21 ಗುಂಡೇಟು ತಿಂದು ಮೃತಪಟ್ಟ ತಂಝೀಲ್ ಹುತಾತ್ಮನಲ್ಲವೇ ?
ಎನ್.ಐ.ಎ. ಅಧಿಕಾರಿಗೆ ಅಂತಿಮ ನಮನ ಸಲ್ಲಿಸಲು ಬರಲಿಲ್ಲ ಕೇಂದ್ರ ಸರಕಾರದ ಪ್ರತಿನಿಧಿ

ನವದೆಹಲಿ : ಎಪ್ರಿಲ್ 3ರ ಮಧ್ಯರಾತ್ರಿ ತಮ್ಮ ಕುಟುಂಬದೊಂದಿಗೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗಆಗಂತುಕರ ಗುಂಡಿಗೆ ಬಲಿಯಾದ ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿ ಮೊಹಮ್ಮದ್ ತಂಝೀಲ್ ಅಹಮದ್ ಅವರ ಅಂತ್ಯಕ್ರಿಯೆ ಸೋಮವಾರಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದರೆ ಅವರಿಗೆ ಅಂತಿಮ ನಮನ ಸಲ್ಲಿಸಲು ಕೇಂದ್ರ ಸರಕಾರದ ಯಾವುದೇ ಸಚಿವ ಅಥವಾ ಪ್ರತಿನಿಧಿ ಆಗಮಿಸದೇ ಇರುವುದು ಮೃತ ಅಧಿಕಾರಿಯ ಕುಟುಂಬ ವರ್ಗ, ಹಿತೈಷಿಗಳು ಹಾಗೂ ಸ್ನೇಹಿತರಲ್ಲಿ ಆಕ್ರೋಶ ಮೂಡಿಸಿದೆಯೆಂದು ಸಬ್ರಂಗ್ ಇಂಡಿಯಾ ವರದಿ ಮಾಡಿದೆ. ರಾಜಕೀಯ ನೇತಾರರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬರೇ ತಂಝೀಲ್ ಅಂತ್ಯಕ್ರಿಯೆಗೆ ಆಗಮಿಸಿದವರು.
ತಂಝಿಲ್ ಅಹಮದ್ ಅವರ ದೇಹದೊಳಗೆ 21 ಬುಲೆಟುಗಳು ಹೊಕ್ಕಿದ್ದರೆ ಈ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಅವರ ಪತ್ನಿ ನೊಯಿಡಾದ ಆಸ್ಪತ್ರೆಯೊಂದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಪಠಾಣ್ ಕೋಟ್ ಉಗ್ರ ದಾಳಿ, ಸಂಝೋತಾ ಎಕ್ಸ್‌ಪ್ರೆಸ್ ದಾಳಿ ಮುಂತಾದ ಪ್ರಕರಣಗಳ ವಿಚಾರಣೆಯಲ್ಲಿ ಹಾಗೂ ಐಎಂ ಮುಖ್ಯಸ್ಥ ಯಾಸೀನ್ ಭಟ್ಕಳ್ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಹಮದ್ ಅವರ ಮೇಲಿನ ಮಾರಣಾಂತಿಕ ದಾಳಿಯ ಹಿಂದೆ ಉಗ್ರ ಕೃತ್ಯವನ್ನು ತನಿಖಾ ಏಜನ್ಸಿಗಳು ತಳ್ಳಿ ಹಾಕಿಲ್ಲ.
ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರೀಯ ತನಿಖಾ ದಳ, ಪೊಲೀಸ್ ಇಲಾಖೆ ಹಾಗೂ ಬಿಎಸ್‌ಎಫ್ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರೆ,. ಅವರ ದೇಹದ ಮೇಲೆ ಹೊದಿಸಿದ ತ್ರಿವರ್ಣ ಧ್ವಜವು ಅಧಿಕಾರಿಯನ್ನು ಹುತಾತ್ಮನೆಂದು ಗುರುತಿಸಲಾಗಿದೆಯೆಂದು ಹೇಳುತ್ತಿತ್ತು.
ಆದರೂ ಅಲ್ಲಿ ಕೇಂದ್ರ ಸರಕಾರದ ಯಾವುದೇ ಪ್ರತಿನಿಧಿ ಇರದಿದ್ದುದು ತಂಝಿಲ್ ಅಹಮದ್ ಅವರ ಹಿತೈಷಿಗಳನ್ನು ಕೆರಳಿಸಿತ್ತು. ‘‘ಅವರಿಗೆ ತಂಝಿಲ್ ಅವರನ್ನು ಹುತಾತ್ಮರೆಂದು ಪರಿಗಣಿಸುವುದು ಬೇಕಿಲ್ಲ,’’ ಎಂದು ಅಲ್ಲಿದ್ದ ಕುಟುಂಬ ಸದಸ್ಯರೊಬ್ಬರು ಆಕ್ರೋಶಭರಿತರಾಗಿ ನುಡಿದರು.
ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಆವರಣದಲ್ಲೇಕೆ ಅಹಮದ್ ಅವರ ಅಂತ್ಯಕ್ರಿಯೆ ನಡೆಸಲಾಯಿತೆಂಬ ಪ್ರಶ್ನೆ ಏಳಬಹುದು. ಅವರು ಇದೇ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು ಹಾಗೂ ಇದೇ ಸಂಸ್ಥೆಯನ್ನು ಈಗಿನ ಪ್ರಧಾನಿ ಸೆಪ್ಟೆಂಬರ್ 2008ರ ಬಟ್ಲಾ ಹೌಸ್ ಎನ್‌ಕೌಂಟರ್ ನಂತರ ತೆಗಳುತ್ತಾ ಈ ವಿಶ್ವವಿದ್ಯಾಲಯವನ್ನು ಸರಕಾರಿ ಹಣದಿಂದ ನಡೆಸಲಾಗುತ್ತಿದೆಯಾದರೂಅದು ‘ಉಗ್ರರನ್ನು ಜೈಲಿನಿಂದ ಹೊರ ತರಲುವಕೀಲರಿಗೆ ಹಣ ಸುರಿಯಲು ತಯಾರಿದೆ,’’ಎಂದುಹೇಳಿದ್ದರು. ಇದೇ ಮಾತನ್ನು ಮತ್ತೊಮ್ಮೆಚುನಾವಣಾ ಪೂರ್ವ ಫೆಬ್ರವರಿ 2014ರಲ್ಲಿ ಪುನರುಚ್ಛರಿಸಿದ್ದರು.
ಉಗ್ರವಾದವನ್ನುಪೋಷಿಸುತ್ತಿದೆಯೆಂದು ಆಪಾದಿಸಲ್ಪಟ್ಟ ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ತಂಝಿಲ್ ಅಹಮದ್ ಉಗ್ರರ ವಿರುದ್ಧ ಸಮರವನ್ನೇ ಸಾರಿದ್ದರು. ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಜಾಲವೊಂದನ್ನು ಪತ್ತೆ ಹಚ್ಚಿ ಹಲವರ ಬಂಧನಕ್ಕೂ ತಂಝಿಲ್ ಕಾರಣರಾಗಿದ್ದರೆಂದು ಹೇಳಲಾಗುತ್ತಿದೆ.
ತಂಝಿಲ್ ಅವರ ಅಂತ್ಯಕ್ರಿಯೆ ವಿಶ್ವವಿದ್ಯಾಲಯದ ಹಾಸ್ಟೆಲ್‌ನ ಹಿಂದುಗಡೆಯಿರುವ ಪ್ರದೇಶದಲ್ಲಿ ನಡೆಸಲಾಗಿದೆ. ವಿದ್ಯಾರ್ಥಿಯಾಗಿದ್ದಾಗ ಇದೇ ಹಾಸ್ಟೆಲ್ಲಿನಲ್ಲಿ ಅವರು ಕಾಲ ಕಳೆದಿದ್ದರು. ಅವರ ಅಂತ್ಯ ಕ್ರಿಯೆ ಸಕಲ ಸರಕಾರಿ ಮರ್ಯಾದೆಯೊಂದಿಗೆ ನಡೆದಿದೆ. ಆದರೆ ಸರಕಾರ ಹಾಗೂ ಆಡಳಿತ ಈ ಅಧಿಕಾರಿ ದೇಶಕ್ಕಾಗಿ ಸಲ್ಲಿಸಿದ ಅಭೂತಪೂರ್ವ ಸೇವೆಯನ್ನು ಮರೆತೇ ಬಿಟ್ಟಿದೆಯೇನೋ ಎಂಬಂತೆ ಆ ಸಮಾರಂಭದಲ್ಲಿ ಒಬ್ಬನೇ ಒಬ್ಬ ಸರಕಾರಿ ಅಧಿಕಾರಿಯ ಸುಳಿವಿರಲಿಲ್ಲ.







