ಭಟ್ಕಳ: ತಾಲೂಕಾಡಳಿತದಿಂದ ಬಾಬು ಜಗಜೀವನರಾಮ್ ಜಯಂತಿ ಆಚರಣೆ

ಭಟ್ಕಳದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಸಮಾಜಕಲ್ಯಾಣ ಇಲಾಖೆ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಬಾಬೂ ಜಗಜೀವನರಾಮ್ ಅವರ 109ನೇ ಜನ್ಮ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಜಯಶ್ರೀ ಮೊಗೇರ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಜಗಜೀವನರಾಮ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಾಮರಸ್ಯದಿಂದ ಬಾಳಬೇಕೆಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭಾದ್ಯಕ್ಷೆ ಮಂಜಮ್ಮ ರವೀಂದ್ರ ಮಾತನಾಡಿ ಕೆಳವರ್ಗದ ಜನನಾಯಕರಾದ ಬಬೂಜಿರವರ ಜೀವನತತ್ವ ಮತ್ತು ಸಾಮಾಜಿಕ ಹೋರಾಟು ಎಲ್ಲರಿಗೂ ಸ್ಪೂರ್ತಿದಾಯಕ ಎಂದರು. ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಗಂಗಾಧರ ನಾಯ್ಕ ಬಾಬೂ ಜಗಜೀವನರಾಮ್ ಅವರ ಜೀವನ ಸಾಧನೆ ಹಾಗೂ ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರಾನಂತರದ ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಲಿತ ಸಂಘರ್ಷ ಸಮಿತಿಯ ನಾರಾಯಣ ಶಿರೂರು ಮಾತನಾಡಿದರು.ಕಾರ್ಯಕ್ರಮದಲ್ಲಿ. ತಾಲೂಕಾ ಪಂಚಾಯತ ಸದಸ್ಯರಾದ ರಾಧಾ ವೈದ್ಯ, ಮೀನಾಕ್ಷಿ ನಾಯ್ಕ ಹಾಗೂ ಹನುಮಂತ ನಾಯ್ಕ, ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮೂರ್ತಿರಾಜ ಭಟ್ ಉಪಸ್ಥಿತರಿದ್ದರು. ಸಮಾಜಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೆಶಕ ವಿನಾಯಕ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಆರೋಗ್ಯಾದಿಕಾರಿ ಈರಯ್ಯ ದೇವಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೇಯ ಸಿಬ್ಬಂದಿವರ್ಗದವರು, ದಲಿತ ಸಂಘರ್ಷ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





