ಉಪ್ಪಿನಂಗಡಿ : ಟೆಂಪೋ ಪಲ್ಟಿ: ಶಾಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರು
ಉಪ್ಪಿನಂಗಡಿ : ಇಲ್ಲಿನ ನಟ್ಟಿಬೈಲು ಎಂಬಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಟೆಂಪೋವೊಂದು ಚಾಲಕನ ನಿಯಂತ್ರಣಕ್ಕೆ ಸಿಗದೇ ಹಿಮ್ಮುಖ ಚಲಿಸಿ ಮಗುಚಿ ಬಿದ್ದ ಘಟನೆಯಲ್ಲಿ ವಿದ್ಯಾರ್ಥಿಗಳು ಪವಾಡ ಸದೃಶ್ಯ ಅಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ. ಸ್ಥಳೀಯ ಶಾಲೆಯೊಂದರಲ್ಲಿ ನಡೆಯುತ್ತಿದ್ದ ಭಜನಾ ಶಿಬಿರಕ್ಕೆ ವಿದ್ಯಾರ್ಥಿಗಳನ್ನು ಕರೆ ತರುತ್ತಿದ್ದ ಟೆಂಪೋ, ಚಾಲಕನ ನಿಯಂತ್ರಣಕ್ಕೆ ಸಿಗದೇ ಮಗುಚಿ ಬಿತ್ತು. ಈ ಪರಿಣಾಮ ಟೆಂಪೋದಲ್ಲಿದ್ದ್ದ ವಿದ್ಯಾರ್ಥಿಗಳು ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಭವಿಸಿದಾಕ್ಷಣ ಸ್ಥಳೀಯರು ಅಪಘಾತಕ್ಕೀಡಾದ ಟೆಂಪೋದಿಂದ ವಿದ್ಯಾರ್ಥಿಗಳನ್ನು ಹೊರ ತೆಗೆದು ರಕ್ಷಿಸುವಲ್ಲಿ ಸಹಕರಿಸಿದರು. ಘಟನೆಯಿಂದ ಸಣ್ಣ ಪ್ರಮಾಣದ ಗಾಯವನ್ನು ಪಡೆದ ಸುಪ್ರಿಯಾ, ರೂಪರ್ಶಿ, ರಿತೇಶ್, ಸುಜಿತ್ , ಹಾಗೂ ಸೂರಜ್ ಎಂಬವರಿಗೆ ಸ್ಥ್ಗಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Next Story