ನವಜಾತ ಹೆಣ್ಣು ಶಿಶುವಿನ ಶವ ಪತ್ತೆ
ಪಡುಬಿದ್ರೆ, ಎ.3: ಹೆಜಮಾಡಿ ಗ್ರಾಮದ ಶಾಂಭವಿ ಸೇತುವೆ ಬಳಿ ನೀರಿನ ದಡದಲ್ಲಿ ನವಜಾತ ಹೆಣ್ಣು ಶಿಶುವೊಂದರ ಮೃತದೇಹ ಇಂದು ಪೂರ್ವಾಹ್ನ 11ಗಂಟೆ ಸುಮಾರಿಗೆ ಪತ್ತೆಯಾಗಿದೆ.
ಶಿಶುವಿನ ದೇಹದ ಅಲ್ಲಲ್ಲಿ ಗಾಯವಿರುವುದು ಕಂಡು ಬಂದಿದೆ. ಶಿಶುವಿನ ಜನನವನ್ನು ಮರೆಮಾಚುವ ಉದ್ದೇಶದಿಂದ ದುಷ್ಕರ್ಮಿಗಳು ಮಗುವಿನ ಮೃತದೇಹವನ್ನು ಸುಮಾರು 3 ಗಂಟೆಗಳ ಹಿಂದೆ ಶಾಂಭವಿ ನದಿಯ ನೀರಿಗೆ ಎಸೆದಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story