ಮೂಡುಬಿದರೆ: ಮಾರಿಗುಡಿ ಧ್ವಜಸ್ಥಂಭ ಮೆರವಣಿಗೆ

ಮೂಡುಬಿದರೆ: ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ(ಮಾರಿಗುಡಿ) ರಾಶಿಪೂಜಾ ಧ್ವಜಾರೋಹಣಕ್ಕೆ ಬೇಕಾದ ಅಡಿಕೆ ಮರದ ಧ್ವಜಸ್ಥಂಭವನ್ನು ಮೂಡುಬಿದರೆ ಅರಮನೆಬಾಗಿಲು ವಾಸುದೇವ ಶೆಟ್ಟಿ ಅವರ ಮನೆಯಿಂದ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಮಂಗಳವಾರ ತರಲಾಯಿತು.
ಗುಲಾಬಿ ಶೆಟ್ಟಿ, ವಾಸುದೇವ ಶೆಟ್ಟಿ, ಉಮಾನಾಥ ಶೆಟ್ಟಿ, ಬೋವಿ ಸಮಾಜದ ಹಿರಿಯರಾದ ಗಿರಿಯ ಬೋವಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.
Next Story





