ಎಟಿಪಿ ವಿಶ್ವ ರ್ಯಾಂಕಿಂಗ್: ನಂ.1 ಸ್ಥಾನ ಉಳಿಸಿಕೊಂಡ ಜೊಕೊವಿಕ್
ಪ್ಯಾರಿಸ್, ಎ.5: ಮಿಯಾಮಿ ಓಪನ್ ಟೂರ್ನಿಯಲ್ಲಿ ರವಿವಾರ ಆರನೆ ಪ್ರಶಸ್ತಿಯನ್ನು ಜಯಿಸಿ ದಾಖಲೆ ಬರೆದಿದ್ದ ನೊವಾಕ್ ಜೊಕೊವಿಕ್ ಎಟಿಪಿ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.
ಸರ್ಬಿಯದ ಜೊಕೊವಿಕ್ ಮಿಯಾಮಿ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಹ್ಯಾಟ್ರಿಕ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
20ರ ಹರೆಯದ ಆಸ್ಟ್ರೇಲಿಯದ ಆಟಗಾರ ನಿಕ್ ಕಿರ್ಗಿಯೊಸ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ಅಂತಿಮ ನಾಲ್ಕರ ಹಂತದಲ್ಲಿ ಜೊಕೊವಿಕ್ ವಿರುದ್ಧ ಸೋತ ಹೊರತಾಗಿಯೂ ಬೆಲ್ಜಿಯಂನ ಡೇವಿಡ್ ಗಫಿನ್ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.
ಎಟಿಪಿ ರ್ಯಾಂಕಿಂಗ್
1. ನೊವಾಕ್ ಜೊಕೊವಿಕ್(ಸರ್ಬಿಯ)
2.ಆ್ಯಂಡಿ ಮರ್ರೆ(ಬ್ರಿಟನ್)
3. ರೋಜರ್ ಫೆಡರರ್(ಸ್ವಿಸ್)
4. ಸ್ಟಾನ್ ವಾವ್ರಿಂಕ(ಸ್ವಿಸ್)
5. ರಫೆಲ್ ನಡಾಲ್(ಸ್ಪೇನ್)
6.ಕೀ ನಿಶಿಕೊರಿ(ಜಪಾನ್)
7. ಥಾಮಸ್ ಬೆರ್ಡಿಕ್(ಝೆಕ್)
8. ಡೇವಿಡ್ ಫೆರರ್(ಸ್ಪೇನ್)
9. ಜೋ-ವಿಲ್ಪ್ರೇಡ್ ಸೊಂಗ್(ಫ್ರಾನ್ಸ್)
10. ರಿಚರ್ಡ್ ಗಾಸ್ಕಟ್(ಫ್ರಾನ್ಸ್)







