ಕೇರಳ: ದಲಿತ ಬಾಲಕಿಯ ಮೇಲೆ 12 ಮಂದಿಯಿಂದ 2 ತಿಂಗಳು ಅತ್ಯಾಚಾರ
ತಿರುವನಂತಪುರ, ಎ.5: ಅಪ್ರಾಪ್ತ ವಯಸ್ಕ ದಲಿತ ಬಾಲಕಿಯೊಬ್ಬಳಿಗೆ ಕನಿಷ್ಠ 12 ಮಂದಿ ಕಳೆದೆರಡು ತಿಂಗಳ ಕಾಲ ಚಿತ್ರಹಿಂಸೆ ನೀಡಿ, ಅತ್ಯಾಚಾರ ನಡೆಸಿರುವ ಪಾಶವೀ ಘಟನೆ ಜಿಲ್ಲೆಯ ಗಡಿಭಾಗದ ಅತ್ತಿಂಗಲ್‌ನಲ್ಲಿ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ 19ರಿಂದ 32ರ ವಯೋಮಾನದ 7 ಮಂದಿಯನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಪ್ರಧಾನ ಆರೋಪಿ ಸಹಿತ ಇತರರಿಗಾಗಿ ಶೋಧ ನಡೆಯುತ್ತಿದೆಯೆಂದು ಅವರು ಹೇಳಿದ್ದಾರೆ.
ಇಷ್ಟೆಲ್ಲ ಚಿತ್ರಹಿಂಸೆಗೆ ಒಳಗಾಗಿದ್ದರೂ 15ರ ಹರೆಯದ ದಲಿತ ಬಾಲಕಿ, ಪರೀಕ್ಷೆ ಬರೆಯುವ ಉತ್ಸಾಹ ಕಳೆದುಕೊಳ್ಳದೆ, ಇತ್ತೀಚೆಗೆ ಮುಕ್ತಾಯಗೊಂಡ 10ನೆ ತರಗತಿಯ ಪರೀಕ್ಷೆಗಳಿಗೆ ಹಾಜರಾಗಿದ್ದಳು. ತನ್ನ ಮಾನಸಿಕ ಅಸ್ವಸ್ಥ ತಾಯಿ ಹಾಗೂ ಸೋದರ ಸಂಬಂಧಿಯೊಂದಿಗೆ ವಾಸಿಸುತ್ತಿರುವ ಆಕೆ, ಜೀವನಕ್ಕಾಗಿ ಸಿನೆಮ್ಯಾಟಿಕ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದಾಳೆ.
ಬಾಲಕಿಯ ಸೋದರ ಸಂಬಂಧಿಯ ಮಿತ್ರರಾದ ಇಬ್ಬರು ಪ್ರಧಾನ ಆರೋಪಿಗಳು ಫೆ.2ರಂದು ತಮ್ಮ ಆಟೋರಿಕ್ಷಾದಲ್ಲಿ ಬಾಲಕಿಯನ್ನು ಅಟ್ಟಿಂಗಲ್‌ನಿಂದ ಕರೆದೊಯ್ದಿದ್ದರು. ಇದಕ್ಕಾಗಿ, ಅವಳ ಸೋದರ ಸಂಬಂಧಿ ಕುಡಿದು ಸ್ಮತಿತಪ್ಪಿ ಬಿದ್ದಿದ್ದಾನೆಂದು ಅವರು ಸುಳ್ಳು ಹೇಳಿದ್ದರು. ಬಾಲಕಿಯನ್ನು ನಿರ್ಜನ ಪ್ರದೇಶಕ್ಕೊಯ್ದ ಅಮೀರ್ ಹಾಗೂ ಅನೂಪ್ ಶಾ ಎಂಬವರು ಅತ್ಯಾಚಾರ ನಡೆಸಿದ್ದರೆಂದು ಪೊಲೀಸರು ವಿವರಿಸಿದ್ದಾರೆ.





