ಭಟ್ಕಳ: ಜಾಲಿ ಪಂಚಾಯತಿಯ 20 ವಾರ್ಡುಗಳಿಗೆ ಏ.24 ರಂದು ಚುನಾವಣೆ

ಭಟ್ಕಳ: ತಾಲ್ಲೂಕಿನ ಜಾಲಿ ಪಟ್ಟಣ ಪಂಚಾಯತಿಯ 20 ವಾರ್ಡುಗಳ ಚುನಾವಣೆ ಇದೇ ಎಪ್ರಿಲ್ 24 ರಂದು ನಡೆಯಲಿದ್ದು ಎಪ್ರಿಲ್ 5 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಈಗಿರುವ ಮಾಹಿತಿಯ ಪ್ರಕಾರ ಎಪ್ರಿಲ್ 12 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಎಪ್ರಿಲ್ 13 ರಂದು ನಾಮಪತ್ರ ಪರಿಶೀಲನೆ, 15 ರಂದು ನಾಮಪತ್ರ ವಾಪಾಸ್ ಪಡೆದುಕೊಳ್ಳಲು ಕೊನೆಯ ದಿನವಾಗಿದೆ ಎಪ್ರಿಲ್ 24 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಎ.27 ರಂದು ಮತ ಎಣಿಕೆ ನಡೆಯಲಿದೆ. ಸರಕಾರದಿಂದ ಹೊಸದಾಗಿ ರಚನೆಯಾದ ಜಾಲಿ ಪಟ್ಟಣ ಪಂಚಾಯತ್‌ನ 20 ವಾರ್ಡುಗಳಿಗೆ ನಗರಾಭಿವೃದ್ಧಿ ಇಲಾಖೆ ವತಿಯಿಂದ ಈ ಹಿಂದೆ ಮೀಸಲಾತಿ ಹೊರಡಿಸಿದ್ದರೂ ಇದೀಗ ಮತ್ತೆ ಮೂರು ವಾರ್ಡುಗಳ ಮೀಸಲಾತಿಯನ್ನು ಬದಲಾಯಿಸಲಾಗಿದೆ.
ಮೀಸಲಾತಿಯ ವಿವರ - ಮೊದಲನೇ ವಾರ್ಡ ಆದ ವೆಂಕಟಾಪುರ, ಹೆಗ್ಗಲು, ಐಸ್ ಪ್ಯಾಕ್ಟರಿ ಪ್ರದೇಶಕ್ಕೆ ಈ ಹಿಂದೆ ಹಿಂದುಳಿದ ವರ್ಗ ಅ ಮಹಿಳಾ ಮೀಸಲಾತಿ ಇದ್ದಿದ್ದನ್ನು ಇದೀಗ ಬದಲಾಯಿಸಿ ಸಾಮಾನ್ಯ ಮಾಡಲಾಗಿದೆ. ಎರಡನೇ ವಾರ್ಡ ಆದ ಹುರುಳಿ ಗೊಂಡರಕೇರಿ, ಕಾರಗದ್ದೆ, ಹಿಂದೂ ಕಾಲೋನಿಗೆ ಸಾಮಾನ್ಯ ಮೀಸಲಾತಿ ಬಂದಿರುವುದನ್ನು ಬದಲಾಯಿಸಿ ಹಿಂದುಳಿದ ವರ್ಗ ಬ ಮೀಸಲಾತಿ ಮಾಡಲಾಗಿದೆ. ಮೂರನೇ ವಾರ್ಡ ಆದ ಕೆಹೆಚ್‌ಬಿ ಕಾಲೋನಿ, ಕಡವಿನಕಟ್ಟಾ, ಹುರುಳಿಸಾಲ್‌ಗೆ ಈ ಹಿಂದೆ ಹಿಂದುಳಿದ ವರ್ಗ ಬ ಮಹಿಳೆ ಮೀಸಲಾತಿಯನ್ನು ಬದಲಾಯಿಸಿ ಹಿಂದುಳಿದ ವರ್ಗ ಮಹಿಳೆ ಅ ಮೀಸಲಾತಿ ಮಾಡಲಾಗಿದೆ. ನಾಲ್ಕನೇ ವಾರ್ಡ ಆದ ಡಿಪಿ ಕಾಲೋನಿ, ಹುರುಳಿಸಾಲ ಶಾಲೆ ಉತ್ತರ ದಿಕ್ಕಿನ ಭಾಗ ಮತ್ತು ಕೋರ್ಟ ಹಿಂಬದಿ ಭಾಗಕ್ಕೆ ಸಾಮಾನ್ಯ ಮೀಸಲಾತಿ, ಐದನೇ ವಾರ್ಡ ಆದ ಹಿಂದೂ ಕಾಲೋನಿ ಭಾಗಶ, ಅನ್ಪಾಲ್ ಸೂಪರ್ ಮಾರ್ಕೆಟ್ ಹಿಂಬದಿ ಮತ್ತು ಹೆಗ್ಗಲ ರಸ್ತೆಯ ಪ್ರದೇಶಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ, ಆರನೇ ವಾರ್ಡ ಆದ ಹಿಂದೂ ಕಾಲೋನಿ, ಗುಡ್‌ಲಕ್ ರಸ್ತೆ, ಶಿಫಾ ಆಸ್ಪತ್ರೆ ಸುತ್ತ ಮುತ್ತಲಿನ ಪ್ರದೇಶಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ, ಏಳನೇ ವಾರ್ಡ ಆದ ಕೆಹೆಚ್‌ಬಿ ಕಾಲೋನಿ ಪೂರ್ತಿ, ಹಿಂದೂ ಕಾಲೋನಿ ಮಜಿರೆ, ಡಾಟಾ ಯಾಸ್ಮೀನ ಮನೆಯಿಂದ ಭಾಗಿರಥಿ ನಾಯ್ಕ ಅಂಗಡಿಯವರೆಗೆ ಮತ್ತು ವಿಜಯಲಕ್ಷ್ಮೀ ನಾಯ್ಕ ಮನೆಯಿಂದ ಗುಡ್‌ಲಕ್ ರಸ್ತೆ ಪ್ರದೇಶಕ್ಕೆ ಹಿಂದುಳಿದ ವರ್ಗ ಬ ಮೀಸಲಾತಿ ಬಂದಿದೆ. ಎಂಟನೇ ವಾರ್ಡ ಆದ ಜಾಲಿ ದೊಡ್ಮನೆ ಮಜಿರೆಯ ಭಾಗ, ಸಣ್ಮನೆ ಮತ್ತು ಹಾರುಮಕ್ಕಿ, ಜಾಲಿ ಭಟ್ಟರ ಮನೆಯಿಂದ ಶಾಂತರಾಮ ನಾಯ್ಕ ಮನೆ ಪ್ರದೇಶಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ, ಒಂಬತ್ತನೇ ವಾರ್ಡ ಆದ ಬೆಂಡೇಕಾನ ಜನತಾ ಮನೆ ಪೂರ್ತಿ ಭಾಗ ಹಾಗೂ ಇವುಗಳಿಗೆ ಹೊಂದಿಕೊಂಡಿರುವ ದೊಡ್ಮನೆ ಮಜಿರೆಯ ತೆಂಗಿನಹಿತ್ಲು ಜಂಗನಗದ್ದೆ ವರೆಗಿನ ಪ್ರದೇಶಕ್ಕೆ ಹಿಂದುಳಿದ ಅ ವರ್ಗ ಮಹಿಳೆ, ಹತ್ತನೇ ವಾರ್ಡ ಆದ ಜಾಲಿಕೋಡಿ, ಈರಯ್ಯ ಮೊಗೇರ ಮನೆಯಿಂದ ಜಾಲಿಕೋಡಿ ಫುಟ್‌ಬ್ರಿಜ್ ವರೆಗೆ ಹಾಗೂ ಮುಸ್ಭಾ ಬಂಗಲೆಯಿಂದ ಹಾರ್ನಗದ್ದೆ ವರೆಗಿನ ಪ್ರದೇಶಕ್ಕೆ ಪರಿಶಿಷ್ಟ ಜಾತಿ ಹನ್ನೊಂದನೇ ವಾರ್ಡಿನ ತಲಗೇರಿ, ಹನುಮಾನ ನಗರ, ತಲಗೇರಿ ಲಗ್ತ ಇರುವ ಜಾಲಿಕೋಡಿ ಪ್ರದೇಶಕ್ಕೆ ಸಾಮಾನ್ಯ, ಹನ್ನೆರಡನೇ ವಾರ್ಡಿನ ಅಜಾದ್‌ನಗರ, ಜಮೀರ್ ತುಮ್ಮಿನಕಟ್ಟೆ ಮನೆಯಿಂದ ತೂಬಾ ಪಳ್ಳಿಯ ವರೆಗಿನ ಪ್ರದೇಶಕ್ಕೆ ಸಾಮಾನ್ಯ, 13ನೇ ವಾರ್ಡನ್ನು ಒಳಗೊಂಡಿರುವ ಅಜಾದನಗರದ ಭಾಗ, ಅಂಜುಮಾನ ಶಾಲೆಯ ಉತ್ತರ ದಿಕ್ಕಿನಿಂದ ಗ್ರಾಮೀಣ ಪೊಲೀಸ್ ಠಾಣೆ ವರೆಗಿನ ಪ್ರದೇಶಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ, ಹದಿನಾಲ್ಕನೇ ವಾರ್ಡಿನ ವ್ಯಾಪ್ತಿಗೊಳಪಡುವ ಬಂಗಾರಮಕ್ಕಿ, ಶೇಡ್ಕುಳಿ ಮಜಿರೆ ಭಾಗ, ಮಂಡೆ ಅಪಾರ್ಟಮೆಂಟಿನಿಂದ ಶಾಫಿ ಹಳ್ಳಿಯ ದಕ್ಷಿಣ ದಿಕ್ಕಿನ ಭಾಗಕ್ಕೆ ಸಾಮಾನ್ಯ ಮಹಿಳೆ, ಹದಿನೈದನೇ ವಾರ್ಡಿನ ಅಜಾದ ನಗರ 3ನೇ ರಸ್ತೆಗೆ ತಾಗಿರುವ ಅಜಾದ ನಗರ ಮಜಿರೆಯ ಭಾಗ ಮತ್ತು ಶೇಡ್ಕುಳಿ ಮಜಿರೆಯ ಭಾಗಕ್ಕೆ ಹಿಂದುಳಿದ ವರ್ಗ ಅ ಮಹಿಳಾ ಮೀಸಲಾತಿ, ಹದಿನಾರನೇ ವಾರ್ಡಿನ ಮದಿನಾ ಕಾಲೋನಿ ಭಾಗ, ತಾಲ್ಲೂಕು ಕ್ರೀಡಾಂಗಣದಿಂದ ಅಮೀನುದ್ದೀನ ರಸ್ತೆಯ ಎಡಭಾಗದ ಮೂಸಾನಗರ ಕ್ರಾಸ್ ವರೆಗಿನ ಪ್ರದೇಶಕ್ಕೆ ಸಾಮಾನ್ಯ ಮೀಸಲಾತಿ, ಹದಿನೇಳನೇ ವಾರ್ಡಿನ ಮದಿನಾ ಕಾಲೋನಿ ಭಾಗಶ, ಉಮ್ಮರ್ ಸ್ಟೀಟ್ ಕ್ರಾಸ್ ರಸ್ತೆ, ಮೂಸಾ ನಗರ ಕ್ರಾಸ್ ರಸ್ತೆಗೆ ತಾಗಿಕೊಂಡಿರುವ ಮದೀನಾ ಕಾಲೋನಿಯ ಭಾಗಕ್ಕೆ ಹಿಂದುಳಿದ ವರ್ಗ ಅ ಮೀಸಲಾತಿ, ಹದಿನೆಂಟನೇ ವಾರ್ಡಿಗೊಳಪಡುವ ಮದಿನಾ ಕಾಲೋನಿ ಭಾಗಶ, ತೆಂಗಿನಗುಂಡಿ ರಸ್ತೆ ದಕ್ಷಿಣ ದಿಕ್ಕಿನ ಪೂರ್ತಿ ಭಾಗ, ಉತ್ತರ ದಿಕ್ಕಿನಲ್ಲಿ ಅರೀಫ್ ಡಾಕ್ಟರ್ ಮನೆಯಿಂದ ಆರ್‌ಕೆ ಟ್ರೇಡರ್ಸ ವರೆಗಿನ ಪ್ರದೇಶಕ್ಕೆ ಸಾಮಾನ್ಯ ಮಹಿಳೆ, ಹತ್ತೊಂಬತ್ತನೇ ವಾರ್ಡಿನ ತಗ್ಗರಗೋಡ ಗ್ರಾಮದ ಉತ್ತರಕ್ಕೆ ತಾಗಿರುವ ಮದಿನಾ ಕಾಲನಿ ಮಜಿರೆ ಭಾಗ, ತಗ್ಗರಗೋಡ ಭಾಗಶ:, ಮೊಹ್ದೀನ್ ಸ್ಟ್ರೀಟ್, ಬದ್ರಿಯಾ ಕಾಲೋನಿ ಪ್ರದೇಶಕ್ಕೆ ಸಾಮಾನ್ಯ ಮಹಿಳೆ ಹಾಗೂ 20ನೇ ವಾರ್ಡಿನ ತಗ್ಗರಗೋಡ ಭಾಗಶ:, ಮದೀನಾ ಕಾಲೋನಿ ದಕ್ಷಿಣಿಕ್ಕೆ ತಾಗಿರುವ ತಗ್ಗರಗೋಡ, ಅಂಗನವಾಡಿ ಕೆಳಭಾಗದಿಂದ ಜುಬೇರನ ಮನೆ ವರೆಗಿನ ಪ್ರದೇಶಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ಬಂದಿದೆ.
ಜಾಲಿ ಪಂಚಾಯತ್ ಒಂದು ಕಿರು ನೋಟ
ನೂತನವಾಗಿ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆಯಾಗಿರುವ ಜಾಲಿಯಲ್ಲಿ 20 ವಾರ್ಡುಗಳನ್ನು ಮಾಡಲಾಗಿದ್ದು ಒಟ್ಟೂ 13283 ಮತದಾರರಿದ್ದಾರೆ. ತಾಲೂಕಿನ ಜಾಲಿ ಗ್ರಾಮ ಪಂಚಾಯತ್ ಪ್ರದೇಶವು ಪಟ್ಟಣ ಪಂಚಾಯತ್ ಆಗಿರುವುದರಿಂದ ಚುನಾವಣೆಯನ್ನು ಎ.24ಂದು ನಡೆಸಲು ಈಗಾಗಲೇ ಅಧಿಸೂಚನೆ ಹೊರಬಿದ್ದಿದೆ. 20 ವಾರ್ಡುಗಳನ್ನು ಮಾಡಲಾಗಿದ್ದು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6708 ಗಂಡಸರು 6579 ಸ್ತ್ರೀಯರು ಸೇರಿ 13283 ಮತದಾರರಿದ್ದಾರೆ. ಈಗಾಗಲೇ ಚುನಾವಣಾ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದ್ದು ವಾರ್ಡುವಾರು ಮತದಾರರ ವಿವರ ವಾರ್ಡ ನಂ. 1ರಲ್ಲಿ ಗಂಡು 360, ಹೆಣ್ಣು 359 ಒಟ್ಟೂ 719 ಮತದಾರರು, ವಾರ್ಡ ನಂ. 2ರಲ್ಲಿ 282 ಗಂಡು, 283 ಹೆಣ್ಣು ಒಟ್ಟೂ 565, ವಾರ್ಡ ನಂ. 3ರಲ್ಲಿ 414 ಗಂಡು, 413 ಹೆಣ್ಣು ಒಟ್ಟೂ 827, ವಾರ್ಡ ನಂ. 4ರಲ್ಲಿ 257 ಗಂಡು, 251 ಹೆಣ್ಣು ಸೇರಿ 508, ವಾರ್ಡ ನಂ. 5ರಲ್ಲಿ 307 ಗಂಡು,282 ಹೆಣ್ಣು ಸೇರಿ ಒಟ್ಟೂ 589, ವಾರ್ಡ ನಂ. 6ರಲ್ಲಿ 323 ಗಂಡು, 324 ಹೆಣ್ಣು ಒಟ್ಟೂ 647, ವಾರ್ಡ7ರಲ್ಲಿ 346 ಗಂಡು, 354 ಹೆಣ್ಣು ಒಟ್ಟೂ 700, ವಾರ್ಡ ನಂ. 8ರಲ್ಲಿ 388 ಗಂಡು, 340 ಹೆಣ್ಣು ಒಟ್ಟೂ 728, ವಾರ್ಡ ನಂ. 9ರಲ್ಲಿ 340 ಗಂಡು, 364 ಹೆಣ್ಣು ಒಟ್ಟೂ 704, ವಾರ್ಡ ನಂ. 10ರಲ್ಲಿ 328 ಗಂಡು, 316 ಹೆಣ್ಣು ಒಟ್ಟೂ 644, ವಾರ್ಡ ನಂ. 11ರಲ್ಲಿ 404 ಗಂಡು, 418 ಹೆಣ್ಣು ಒಟ್ಟೂ 822, ವಾರ್ಡ ನಂ. 12ರಲ್ಲಿ 295 ಗಂಡು, 294 ಹೆಣ್ಣು ಒಟ್ಟೂ 589, ವಾರ್ಡ ನಂ. 13ರಲ್ಲಿ 318 ಗಂಡು, 282 ಹೆಣ್ಣು ಒಟ್ಟೂ 600, ವಾರ್ಡ ನಂ. 14ರಲ್ಲಿ 298 ಗಂಡು, 271 ಹೆಣ್ಣು ಒಟ್ಟೂ 569, ವಾರ್ಡ ನಂ. 15ರಲ್ಲಿ 312 ಗಂಡು, 283 ಸೇರಿ ಒಟ್ಟೂ 595, ವಾರ್ಡ ನಂ. 16ರಲ್ಲಿ 415 ಗಂಡು, 433 ಹೆಣ್ಣು ಒಟ್ಟೂ 848, ವಾರ್ಡ ನಂ 17ರಲ್ಲಿ 389 ಗಂಡು, 368 ಹೆಣ್ಣು ಒಟ್ಟೂ 757, ವಾರ್ಡ ನಂ. 18ರಲ್ಲಿ 298 ಗಂಡು, 321 ಹೆಣ್ಣು ಒಟ್ಟೂ 619, ವಾರ್ಡ ನಂ. 19ರಲ್ಲಿ 296 ಗಂಡು, 289 ಹೆಣ್ಣು ಒಟ್ಟೂ 585, ವಾರ್ಡ ನಂ.20ರಲ್ಲಿ 334 ಗಂಡು ಹಾಗೂ 334 ಹೆಣ್ಣು ಒಟ್ಟೂ 668 ಮತದಾರರಿದ್ದಾರೆ. ಒಟ್ಟೂ 20 ಕ್ಷೇತ್ರದಲ್ಲಿ 5 ಸ್ಥಾನ ಸಾಮಾನ್ಯ, 5 ಸ್ಥಾನ ಸಾಮಾನ್ಯ ಮಹಿಳೆ, 3 ಸ್ಥಾನ ಹಿಂದುಳಿದ ವರ್ಗ ಅ, 3 ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ, 1 ಸ್ಥಾನ ಹಿಂದುಳಿದ ವರ್ಗ ಬ, 1 ಹಿಂದುಳಿದ ವರ್ಗ ಬ ಮಹಿಳೆ, 1 ಪರಿಶಿಷ್ಟ ಜಾತಿ ಮತ್ತು 1 ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ.







