Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೇನಾಲ ಉರೂಸ್ ಜಾಗ ವಿವಾದಕ್ಕೆ ಎಸಿ...

ಮೇನಾಲ ಉರೂಸ್ ಜಾಗ ವಿವಾದಕ್ಕೆ ಎಸಿ ಪರಿಹಾರ ಸೂತ್ರ

ವಾರ್ತಾಭಾರತಿವಾರ್ತಾಭಾರತಿ6 April 2016 6:15 PM IST
share
ಮೇನಾಲ ಉರೂಸ್ ಜಾಗ ವಿವಾದಕ್ಕೆ ಎಸಿ ಪರಿಹಾರ ಸೂತ್ರ

- ಇತ್ತಂಡದ ಮುಖಂಡರೊಂದಿಗೆ ಸಹಾಯಕ ಕಮೀಷನರ್ ಮಾತುಕತೆ

- ಸೌಹಾರ್ದ ಪರಂಪರೆ ಮುಂದುವರಿಸಿಕೊಂಡು ಹೋಗುವಂತೆ ಸಲಹೆ

ಸುಳ್ಯ: ಅಜ್ಜಾವರ ಮೇನಾಲ ದರ್ಗಾಶರೀಫ್‌ನ ಉರೂಸ್ ಸಮಾರಂಭ ನಡೆಯುವ ಜಾಗದ ಕುರಿತಂತೆ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇತ್ತಂಡಗಳ ಸಭೆ ನಡೆದು ಸೌಹಾರ್ದ ಪರಿಹಾರ ಕಂಡುಕೊಳ್ಳಲಾಗಿದೆ.

ಮೇನಾಲದ ದರ್ಗಾಶರೀಫ್ ಹಾಗೂ ಇಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಸೌಹಾರ್ದತೆಯ ಕೇಂದ್ರವಾಗಿ ಪ್ರಸಿದ್ಧವಾಗಿತ್ತು. ಇಲ್ಲಿನ ಸ್ಥಳ ಮೊಕ್ತೇಸರರು ಹಿಂದೂ ಧರ್ಮದವರಾಗಿರುವುದು, ಇಲ್ಲಿನ ಇತಿಹಾಸ, ಉರೂಸ್ ಸಮಾರಂಭಕ್ಕೆ ಎರಡೂ ಧರ್ಮಗಳ ಜನರು ಸೇರುವುದು ಇದಕ್ಕೆ ಕಾರಣವಾಗಿತ್ತು. ಆದರೆ ಕೆಲ ವರ್ಷಗಳಿಂದ ಇಲ್ಲಿ ಕೆಲವು ಅಹಿತಕರ ಘಟನೆಗಳು ನಡೆದು ವಿವಾದ ಉಲ್ಬಣಗೊಂಡಿತ್ತು. ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಜಾಗದ ವಿವಾದ ನ್ಯಾಯಾಲಯಕ್ಕೂ ಹೋಗಿತ್ತು. ಈ ಬಾರಿಯ ಉರೂಸ್ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಗೊಂಡು ಜಾಗದಲ್ಲಿ ತಯಾರಿ ಕಾರ್ಯ ಆರಂಭಿಸಿದಾಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಭೋದ್ ರೈ ಮೇನಾಲರವರು ಜಾಗದ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಇಲ್ಲಿ ಕಾರ್ಯಕ್ರಮ ನಡೆಸಬಾರದೆಂದು ಪೊಲೀಸರಿಗೆ ದೂರು ನೀಡಿದರು. ಈ ಕುರಿತು ಜಮಾಅತ್‌ನವರು ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದರು.

ಮಾತುಕತೆ:

ಈ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ ಕೆ.ವಿ.ರಾಜೇಂದ್ರ ಹಾಗೂ ಎ.ಎಸ್.ಪಿ. ರಿಷ್ಯಂತ್ ಬುಧವಾರ ಸುಳ್ಯಕ್ಕೆ ಆಗಮಿಸಿ ತಾಲೂಕು ಕಚೇರಿಯಲ್ಲಿ ಎರಡೂ ಸಮುದಾಯದವರ ಸ್ಥಳೀಯ ಮುಖಂಡರ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸುಭೋದ್ ಶೆಟ್ಟಿ ಮೇನಾಲ, ಈ ಜಾಗಕ್ಕೆ ನಾವು ಕೂಡಾ ಹಕ್ಕುದಾರರು. ಹೀಗಾಗಿ ನ್ಯಾಯಾಲಯಕ್ಕೆ ಹೋಗಿದ್ದೇವೆ. ಸೌಹಾರ್ದತೆ ನಮಗೂ ಬೇಕಾಗಿದೆ. ಆದರೆ ಇಲ್ಲಿ ಹೆಸರಿಗಷ್ಟೇ ಸೌಹಾರ್ದವಿದೆ. ಅವರು ಬೇರೆ ಬೇರೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಸೌಹಾರ್ದತೆ ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಆದರೆ ಇಲ್ಲಿ ಒಂದು ಕಡೆಯಿಂದ ಮಾತ್ರ ಸೌಹಾರ್ದತೆ ಇದೆ. ಇಲ್ಲಿ ವರ್ಷದಲ್ಲಿ ಮೂರು ದಿನ ಅವರ ಕಾರ್ಯಕ್ರಮಗಳು ಮಾತ್ರ ನಡೆಯುತ್ತದೆ. ನಮ್ಮವರು ಆಟ ಆಡಲು ಹೋದರೂ ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸುಳ್ಳು ಕೇಸು ಹಾಕಿಸುತ್ತಿದ್ದಾರೆ ಎಂದು ರಾಜೇಶ್ ಶೆಟ್ಟಿ ಮೇನಾಲ ಅಭಿಪ್ರಾಯಪಟ್ಟರು.

ಜಮಾಅತ್ ಕಡೆಯಿಂದ ಮಾತನಾಡಿದ ಸಮಿತಿ ಜತೆ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಎ.ಪಿ.ಹನೀಫ್‌ರವರು, ಈ ಧಾರ್ಮಿಕ ಕೇಂದ್ರಕ್ಕೆ 200 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಸೌಹಾರ್ದವಾಗಿಯೇ ಮುಂದುವರಿದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೌಹಾರ್ದತೆ ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಬೋರ್‌ವೆಲ್ ಹಾಗೂ ಆವರಣಗೋಡೆಯನ್ನು ಸ್ಥಳ ಮೊಕ್ತೇಸರ ಗುಡ್ಡಪ್ಪ ರೈ ಅವರೊಂದಿಗೆ ಮಾತುಕತೆ ನಡೆಸಿಯೇ ಮಾಡಲಾಗಿದೆ. ಆಟ ಆಡುವಾಗ ಅಡ್ಡಿಪಡಿಸಿಲ್ಲ. ಅದನ್ನೂ ಗುಡ್ಡಪ್ಪ ರೈ ಅವರೇ ಪರಿಹರಿಸಿದ್ದಾರೆ ಎಂದು ಹೇಳಿದರು.

   ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಖಾದರ್ ಮಾತನಾಡಿ, ಇಲ್ಲಿ ಉರೂಸ್ ನಡೆಯುವುದು ಊರಿನ ನೆಮ್ಮದಿಗಾಗಿ. ಯಾವುದೇ ವ್ಯಕ್ತಿಯ ಅಥವಾ ಧರ್ಮದ ಪ್ರತಿಷ್ಠೆಗಾಗಿ ಅಲ್ಲ. ಹೀಗಾಗಿ ಸೌಹಾರ್ದತೆಯಿಂದ ಇದನ್ನು ನಡೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಹೇಳಿದರು. ಇತ್ತಂಡಗಳ ವಾದವನ್ನು ಆಲಿಸಿದ ಬಳಿಕ ಮಾತನಾಡಿದ ಎಸಿಯವರು ಕುಮ್ಕಿ, ಕಾನ, ಬಾಣೆ ಜಾಗಕ್ಕೆ ಯಾರೂ ತಾವು ವಾರಿಸುದಾರರು ಎಂದು ಹೇಳಿಕೊಳ್ಳುವಂತಿಲ್ಲ. ಸರಕಾರಕ್ಕೆ ಇದರಲ್ಲಿ ಪೂರ್ಣ ಅಧಿಕಾರವಿದೆ. ಆದರೆ ಈಗಾಗಲೇ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅದರ ತೀರ್ಪಿನಂತೆ ನಡೆದುಕೊಳ್ಳಬೇಕಾಗಿದೆ. ಅದುವರೆಗೆ ಈಗ ಇರುವ ಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗಬಹುದು. ಹಾಗಾಗಿ ಇಲ್ಲಿಗೆ ಯಾರು ಬಂದರೂ ಅದಕ್ಕೆ ಅಡ್ಡಿಮಾಡುವುದು ಸರಿಯಲ್ಲ. ಮಾತ್ರವಲ್ಲದೆ ಯಾವುದೇ ಶಾಶ್ವತ ಕೆಲಸ ಕಾರ್ಯಗಳನ್ನು ಈ ಜಾಗದಲ್ಲಿ ನಡೆಸಲೂಬಾರದು. ಅಂತಹ ಕೃತ್ಯಗಳು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು. ಸೌಹಾರ್ದತೆ ಎನ್ನುವುದು ಬಹಳ ಮುಖ್ಯ. ಇದು ಇತ್ತಂಡಗಳಿಂದಲೂ ಇರಬೇಕು. ಹೀಗಾಗಿ ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾರೂ ಅಡ್ಡಿಮಾಡುವುದು ಬೇಡ. ಇಂತಹ ವಿಚಾರಗಳನ್ನು ಹೊರಗಿನ ಶಕ್ತಿಗಳು ಕೈಗೆತ್ತಿಕೊಂಡು ಜಾಸ್ತಿ ಮಾಡಲು ಪ್ರಯತ್ನಿಸುತ್ತದೆ. ಆದರೆ ಊರಿನಲ್ಲಿ ನಾಳೆ ನೆಮ್ಮದಿಯಿಂದ ಬದುಕಬೇಕಾದವರು ನೀವು. ಹೀಗಾಗಿ ಇಷ್ಟು ವರ್ಷದ ಸೌಹಾರ್ದತೆಯನ್ನು ಮುಂದುವರಿಸಿಕೊಂಡು ಹೋಗಿ. ಪಂಚಾಯತ್ ಅನುಮತಿ ಪ್ರಕಾರ ಉರೂಸ್ ಕಾರ್ಯಕ್ರಮ ಇಲ್ಲೇ ನಡೆಯಲಿ ಅದೇ ರೀತಿ ಇತರ ಕಾರ್ಯಕ್ರಮಗಳನ್ನು ಪಂಚಾಯತ್ ಅನುಮತಿ ಪಡೆದು ಇಲ್ಲಿ ನಡೆಸಬಹುದು ಎಂದು ಎಸಿಯವರು ಸಲಹೆ ನೀಡಿದರು.

ಇತ್ತಂಡಗಳು ಅವರ ಸಲಹೆಯನ್ನು ಸ್ವಾಗತಿಸಿತು. ಪ್ರಭೋದ್ ಶೆಟ್ಟಿ ಮೇನಾಲ, ಕಮಲಾಕ್ಷ ರೈ ಮೇನಾಲ, ಜಮಾತ್ ಕಮಿಟಿ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಬಯಂಬು, ಅಧ್ಯಕ್ಷ ಅಬ್ದುಲ್ಲ ಕುಂಞಿ ಪಳ್ಳಿಕೆರೆ, ಉಪಾಧ್ಯಕ್ಷ ಅಬ್ಬಾಸ್ ಹಾಜಿ ಡೆಲ್ಮ, ಕಾರ್ಯದರ್ಶಿ ಶಾಫಿ, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಸುಳ್ಯ ಎಸ್.ಐ. ಚಂದ್ರಶೇಖರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ವೊದಲಾದವರು ಸಭೆಯಲ್ಲಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X