ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಕಾಸರಗೋಡು, ಎ.3: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಶಾಂತಿಪಲ್ಲದ ಕೆ.ಎಸ್. ಮನೋಜ್ ಕುಮಾರ್(24) ಬಂಧಿತ ಆರೋಪಿ.
2014ರಲ್ಲಿ ಘಟನೆ ನಡೆದಿದ್ದು, ಚೆರ್ಕಳದಲ್ಲಿ ಜೆಸಿಬಿ ಮೆಕ್ಯಾನಿಕ್ ಆಗಿದ್ದ ಮನೋಜ್ ಕುಮಾರ್ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿದ್ದ. ಈ ಕುರಿತು ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
Next Story