ಹಿಕ್ಮಾ ಎಜುಕೇಶನ್ ಟ್ರಸ್ಟ್‌ನಿಂದ ಪೂರ್ವ ಪ್ರಾಥಮಿಕ ಶಾಲೆ ಆರಂಭ
ಎಪ್ರಿಲ್ 7ರಂದು ಶೈಕ್ಷಣಿಕ ಕಾರ್ಯಕ್ರಮ
ಮಂಗಳೂರು, ಎ.6: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ವಾತವರಣದ ಶೈಕ್ಷಣಿಕ ಕೇಂದ್ರವನ್ನು ತೆರೆಯುವ ನಿಟ್ಟಿನಲ್ಲಿ ಹಿಕ್ಮಾ ಇಂಟರ್‌ನ್ಯಾಶನಲ್ ಅಕಾಡೆಮಿಯನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಪ್ರಿಲ್ 7ರಂದು ಸಂಜೆ 7ಕ್ಕೆ ನಗರದ ಹಂಪನಕಟ್ಟೆ ಮಿಲಾಗ್ರೀಸ್ ಸಭಾಂಗಣದಲ್ಲಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಕ್ಮಾ ಎಜುಕೇಶನ್ ಟ್ರಸ್ಟ್‌ನ ಸಿಇಒ ಮತ್ತು ಟ್ರಸ್ಟಿ ಸೈಫ್ ಸುಲ್ತಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ‘ಶಿಕ್ಷಣದ ಬಗ್ಗೆ ಪುನರ್ ಚಿಂತನೆ ’ಎಂಬ ವಿಷಯದ ಬಗ್ಗೆ ಖ್ಯಾತ ಭಾಷಣಕಾರ ಹಾಗೂ ಅಲ್ ಅಸರ್ ಅಕಾಡಮಿಯ ಸಿಇಒ ಅಥರ್ ಖಾನ್ ವಿಷಯ ಮಂಡಿಸಲಿದ್ದಾರೆ. ಇಂಟರ್‌ನ್ಯಾಶನಲ್ ಎನ್‌ಎಲ್‌ಪಿ ಎಕ್ಸ್‌ಪರ್ಟ್, ಬರಹಗಾರ, ಐಎಲ್‌ಸಿ ಕೋಚ್ ಸಯೀದ್ ಹಬೀಬ್ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಲಿದ್ದಾರೆ. ಇವರಿಬ್ಬರೂ ಹಿಕ್ಮಾ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾಗಿದ್ದಾರೆ. ಮುಹಮ್ಮದ್ ನಿಸಾರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
‘ಜ್ಞಾನ,ವಿಶ್ವಾಸ,ವಿದ್ಯಾಭ್ಯಾಸ ಮತ್ತು ಬುದ್ಧಿವಂತಿಕೆಯ ಸಂಗಮ ’ಧ್ಯೇಯದೊಂದಿಗೆ 2016ರ ಜೂನ್‌ನಲ್ಲಿ ಪೂರ್ವ ಪ್ರಾಥಮಿಕ ಸ್ಕೂಲ್ ಆರಂಭಿಸಲಾಗುವುದು ಮುಂದಿನ ಹಂತದಲ್ಲಿ ಹಂತ ಹಂತವಾಗಿ ಉಳಿದ ಶೈಕ್ಷಣಿಕ ತರಗತಿಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ನಗರದ ಯುನಿಟಿ ಆಸ್ಪತ್ರೆಯ ಹಿಂಬದಿಯ ವಾಸ್‌ಲೇನ್‌ನ ಎಚ್‌ಇಸಿಸಿ ಎರಡನೆ ಮಹಡಿಯಲ್ಲಿ ತರಗತಿಗಳನ್ನು ಆರಂಭಿಸಲಾಗುವುದು. ಈ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ,ಸಾಮಾಜಿಕ ಮತ್ತು ಸಮಗ್ರ ಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ, ಸುರಕ್ಷಿತವಾದ, ನಿರ್ಭಯವಾದ ವಾತಾವರಣವನ್ನು ಸೃಷ್ಟಿಸುವುದು, ಎಲ್ಲ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನಹರಿಸಲಾಗುವುದು, ಎಲ್ಲಾ ವಿದ್ಯಾರ್ಥಿಗಳ ತಮ್ಮ ಹಕ್ಕು, ವೈಯಕ್ತಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಲು ಸಹಕಾರ ನೀಡುವುದು. ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ವಾತವರಣ ಸೃಷ್ಟಿಸುವುದು. ಸಣ್ಣ ಮಕ್ಕಳ ಅಗತ್ಯಗಳನ್ನು ಪೂರೈಸಲು ಇಬ್ಬರು ತರಗತಿಯ ಅಧ್ಯಾಪಕರೊಂದಿಗೆ ಇಬ್ಬರು ಮಹಿಳಾ ಸಿಬ್ಬಂದಿಯಿರುತ್ತಾರೆ.ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಶಾಲೆಗೆ ಬರುವಂತೆ ಮಾಡುವ ಒಂದು ವಾತಾವರಣ ಹುಟ್ಟು ಹಾಕುವ ಪ್ರಮುಖ ಸಿದ್ಧಾಂತಗಳೊಂದಿಗೆ, ಇಸ್ಲಾಮಿಕ್ ಶೈಕ್ಷಣಿಕ ಯೋಜನೆಯ ಮಾದರಿಯಂತೆ ಹಿಕ್ಮಾ ಇಂಟರ್ ನ್ಯಾಶನಲ್ ಅಕಾಡಮಿ ಕಾರ್ಯಯೋಜನೆ ಹಮ್ಮಿಕೊಂಡಿದೆ. ಪೋಷಕರೊಂದಿಗೆ ಪಿಕ್ನಿಕ್, ಗ್ರಾಂಡ್ ಪೋಷಕರ ದಿನ ಮತ್ತು ಜಷ್ನ್-ಎ-ಖಿದ್ಮಾ ಮುಂತಾದ ವಿನೋದ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಸೈಫ್ ಸುಲ್ತಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಕ್ಮಾ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಮುಹಮ್ಮದ್ ರಿಝ್ವಿನ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.





