ತಂಝೀಲ್ ಹಂತಕರನ್ನು ಕಟಕಟೆಗೆ ತನ್ನಿ: ರಾಹುಲ್
ಹೊಸದಿಲ್ಲಿ, ಎ.5: ರಾಷ್ಟ್ರೀಯ ತನಿಖೆ ಸಂಸ್ಥೆಯ (ಎನ್‌ಐಎ) ಅಧಿಕಾರಿ ತಂಝೀಲ್ ಅಹ್ಮದ್‌ರ ಹತ್ಯೆಗೆ ಕಾರಣರಾದವರನ್ನು ಕಟಕಟೆಗೆ ತರಲೇಬೇಕೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಆಗ್ರಹಿಸಿದ್ದಾರೆ.
ಪಠಾಣ್ ಕೋಟ್ ದಾಳಿ ಸಹಿತ ಪ್ರಮುಖ ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುತ್ತಿದ್ದ ತಂಝೀಲ್‌ರ ಹತ್ಯೆ ತೀರಾ ಆಘಾತಕಾರಿಯೆಂದು ಅವರು ಟ್ವೀಟಿಸಿದ್ದಾರೆ.
ಅವರ ಕುಟುಂಬಿಕರಿಗೆ ತನ್ನ ಹೃತ್ಪೂರ್ವಕ ನಿಲ್ಲದ ಚಿನ್ನಾಭರಣ ವ್ಯಾಪಾರಿಗಳ ಮುಷ್ಕರ ಸಂತಾಪ. ತಂಝಿಲ್‌ರ ಹತ್ಯೆಗೆ ಕಾರಣರಾದವರನ್ನು ಕಟಕಟೆಗೆ ನಿಲ್ಲಿಸಲೇ ಬೇಕೆಂದು ರಾಹುಲ್ ಹೇಳಿದ್ದಾರೆ.
ಶನಿವಾರ ರಾತ್ರಿ ಬಿಜ್ನೋರ್‌ನ ಸಾಹಸಪುರ ಪಟ್ಟಣದ ಸಮೀಪ, ಮದುವೆಯೊಂದರಿಂದ ಮರಳುತ್ತಿದ್ದ ತಂಝೀಲ್‌ರನ್ನು ಅಜ್ಞಾತ ಬಂದೂಕುಧಾರಿಗಳಿಬ್ಬರು ಗುಂಡು ಹಾರಿಸಿ ಕೊಂದಿದ್ದರು. ಘಟನೆಯಲ್ಲಿ ಅವರ ಪತ್ನಿ ಗಾಯಗೊಂಡಿದ್ದರೆ, ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದರು.
Next Story





