಬಕ್ಸಿಯಲ್ಲಿ ಸುಳ್ಳು ದತ್ತಾಂಶಗಳ ಸೃಷ್ಟಿ ಹಾಗೂ ಇಬ್ಬಗೆಯ ಗುಣಮಟ್ಟದ ಉತ್ಪನ್ನಗಳ ತಯಾರಿಯಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದನ್ನು ಕಂಡು ರೋಸಿ ಹೋಗಿ ಅವರು ಕಂಪೆನಿಗೆ ರಾಜೀನಾಮೆ ನೀಡಿದ್ದರು. ಈ ಬಗ್ಗೆ ಅವರು ಅಮೆರಿಕದ ಆಹಾರ ಹಾಗೂ ಕಂಪೆನಿಯ ಕಾನೂನು ಉಲ್ಲಂಘನೆ ಕುರಿತು ಔಷಧ ಪ್ರಾಧಿಕಾರ (ಯುಎಸ್‌ಎಫ್‌ಡಿಎ)ಗೆ ದೂರು ಸಹ ನೀಡಿದ್ದರು. ರ್ಯಾನ್‌ಬಕ್ಸಿ ಕಂಪೆನಿಗೆ 500 ದಶಲಕ್ಷ ಡಾಲರ್‌ಗಳ ದಂಡವನ್ನು ವಿಧಿಸುವುದರೊಂದಿಗೆ ಪ್ರಕರಣವು ಕೊನೆಗೊಂಡಿತ್ತು. ಆ ನಂತರ ಇತರ ವಿದೇಶಿ ಕಂಪೆನಿಯ ಉತ್ಪನ್ನಗಳ ಬಗ್ಗೆ ತನ್ನ ಪರಿಶೀಲನೆಯನ್ನು ಯುಎಸ್‌ಎಫ್‌ಡಿಎ ಇನ್ನಷ್ಟು ತೀವ್ರಗೊಳಿಸಿತು. ಅಷ್ಟೇ ಅಲ್ಲ ಭಾರತದ ಫಾರ್ಮಾಸ್ಯೂಟಿಕಲ್ ಉದ್ಯಮದಲ್ಲಿ ಗುಣಮಟದ ಬಗ್ಗೆಯೂ ಈ ಪ್ರಕರಣವು ಹೆಚ್ಚಿನ ಬೆಳಕನ್ನು ಚೆಲ್ಲುವಂತೆ ಮಾಡಿತು.
   ದುರದೃಷ್ಟಕರವೆಂದರೆ, ಲಾಭದಾಯಕವಾದ ಪಾಶ್ಚಾತ್ಯ ಮಾರುಕಟ್ಟೆಗಳಿಗಾಗಿ ಔಷಧ ಉತ್ಪನ್ನಗಳನ್ನು ತಯಾರಿಸುವ ಘಟಕಗಳಲ್ಲಿ ಮಾತ್ರ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲಾಗುತ್ತದೆ. ಆದರೆ ಭಾರತ ಹಾಗೂ ಏಶ್ಯ ಹಾಗೂ ಆಫ್ರಿಕಗಳಲ್ಲಿರುವ ಬಡ ನೆರೆಹೊರೆಯ ರಾಷ್ಟ್ರಗಳಲ್ಲಿ ಸರಕಾರ ಅಥವಾ ಕಂಪೆನಿಗಳು ಔಷಧದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ವಿಶೇಷ ಕ್ರಮಗಳನ್ನು ತೆಗೆದುಕೊಂಡಿಲ್ಲ.
            
 ಕೆಳದರ್ಜೆಯ ಔಷಧಗಳು ಜನರ ಆರೋಗ್ಯದ ಮೇಲೆ ನಕಾರಾತ್ಮಕವಾದ ಪರಿಣಾಮಗಳನ್ನು ಉಂಟುಮಾಡುವುದೆಂಬುದನ್ನು ಭಾರತದ ಸಾಗರೋತ್ತರ ನಾಗರಿಕ (ಓಸಿಐ)ನಾದ ತನಗೆ ಮನದಟ್ಟಾಗಿದೆಯೆಂದು ದಿನೇಶ್ ಠಾಕೂರ್ ಹೇಳುತ್ತಾರೆ. ಈ ವಿಷಯಗಳ ಬಗ್ಗೆ ಗಮನಸೆಳೆಯಲು ಅವರು ಪ್ರಾರಂಭದಲ್ಲಿ ಸರಕಾರವನ್ನು ಸಂಪರ್ಕಿಸಲು ಯತ್ನಿಸಿದ್ದರು. 2014ರಲ್ಲಿ ಆಗಿನ ಆರೋಗ್ಯ ಸಚಿವರನ್ನು ಕೂಡಾ ಭೇಟಿಯಾಗಿದ್ದರು. ಆದರೆ ಠಾಕೂರ್‌ರ ಪ್ರಸ್ತಾಪಗಳ ಬಗ್ಗೆ ಅವರು ಅಸಕ್ತಿ ವಹಿಸಿದಂತೆ ಕಾಣಲಿಲ್ಲ. ಆ ಬಳಿಕ ಠಾಕೂರ್ ಮುಂದಿನ ಎರಡು ವರ್ಷಗಳನ್ನು ಆರೋಗ್ಯ ಸಚಿವಾಲಯದ ನಿವೃತ್ತ ಹಾಗೂ ಸೇವಾನಿರತ ಹಿರಿಯ ಅಧಿಕಾರಿಗಳ ಭೇಟಿಯಲ್ಲೇ ಸಮಯ ಕಳೆದರು. ಔಷಧ ಕ್ಷೇತ್ರದಲ್ಲಿ ಸುಧಾರಣೆಯ ತುರ್ತು ಅಗತ್ಯವಿದೆಯೆಂಬುದನ್ನು ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಲು ಯತ್ನಿಸಿದರು. ಫಾರ್ಮಾಸ್ಯೂಟಿಕಲ್ ಉದ್ಯಮವು ರಾಜಕೀಯವಾಗಿ ಅತ್ಯಂತ ಬಲಿಷ್ಠವಾದುದು ಹಾಗೂ ಅದು ಸರಕಾರವು ಉಪಕ್ರಮಿಸಿದ ಸುಧಾರಣೆಗಳನ್ನು ತಡೆಗಟ್ಟಲು ತನ್ನ ಪ್ರಭಾವವನ್ನು ಬಳಸಿಕೊಳ್ಳುತ್ತಿತ್ತು. ಕೊನೆಗೆ ಅವರು ಬೇರೆ ದಾರಿಕಾಣದೆ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲು ನಿರ್ಧರಿಸಿದರು. ಕಳೆದ ಕೆಲವು ತಿಂಗಳುಗಳಲ್ಲಿ ಠಾಕೂರ್ ಹಾಗೂ ಅವರ ನ್ಯಾಯವಾದಿಗಳ ತಂಡವು ಅಸಂಖ್ಯ ಸರಕಾರಿ ದಾಖಲೆಗಳನ್ನು ಪರಿಶೀಲಿಸಿತು. 125ಕ್ಕೂ ಅಧಿಕ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದರು. ಇದರ ಜೊತೆಗೆ ವಿವಿಧ ರಾಜ್ಯಗಳ ಇಲಾಖೆಗಳು 1940ರ ಔಷಧ ಹಾಗೂ ಪ್ರಸಾಧನ ಕಾಯ್ದೆಯನ್ನು ಅನುಷ್ಠಾನಗೊಳಿಸಿರುವ ವಿಧಾನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದರು.
    ಭಾರತದಲ್ಲಿ ಕೆಳದರ್ಜೆಯ ಔಷಧಗಳು ಗಣನೀಯ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ಅವರಿಗೆ ಸ್ಪಷ್ಟವಾಗಿ ಆರಿವಾಯಿತು. ತಾವು ಅಪಾಯದ ಕರೆಗಂಟೆಯೆಂದು ಯಾವುದನ್ನು ಪತ್ತೆಹಚ್ಚಿದೆವೊ ಅದು ಊಹಿಸಿದ್ದಕ್ಕಿಂತಲೂ ಹೆಚ್ಚು ಭಯಾನಕವಾಗಿದೆಯೆಂದು ಠಾಕೂರ್‌ಗೆ ಈಗ ಮನದಟ್ಟಾಯಿತು. ಆನಂತರ ಪ್ರಕಟವಾದ ಕಂಪ್ಟ್ರೋಲರ್ ಹಾಗೂ ಆಡಿಟರ್ ಜನರಲ್ (ಸಿಎಜಿ) ಅವರ ವರದಿಗಳು, ಕೇಂದ್ರ ಸರಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಕಾರ್ಯಕ್ರಮಗಳಲ್ಲಿ ಹಾಗೂ ರೈಲ್ವೆ ಆಸ್ಪತ್ರೆಗಳು ಹಾಗೂ ಸಶಸ್ತ್ರ ಪಡೆಗಳ ವೈದ್ಯಕೀಯ ಮಳಿಗೆಗಳ ಡಿಪೋ (ಎಎಫ್‌ಎಂಎಸ್‌ಡಿ)ದಂತಹ ಸ್ಥಳಗಳಲ್ಲಿ ಅಪಾಯಕಾರಿಯಾದ ಪ್ರಮಾಣದಲ್ಲಿ ಕೆಳದರ್ಜೆಯ ಔಷಧಗಳನ್ನು ಪೂರೈಸಲಾಗುತ್ತಿರುವುದನ್ನು ಬಯಲಿಗೆಳೆದವು. ಸಶಸ್ತ್ರ ಪಡೆಗಳು ಹಾಗೂ ಅವರ ಕುಟುಂಬಗಳಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುವ ಎಎಫ್‌ಎಂಎಸ್‌ಡಿ ಒಂದು ವರ್ಷದಲ್ಲಿ ಶೇ.32ರಷ್ಟು ಕೆಳದರ್ಜೆಯ ಔಷಧಗಳನ್ನು ಖರೀದಿಸಿರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿತು.
  2013ರಲ್ಲಿ ನೇಮಕಗೊಂಡ ಡಾ. ರಂಜಿತ್ ರಾಯ್ ನೇತೃತ್ವದ ತಜ್ಞ ಸಮಿತಿಯು ಎಲ್ಲಾ ಜೆನೆರಿಕ್ ಔಷಧಗಳ ಮೂಲಭೂತ ಗುಣಮಟ್ಟವನ್ನು ಪರೀಕ್ಷಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ ಔಷಧ ಸಮಾಲೋಚನಾ ಪ್ರಾಧಿಕಾರ(ಡಿಸಿಸಿ)ವು, ಭಾರತದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣ ನೀಡಿ ಈ ಶಿಫಾರಸನ್ನು ತಿರಸ್ಕರಿಸಿತ್ತು.
   ಬೇರೆ ಬೇರೆ ರಾಜ್ಯಗಳಲ್ಲಿ ಔಷಧ ಇನ್‌ಸ್ಪೆಕ್ಟರ್‌ಗಳು ಔಷಧಗಳ ಗುಣಮಟ್ಟದ ಬಗ್ಗೆ ನಡೆಸುವ ತನಿಖೆಗಳು ಕೇವಲ ಕಣ್ಣೊರೆಸುವ ತಂತ್ರವಲ್ಲದೆ ಬೇರೇನೂ ಅಲ್ಲವೆಂದು ಠಾಕೂರ್ ಮತ್ತವರ ತಂಡಕ್ಕೆ ಮನವರಿಕೆಯಾಯಿತು. ಯಾಕೆಂದರೆ ಔಷಧ ಇನ್‌ಸ್ಪೆಕ್ಟರ್‌ಗಳು ವಿವಿಧ ರಾಜ್ಯಗಳಲ್ಲಿ ತಮ್ಮ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಅಗತ್ಯ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ ಔಷಧ ತಯಾರಕ ಘಟಕಗಳು ಉತ್ತರಖಂಡ ಅಥವಾ ಹಿಮಾಚಲಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅವು ತಯಾರಿಸಿದ ಕೆಳದರ್ಜೆಯ ಉತ್ಪನ್ನಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಮಾರಾಟವಾಗುತ್ತವೆ. ಆದರೆ ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಲೇರುವುದು ತೀರಾ ಅಪರೂಪ. ಈ ಪ್ರಕರಣಗಳ ವಿಚಾರಣೆ ನಡೆದರೂ, ನ್ಯಾಯಾಧೀಶರು ತಪ್ಪಿತಸ್ಥರಿಗೆ ಕಡ್ಡಾಯವಾಗಿ ವಿಧಿಸಬೇಕಾಗಿರುವ ಒಂದು ವರ್ಷದ ಜೈಲು ಶಿಕ್ಷೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾರೆ. ಲಕ್ಷಾಂತರ ಹಾಗೂ ಕೋಟ್ಯಂತರ ರೂ. ವೌಲ್ಯದ ಉತ್ಪನ್ನಗಳಿಗೆ ಕೇವಲ ಐದು ಅಂಕಿಯ ಹಣಕಾಸು ದಂಡವನ್ನು ವಿಧಿಸಲಾಗುತ್ತದೆ.

 ಔಷಧ ಇನ್‌ಸ್ಪೆಕ್ಟರ್‌ಗಳಿಗೆ ಉನ್ನತ ಸ್ಥಾನಮಾನ ನೀಡಿರುವ ತಮಿಳುನಾಡಿನಂತಹ ರಾಜ್ಯಗಳು ಕೂಡಾ ಹಿಮಾಚಲ ಪ್ರದೇಶ ಅಥವಾ ಉತ್ತರಾಖಂಡದಿಂದ ಹರಿದುಬರುವ ಕೆಳದರ್ಜೆಯ ಔಷಧಗಳ ಪ್ರವಾಹವನ್ನು ತಡೆಗಟ್ಟಲು ವಿಫಲವಾಗಿವೆ. ಯಾಕೆಂದರೆ ತಪ್ಪಿತಸ್ಥ ಔಷಧ ಉತ್ಪಾದಕರ ಲೈಸೆನ್ಸ್‌ಗಳನ್ನು ಆಯಾ ರಾಜ್ಯಗಳ ಸರಕಾರಗಳು ಮಾತ್ರವೇ ರದ್ದುಪಡಿಸಬಹುದಾಗಿದೆ. 1955ರ ಆರಂಭದಲ್ಲಿ ಸ್ಥಾಪನೆಯಾದ ತಜ್ಞರ ಸಮಿತಿಯು ಔಷಧ ಉತ್ಪಾದಕ ಕಂಪೆನಿಗಳಿಗೆ ಪರವಾನಿಗೆ ನೀಡುವುದನ್ನು ಕೇಂದ್ರೀಕೃತಗೊಳಿಸಬೇಕೆಂದು ಪದೇಪದೇ ಶಿಫಾರಸು ಮಾಡಿತ್ತು. 2007 ಹಾಗೂ 2013ರಲ್ಲಿ ಈ ನಿಟ್ಟಿನಲ್ಲಿ ಸಂಸತ್‌ನಲ್ಲಿ ವಿಧೇಯಕವನ್ನು ಮಂಡಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಭಾರತೀಯ ಬಲಿಷ್ಠ ಫಾರ್ಮಾಸ್ಯೂಟಿಕಲ್ ಉದ್ಯಮ ಲಾಬಿಯು ಈ ಪ್ರಯತ್ನಗಳನ್ನು ವಿಫಲಗೊಳಿಸಿತು.
ಕಳಪೆ ದರ್ಜೆಯ ಔಷಧಗಳು ರೋಗಗಳನ್ನು ಗುಣಪಡಿಸಲು ವಿಫಲವಾಗಿರುವ ಜೊತೆಗೆ ದೇಹದ ಪ್ರತಿರೋಧ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಮತ್ತು ಮಾರಣಾಂತಿಕ ವೈರಸ್‌ಗಳ ಹುಟ್ಟಿಗೆ ಕಾರಣವಾಗುತ್ತವೆ. ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಬಡವರು ಹಾಗೂ ದುರ್ಬಲರ ಆರೋಗ್ಯದ ಮೇಲೆ ಅವು ದೀರ್ಘಾವಧಿಯ ಪರಿಣಾಮಗಳನ್ನು ಉಂಟು ಮಾಡುತ್ತವೆ.
 ಕಳಪೆ ದರ್ಜೆಯ ಔಷಧಗಳು ನಮ್ಮ ಕುಟುಂಬ,ಸ್ನೇಹಿತರು ಹಾಗೂ ಸಹನಾಗರಿಕರ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮ ಬೀರುವುದನ್ನು ಗಮನದಲ್ಲಿಟ್ಟುಕೊಂಡು ತಾನು ನ್ಯಾಯಕ್ಕಾಗಿ ಸರಕಾರ ಹಾಗೂ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದೆ. ದುರದೃಷ್ಟವಶಾತ್ ಗೌರವಾನ್ವಿತ ನ್ಯಾಯಾಲಯವು ನನ್ನ ಮನವಿಯನ್ನು ಆಲಿಸಲು ನಿರಾಕರಿಸಿದೆ. ಈ ನಿಷ್ಕ್ರಿಯ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಲು ಈಗ ನಾನು ಯಾರ ಬಳಿಗೆ ಹೋಗಲಿ ಎಂದು ದಿನೇಶ್ ಠಾಕೂರ್‌ಹತಾಶರಾಗಿ ಪ್ರಶ್ನಿಸುತ್ತಾರೆ.

share
ರಾ.ನಾ.
ರಾ.ನಾ.
Next Story
X