ಕಿನ್ನಿಗೋಳಿ : ಯುವಶಕ್ತಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ - ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ, ಎ.4: ಯುವಶಕ್ತಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ,ಯುವ ಜನಾಂಗ ದುಶ್ಟಟಗಳಿಂದ ದೂರವಿದ್ದು ರಾಜಕೀಯ ಮರೆತು ಸಮಾಜದ ಗ್ರಾಮದ ಅಭಿವೃದ್ಧಿಗೆ ದುಡಿಯಬೇಕು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ಇದರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾ. ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟು ಅನನ್ಯ ಉಲ್ಲಂಜೆ ಅವರನ್ನು ಗೌರವಿಸಲಾಯಿತು ಹಾಗೂ ಇಬ್ಬರು ಅನಾರೋಗ್ಯ ಬಳುತ್ತಿರುವ ಕುಟುಂಬಕ್ಕೆ ಆರೋಗ್ಯ ವೆಚ್ಚಕ್ಕೆ ಅರ್ಥಿಕ ಸಹಾಯ ನೀಡಲಾಯಿತು. ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣದಾಸ ಆಸ್ರಣ್ಣ , ಅದಾನಿ ಗ್ರೂಪ್ ಯು. ಪಿ. ಸಿ.ಎಲ್ ಮುಖ್ಯಸ್ಥ ಕಿಶೋರ್ ಆಳ್ವ ಶುಭ ಹಾರೈಸಿದರು. ಉದ್ಯಮಿ ಸಂದೀಪ್ ಶೆಟ್ಟಿ ಸಚ್ಚರ ಪರಾರಿ, ಮುಂಡ್ಕೂರು ಕೋರಿಬೆಟ್ಟು ಗುತ್ತು ಸುರೆಂದ್ರ ಎಸ್. ಶೆಟ್ಟಿ , ಕಟೀಲು ಗ್ರಾ. ಪಂ. ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ , ಉದ್ಯಮಿ ಗಿರೀಶ್ ಶೆಟ್ಟಿ , ವಾಸುದೇವ ಆಚಾರ್ಯ ಬಲವಿನ ಗುಡ್ಡೆ , ಕೊಡೆತ್ತೂರು ದೇವಸ್ಯ ಮಠ ವೇದವ್ಯಾಸ ಉಡುಪ, ಉದ್ಯಮಿ ಜೊಸ್ಸಿ ಪಿಂಟೊ, ಭಂಡಾರ ಮನೆ ಜಯರಾಮ ಮುಕ್ಕಾಲ್ದಿ , ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಸುಧಾಕರ್, ಗ್ರಾ. ಪಂ. ಸದಸ್ಯರಾದ ದಯಾನಂದ ಶೆಟ್ಟಿ , ಮಲ್ಲಿಕಾ ಆಚಾರ್ಯ, ಲಕ್ಷ್ಮೀ ಪೂಜಾರ್ತಿ , ಯುವ ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ವಿನೀತ್ ಅಂಚನ್ ಪ್ರಕಾಶ್ ಆಚಾರ್ ಸಂದೇಶ್ ಶೆಟ್ಟಿ ನಿತೀಶ್ ಎಕ್ಕಾರು ಮತ್ತಿತರಿದ್ದರು.





