ಯೆನೆಪೊಯ ಡೆಂಟಲ್ ಕಾಲೇಜಿನಲ್ಲಿ ಕಾರ್ಯಾಗಾರ
ಮಂಗಳೂರು, ಎ.3: ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಓರಲ್ ಮ್ಯಾಕ್ಸಿಲೋ ಫೇಶಿಯಲ್ ವಿಭಾಗವು ಯೆನೆಪೊಯ ವಿವಿ ಜೊತೆ ಗೂಡಿ ‘ವ್ಯಾಸ್ಕುಲರ್ ಅನೋಮಲೀಸ್ ಆಫ್ ದ ಹೆಡ್ ಆ್ಯಂಡ್ ನೆಕ್’ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ದೇರಳಕಟ್ಟೆಯ ಯೆನೆಪೊಯ ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿತ್ತು.
ಯೆನೆಪೊಯ ವಿಶ್ವವಿದ್ಯಾನಿಲಯ ವಿತ್ತ ನಿರ್ದೇಶಕ ಫರ್ಹಾದ್ ಯೆನೆಪೊಯ ಕಾರ್ಯಕ್ರಮ ಉದ್ಘಾ ಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಗೋಸ್ಲಾ ಶ್ರೀನಿವಾಸ್ ರೆಡ್ಡಿ ಹಾಗೂ ಡಾ.ಸಂಜೀವ್ ನಾಯರ್ ಉಪನ್ಯಾಸ ನೀಡಿದರು. ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್.ಶ್ರೀಪತಿ ರಾವ್ ಸ್ವಾಗತಿಸಿದರು. ಡಾ.ಜೋಯ್ಸಾ ಸಿಕ್ವೇರ ವಂದಿಸಿದರು. ಕಾರ್ಯಾಗಾರದಲ್ಲಿ 150ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.
Next Story