ಸುಳ್ಯ: ಕಾದ ಇಳೆಗೆ ತಂಪೆರೆದ ಮೊದಲ ಮಳೆ

ಸುಳ್ಯ: ಎಪ್ರಿಲ್ ತಿಂಗಳ ಬಿಸಿಲಿನ ತಾಪಕ್ಕೆ ವರುಣ ಕೃಪೆ ತೋರಿದ್ದಾನೆ. ಸೆಖೆಯಿಂದ ಕಂಗೆಟ್ಟಿದ್ದ ತಾಲೂಕಿನ ಜನತೆಗೆ ಸ್ವಲ್ಪ ಮಟ್ಟಿನ ತಂಪನ್ನು ನೀಡಿದ್ದಾನೆ.
ಕಳೆದ ಒಂದು ವಾರದಿಂದ ಮೋಡ ಮುಸುಕಿದ್ದು, ಅಲ್ಲಲ್ಲಿ, ಚದುರಿದ ಮಳೆಯಾಗಿತ್ತು. ಆದರೆ ಮಂಗಳವಾರ ಸಂಜೆ ವೇಳೆಗೆ ಗುಡುಗು-ಮಿಂಚಿನಿಂದ ಕೂಡಿದ ಭಾರಿ ಮಳೆಯಾಗಿದ್ದು, ಸ್ವಲ್ಪ ಮಟ್ಟಿಗೆ ಭೂಮಿ ತಂಪಾಗಿದೆ. ಸುಮಾರು 15 ನಿಮಿಷ ಮಳೆ ಸುರಿದಿದ್ದು, ಸುಳ್ಯ ನಗರದಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಜನರು ಅಂಗಡಿ ಮಳಿಗೆಗಳಲ್ಲಿ ಆಶ್ರಯ ಪಡೆದರು.
Next Story





