ಜಡೇಜಗೆ ಅತ್ತೆ-ಮಾವನ ‘ಆಡಿ-ಕ್ಯೂ 7’ ಕಾರು ಉಡುಗೊರೆ

ಮುಂಬೈ, ಎ.5:ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜ ವಿವಾಹ ಎಪ್ರಿಲ್ 17ರಂದು ನಿಗದಿಯಾಗಿದೆ, ಭಾವೀ ಅಳಿಯನಿಗೆ ಅತ್ತೆ-ಮಾವಂದಿರು ಆಡಿ ಕ್ಯೂ 7 ಕಾರು ಉಡುಗೊರೆಯಾಗಿ ನೀಡಿದ್ದಾರೆ.
ಜಡೇಜ ಮೆಕ್ಯಾ ನಿಕಲ್ ಎಂಜಿನಿಯರ್ ಆಗಿರುವ ರೇವಾ ಸೋಲಂಕಿ ಜೊತೆ ವಿವಾಹ ನಿಶ್ಚಿತಾರ್ಥವನ್ನು ಕಳೆದ ಫೆಬ್ರವರಿಯಲ್ಲಿ ಮುಗಿಸಿದ್ದರು. ರೇವಾ ಸೋಲಂಕಿ ಅವರು ಗುತ್ತಿಗೆದಾರ ಹರ್‌ದೇವ್‌ಸಿಂಗ್ ಸೋಲಂಕಿ ಅವರ ಮಗಳು.
97 ಲಕ್ಷ ರೂಪಾಯಿ ವೌಲ್ಯದ ಆಡಿ ಕ್ಯೂ 7 ಕಾರು ಈಗಾಗಲೇ ರವೀಂದ್ರ ಜಡೇಜರ ಮನೆ ತಲುಪಿದೆ. ಜಡೇಜ ಈಗಾಗಲೇ ಆಡಿ ಕ್ಯೂ 3 ಕಾರು ಚಲಾಯಿಸಿದ್ದಾರೆ. ಅವರ ಸಂಗ್ರಹಕ್ಕೆ ಆಡಿ ಕ್ಯೂ 7 ಕಾರು ಹೊಸ ಸೇರ್ಪಡೆ.
Next Story





