ಮುಂಬೈನಲ್ಲಿ ಫುಟ್ಬಾಲ್ ಲೀಗ್ ಆರಂಭಿಸಿದ ಡಚ್ ಲೆಜಂಡ್ ಫಿಗೊ

ಮುಂಬೈ, ಎ.5: ಪೋರ್ಚುಗಲ್‌ನ ಫುಟ್ಬಾಲ್ ದಂತಕತೆ ಲೂಯಿಸ್ ಫಿಗೊ ವಿಶ್ವದ ಮೊತ್ತ ಮೊದಲ ಮಲ್ಟಿನ್ಯಾಶನಲ್ ಫುಟ್ಸಾಲ್ ಲೀಗ್‌ನ್ನು ಮುಂಬೈನಲ್ಲಿ ಮಂಗಳವಾರ ಅನಾವರಣಗೊಳಿಸಿದ್ದಾರೆ.
ಫ್ರಾಂಚೈಸಿ ಆಧರಿತ ಲೀಗ್ ಭಾರತದ 8 ನಗರಗಳಲ್ಲಿ ಜು.15 ರಿಂದ 24ರ ತನಕ ನಡೆಯಲಿದೆ. ಫಿಫಾ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿರುವ ಬಗ್ಗೆ ಖೇದ ವ್ಯಕ್ತಪಡಿಸಿರುವ ಫಿಗೊ, ಹೊಸ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊಗೆ ಶುಭ ಹಾರೈಸಿದರು.
ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನ ಹಾಗೂ ಇಂಟರ್ ಮಿಲನ್‌ನಂತಹ ಅಗ್ರ ಕ್ಲಬ್‌ನಲ್ಲಿ ಆಡಿರುವ ಫಿಗೊ 2001ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. 2015ರ ಮೇನಲ್ಲಿ ನಡೆದ ಫಿಫಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಅವರು ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಫಿಗೊ ಐಎಸ್‌ಎಲ್‌ನಲ್ಲಿ ಕೋಚ್ ಹುದ್ದೆ ವಹಿಸಿಕೊಳ್ಳುವ ಬಗ್ಗೆಯೂ ಆಸಕ್ತಿ ವ್ಯಕ್ತಪಡಿಸಿದರು.
Next Story





