Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ HD...

ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ HD video ನೋಡಿ. ಅದೂ ಉಚಿತವಾಗಿ !

ವಾರ್ತಾಭಾರತಿವಾರ್ತಾಭಾರತಿ5 April 2016 10:59 AM IST
share
ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ HD video ನೋಡಿ. ಅದೂ ಉಚಿತವಾಗಿ !

ಬೇರೆಯವರಿಗಿಂತ ವಿಭಿನ್ನವಾಗಿ ಯೋಚಿಸುವುದು ಯಶಸ್ಸಿನ ಮೂಲಸೂತ್ರ. ಇಬ್ಬರು ಯುವ ಉದ್ಯಮಿಗಳು ಇದನ್ನು ಅಕ್ಷರಶಃ ಪಾಲಿಸಿದ್ದಾರೆ.

ಆನಂದ್ ಸಿನ್ಹಾ (28) ಹಾಗೂ ಜಾರ್ಜ್ ಅಬ್ರಹಾಂ (27) ಎಂಬ ಯುವಕರಿಬ್ಬರು, ಪ್ರೆಸ್‌ಪ್ಲೇ ಉಚಿತ ವಿಡಿಯೊ ತುಣುಕುಗಳನ್ನು ಭಾರತದ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ನೀಡುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.


ಬೇರೆ ಬೇರೆ ಕಡೆಗಳಲ್ಲಿ ಬ್ರಾಡ್‌ಬ್ಯಾಂಡ್ ವೇಗದಲ್ಲಿ ನಿರಂತರತೆ ಇರುವುದಿಲ್ಲ; ಈ ಸಮಸ್ಯೆಗೂ ಪ್ರೆಸ್‌ಪ್ಲೇಯಲ್ಲಿ ಉತ್ತರವಿದೆ. ಬಸ್, ರೈಲು, ರೈಲ್ವೆ ಪ್ಲಾಟ್‌ಫಾರಂ, ಹೋಟೆಲ್, ಆಸ್ಪತ್ರೆ, ವಾಹನದಟ್ಟಣೆ ಜಾಗಗಳಲ್ಲಿ ವೈರ್‌ಲೆಸ್ ಹಾಟ್‌ಸ್ಪಾಟ್‌ಗಳನ್ನು ಇದು ಸಜ್ಜಾಗಿಸಿದೆ. ಇದರ ಜತೆಗೆ ಗುಣಮಟ್ಟದ ವಿಡಿಯೊ ತುಣುಕನ್ನು ರವಾನಿಸಲು ಅಗತ್ಯ 3ಜಿ/4ಜಿ ಆನ್‌ಲೈನ್ ಸ್ಟ್ರೀಮಿಂಗ್ ವ್ಯವಸ್ಥೆಯನ್ನೂ ಹೊಂದಿದೆ ಎಂದು ಪ್ರೆಸ್‌ಪ್ಲೇ ಸಹ ಸಂಸ್ಥಾಪಕ ಹಾಗೂ ಸಿಇಓ ಆನಂದ್ ವಿವರಿಸುತ್ತಾರೆ.

ಈ ಕ್ಷಿಪ್ರ ಬೆಳವಣಿಗೆಯ ಸ್ಟಾರ್ಟಪ್ ಕಂಪನಿ ಈಗಾಗಲೇ 22 ಲಕ್ಷ ಡಾಲರ್ ಬೀಜಧನವನ್ನು ಕ್ರೋಢೀಕರಿಸಿದೆ.

ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಗುಣಮಟ್ಟದ ವಿಡಿಯೊ ರವಾನೆಗೆ ಅವಕಾಶ ಇರಬೇಕು ಎಂಬ ಯೋಚನೆ ಕುಡಿಯೊಡೆದದ್ದು ಆನಂದ್ ಮನಸ್ಸಿನಲ್ಲಿ. ಬಸ್ ಅಥವಾ ರೈಲಿನಲ್ಲಿ ಸುಧೀರ್ಘ ಪ್ರಯಾಣದ ವೇಳೆ, ಕಕ್ಷಿದಾರರಿಗೆ ಕಾಯುವ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಇದು ಅವಕಾಶ ಒದಗಿಸಿದೆ.

ಅಂತರರಾಜ್ಯ ನಡುವಿನ ರಾತ್ರಿ ಪ್ರಯಾಣದ ವೇಳೆ ಟ್ಯಾಬ್ಲೆಟ್ ಸಿಕ್ಕಿದಾಗ ಇದನ್ನು ವ್ಯಾಪಾರ ಮಾದರಿಯಾಗಿ ಅಭಿವೃದ್ಧಿಪಡಿಸಿದರೆ ಹೇಗೆ ಎಂಬ ಯೋಚನೆ 2014ರ ಆಗಸ್ಟ್‌ನಲ್ಲಿ ಬಂತು.


 ಕಾಲೇಜಿನ ಸ್ನೇಹಿತ ಅಬ್ರಹಾಂ ಜತೆ ಸೇರಿಕೊಂಡು ಪ್ರೆಸ್‌ಪ್ಲೇ ಟಿವಿ ಆರಂಭಿಸಿಯೇ ಬಿಟ್ಟರು. ತಲಾ 6,000 ರೂಪಾಯಿ ಬೆಲೆಯ 1,000 ಟ್ಯಾಬ್ಲೆಟ್‌ಗಳನ್ನು ಖರೀದಿಸಿ, ವಿಡಿಯೊ ಹಾಗೂ ಚಲನಚಿತ್ರಗಳನ್ನು ಲೋಡ್ ಮಾಡಿದರು.

ಅಂತರರಾಜ್ಯ ಪ್ರಯಾಣಿಕರಿಗೆ ಬಾಡಿಗೆಗೆ ನೀಡಿದರು. ದೇಶದ ಎಲ್ಲೆಡೆಗೆ ಇದನ್ನು ವಿಸ್ತರಿಸಿದರು. 100 ರೂಪಾಯಿ ಬಾಡಿಗೆಗೆ 60 ಮಂದಿ ಬಾಡಿಗೆಗೆ ಪಡೆದಾಗ ಮಾಡಿದ ವೆಚ್ಚದಷ್ಟು ಆದಾಯ ದೊರಕಿತು. ಆದರೆ ಅದನ್ನು ವ್ಯವಸ್ಥಿತವಾಗಿ ಮಾಡುವ ಯೋಚನೆಯಲ್ಲಿದ್ದಾಗ ಹೊಳೆದದ್ದು ಹಾಟ್‌ಸ್ಪಾಟ್ ಐಡಿಯಾ. ಎಲ್ಲ ಹವಾನಿಯಂತ್ರಿತ ಬಸ್ಸುಗಳಲ್ಲಿ ಪ್ರೆಸ್‌ಪ್ಲೇ ಟಿವಿ ಹಾಟ್‌ಸ್ಪಾಟ್ ಅಳವಡಿಸಿದರು. ಇದನ್ನು ಇತರ ಕಡೆಗಳಿಗೂ ವಿಸ್ತರಿಸಿ, ಲಕ್ಷಾಂತರ ಮಂದಿ ಈ ಸೌಲಭ್ಯ ಪಡೆಯುವಂತೆ ಅನುಕೂಲ ಮಾಡಿಕೊಡಲಾಯಿತು.

ವೈಫೈ ಮೂಲಕ ವಿತರಿಸುವ ವಿಡಿಯೊಗಳು ಸಂಪೂರ್ಣ ಉಚಿತ. ಆದರೆ ಇದು ಅತ್ಯುತ್ತಮ ಜಾಹೀರಾತು ವೇದಿಕೆಯಾಗಿ ಬೆಳೆದಿದೆ. ಇದೀಗ ದೊಡ್ಡ ಪ್ರಮಾಣದ ಜಾಹೀರಾತು ಆದಾಯ ಬರಲಾರಂಭಿಸಿದೆ. ಇದು ದೇಶದ ವಿಡಿಯೊ ತುಣುಕು ವಿತರಣಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X