Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಣಾಜೆ: 8ನೇ ವರ್ಷದ ಕ್ಷೇಮಾ ಹೆಲ್ತ್...

ಕೊಣಾಜೆ: 8ನೇ ವರ್ಷದ ಕ್ಷೇಮಾ ಹೆಲ್ತ್ ಕಾರ್ಡ್‌ನ ನೊಂದಣಿ ಪ್ರಾರಂಭ

ವಾರ್ತಾಭಾರತಿವಾರ್ತಾಭಾರತಿ5 April 2016 9:53 PM IST
share

 ಕೊಣಾಜೆ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್. ಹೆಗ್ಡೆಚಾರಿಟೇಬಲ್ ಆಸ್ಪತ್ರೆ ವತಿಯಿಂದ ಮದ್ಯಮ ಹಾಗೂ ಬಡ ಜನರ ಉಚಿತ ವೈದ್ಯಕೀಯ ಸೇವೆಗಾಗಿ ಪ್ರಾರಂಭವಾದ "ಕ್ಷೇಮ ಹೆಲ್ತ್ ಕಾರ್ಡ್" ಆರೋಗ್ಯ ವಿಮಾ ಯೋಜನೆಯು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಅದರ ನೊಂದಾವಣೆಯು ಪ್ರಾರಂಭವಾಗಿರುತ್ತದೆ. ಈ ವರ್ಷದಲ್ಲಿ ಈ ಯೋಜನೆಯ ಕಾರ್ಯವ್ಯಾಪ್ತಿಯು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಾತ್ರವಲ್ಲದೆ ಇದರ ಅಂಗಸಂಸ್ಥೆಯಾದ ಕಾರ್ಕಳದ ತೆಲ್ಲಾರ್ ರಸ್ತೆಯಲ್ಲಿರುವ ನಿಟ್ಟೆ ಗಾಜ್ರಿಯಾ ಸ್ಪೆಶ್ಯಾಲಿಟಿ ಆಸ್ಪತ್ರೆಯಲ್ಲಿ ಕೂಡ ನೊಂದಣಿ ಹಾಗೂ ವೈದ್ಯಕೀಯ ಸೇವೆ ಪ್ರಾರಂಭವಾಗಿರುತ್ತದೆ.
  ಮುಂದೆ ನಡೆಯುವ ಎಲ್ಲಾ ಉಚಿತ ತಪಾಸಣೆ ಶಿಬಿರಗಳಲ್ಲಿ ಈ ಕಾರ್ಡಿನ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಆಸಕ್ತ ಯುವಕ ಮಂಡಲಗಳು ಅಥವಾ ಇತರ ಯಾವುದೇ ಸಂಘ ಸಂಸ್ಥೆಗಳು ಈ ಎರಡು ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ತಪಾಸಣೆ ಶಿಬಿರಗಳನ್ನು ಮಾಡುವುದರ ಮೂಲಕ ಈ ಹೆಲ್ತ್ ಕಾರ್ಡಿನ ಸವಲತ್ತುಗಳನ್ನು ಸಾರ್ವಜನಿಕರಿಗೆ (ಬಡ ಕುಟುಂಬಗಳಿಗೆ) ಮುಟ್ಟಿಸುವಲ್ಲಿ ಸಹಕರಿಸಬಹುದು. ಕಳೆದ ವರ್ಷ ಈ ಯೋಜನೆಯ ಮುಖಾಂತರ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಸುಮಾರು 12435ರೋಗಿಗಳು ಹೊರರೋಗಿಗಳಾಗಿ ಹಾಗೂ 1175 ರೋಗಿಗಳು ಒಳರೋಗಿಗಳಾಗಿ ಪ್ರಯೋಜನವನ್ನು ಪಡೆದು ಕೊಂಡಿರುತ್ತಾರೆ. ಒಂದು ಕುಟುಂಬದ ಐದು ಸದಸ್ಯರನ್ನೊಳಗೊಂಡ ಬಿ.ಪಿ.ಎಲ್. ಕಾರ್ಡ್‌ದಾರರಿಗೆ ರೂಪಾಯಿ 100/-ಹಾಗೂ ಇತರರಿಗೆ ರೂಪಾಯಿ 250/-ನ್ನು ಪಾವತಿಸಿ ಈ ಯೋಜನೆಗೆ ಸೇರಬಹುದಾಗಿದೆ. ಈ ಯೋಜನೆಗೆ ಸೇರುವ ಕುಟುಂಬದ ಐದು ಸದಸ್ಯರ ಮತಚೀಟಿ ಹಾಗೂ ರೇಶನ್ ಕಾರ್ಡ್‌ನ ಪ್ರತಿಗಳನ್ನು ಕೊಡಬೇಕಾಗುತ್ತದೆ. ಸಣ್ಣ ಮಕ್ಕಳಾದಲ್ಲಿ ಜನನ ಪ್ರಮಾಣದ ಪ್ರತಿಗಳನ್ನು ನೀಡುವುದರ ಮೂಲಕ ಸೇರಬಹುದಾಗಿದೆ.
   ಈ ಯೋಜನೆಯಲ್ಲಿ ಕುಟುಂಬಕ್ಕೆ ಒಟ್ಟು ರೂಪಾಯಿ 30,000/-ಗಳವರೆಗೆ ಒಳರೋಗಿ ವೈದ್ಯಕೀಯ ಸೇವೆ ಲಭ್ಯವಿದ್ದು, ಒಂದು ಸಲದ ಚಿಕಿತ್ಸೆಗೆ ರೂಪಾಯಿ 9000/-ರವರೆಗೆ ವೆಚ್ಚಾ ಸೌಲಭ್ಯವಿದ್ದು, ವರ್ಷಕ್ಕೆ ಒಬ್ಬರಿಗೆ ರೂಪಾಯಿ 15,000/-ರವರೆಗೆ ವೈದ್ಯಕೀಯ ವೆಚ್ಚದ ಸೌಲಭ್ಯವನ್ನು ಪಡೆದುಕೊಳ್ಳಬಹುದು.3ತಿಂಗಳ ಮಗುವಿನಿಂದ 70ವರ್ಷಗಳ ಹಿರಿಯರವರೆಗೆ ಈ ಯೋಜನೆಯು ಲಭ್ಯವಿದ್ದು, ಪೂರ್ವಪೀಡಿತ ಕಾಯಿಲೆಗಳಿಗೂ ಇದು ಅನ್ವಯಿಸುತ್ತದೆ. ಕುಟುಂಬದ ಯಜಮಾನನು ಅಪಘಾತಕ್ಕೆ ಈಡಾಗಿ ಮರಣ ಹೊಂದಿದಲ್ಲಿ ರೂಪಾಯಿ 25,000/-ದವರೆಗೆ ಮರಣವಿಮೆ ಕೂಡ ಲಭ್ಯವಿರುತ್ತದೆ. ಈ ಯೋಜನೆಯಡಿಯಲ್ಲಿ 7 ಜನರು ಇಂತಹ ಮರಣ ವಿಮೆಯನ್ನು ಕೂಡ ಪಡೆದಿರುತ್ತಾರೆ. ಬಡಜನರಿಗೆ ಇದೊಂದು ಒಳ್ಳೆಯ ಆರೋಗ್ಯವಿಮೆಯಾಗಿದ್ದು ಸಾರ್ವಜನಿಕರು ಈ ಯೋಜನೆಗೆ ಸೇರುವ ಮೂಲಕ ಇದರ ಸದುಪಯೋಗವನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮೂಲಕ ಪಡೆದುಕೊಳ್ಳಬೇಕಾಗಿ ಕ್ಷೇಮದ ಡೀನ್ಪ್ರೊಫೆಸರ್ ಡಾ॥ ಸತೀಶ್ ಕುಮಾರ್ ಭಂಡಾರಿಯವರು ಪ್ರಕಟಣೆಗೆ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X