ಮಂಗಳೂರು : ದ.ಕ. ಜಿಪಂಗೆ ಮಹಿಳೆ ಅಧ್ಯಕ್ಷೆ, ಪ.ಜಾತಿ ಮೀಸಲಿನಲ್ಲಿ ಪುರುಷ ಅಭ್ಯರ್ಥಿ ಇಲ್ಲ!
ಮಂಗಳೂರು, ಎ. 5: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಪುರುಷರಾರೂ ಇಲ್ಲದ ಕಾರಣ, ಶಿರ್ತಾಡಿ ಕ್ಷೇತ್ರದಿಂದ ಸುಜಾತಾ ಕೆ.ಪಿ. ಮತುತಿ ಪಾಣಾಜೆ ಕ್ಷೇತ್ರದಿಂದ ಮೀನಾಕ್ಷಿ ಬಾಬು ಆಯ್ಕೆಯಾಗಿದ್ದು, ಅವರಿಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ.
ದ.ಕ. ಜಿಲ್ಲಾ ಪಂಚಾಯತ್‌ಗೆ ಸಂಬಂಧಿಸಿ ಪ್ರಕಟವಾಗಿರುವ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅದರಂತೆ ಬಹುಮತ ಪಡೆದಿರುವ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಪುರುಷ ಅಭ್ಯರ್ಥಿಗಳು ಇಲ್ಲದ ಕಾರಣ ಪರಹಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿ ಅಧ್ಯಕ್ಷ ಸ್ಥಾನವನ್ನು ಪಡೆಯಲಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿಟ. ಜಿ.ಂಪ.ನ 36 ಸ್ಥಾನಗಳಲ್ಲಿ 21 ಸ್ಥಾನ ಬಿಜೆಪಿ ಹಾಗೂ 15 ಸ್ಥಾನಗಳು ಕಾಂಗ್ರೆಸ್ ಪಡೆದುಕೊಂಡಿತ್ತು.
Next Story





