ಕಡ್ಡಾಯ ಹಾಜರಾತಿಗೆ ಸೂಚನೆ
ದ್ವಿತೀಯ ಪಿಯು ವೌಲ್ಯಮಾಪನ
ಬೆಂಗಳೂರು, ಎ.5: ಪ್ರಸಕ್ತ ಸಾಲಿನ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ವೌಲ್ಯಮಾಪನ ಕಾರ್ಯವು ರಾಜ್ಯದ 7 ವಿವಿಧ ನಗರಗಳಲ್ಲಿ ನಿಗದಿತ 44 ಕೇಂದ್ರಗಳಲ್ಲಿ ಎ.3ರಿಂದ ಪ್ರಾರಂಭಿಸಲಾಗಿದೆ.
ಈಗಾಗಲೇ ನೇಮಕಗೊಂಡಿರುವ ಎಲ್ಲ ವೌಲ್ಯಮಾಪಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೌಲ್ಯಮಾಪನ ಕಾರ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಸೂಚನೆ ನೀಡಿದೆ.
ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಮತ್ತು ಉತ್ತರ ಪತ್ರಿಕೆಗಳ ವೌಲ್ಯಮಾಪನ ಕಾರ್ಯದಲ್ಲಿ ನಿರತರಾಗುವ ವೌಲ್ಯಮಾಪಕರಿಗೆ ಮತ್ತು ಇತರ ಪರೀಕ್ಷಾ ಕಾರ್ಯಗಳಲ್ಲಿ ಭಾಗವಹಿಸುವವರಿಗೆ ಸಂಭಾವನೆ ಮತ್ತು ದಿನ ಭತ್ತೆ ದರಗಳನ್ನು ಶೇ.30ರಷ್ಟು ಹೆಚ್ಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ರಾಮೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





