ಭಾರತದಲ್ಲಿ ಹೂಡಿಕೆಗೆ ಅರಾಮ್ಕೊ ಆಸಕ್ತಿ
ರಿಯಾದ್, ಎ.3: ಸೌದಿಯಲ್ಲಿ ಕಾರ್ಯಾಚರಿಸುತ್ತಿರುವ ತೈಲೋದ್ಯಮ ಸಂಸ್ಥೆ ಅರಾಮ್ಕೆ ಭಾರತದ ಪೆಟ್ರೋಲಿಯಂ ವಲಯದಲ್ಲಿ ಬೃಹತ್ ಹೂಡಿಕೆಯನ್ನು ಮಾಡುವ ಯೋಜನೆಯನ್ನು ಹೊಂದಿದೆ. ಜಾಗತಿಕ ಆರ್ಥಿಕತೆಯು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಹೂಡಿಕೆಗೆ ಭಾರತವು ಅತ್ಯುತ್ತಮ ಸ್ಥಳವೆಂದು ಜಗತ್ತಿನ ಬೃಹತ್ ತೈಲೋದ್ಯಮ ಸಂಸ್ಥೆಗಳಲ್ಲಿ ಒಂದಾದ ಅರಾಮ್ಕೊ ಭಾವಿಸಿದೆ.ಅರಾ ಖಾಲಿದ್ ಎ.ಎಲ್ ಫಲೀಹ್ ರವಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ,ಸರಕಾರಿ ಸ್ವಾಮ್ಯದ ಈ ಸಂಸ್ಥೆಯು ಭಾರತವು ಅತ್ಯಂತ ಸೂಕ್ತವಾದ ಹೂಡಿಕೆ ತಾಣವೆಂದು ಪರಿಗಣಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
Next Story





