Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನನ್ನ ಮಗ ಅಮಾಯಕ: ಐಸಿಸ್ ನಂಟು ಆರೋಪದಲ್ಲಿ...

ನನ್ನ ಮಗ ಅಮಾಯಕ: ಐಸಿಸ್ ನಂಟು ಆರೋಪದಲ್ಲಿ ಬಂಧಿತ ಇಸ್ಮಾಯಿಲ್ ತಂದೆಯ ಅಳಲು

ವಾರ್ತಾಭಾರತಿವಾರ್ತಾಭಾರತಿ6 April 2016 8:22 PM IST
share
ನನ್ನ ಮಗ ಅಮಾಯಕ: ಐಸಿಸ್ ನಂಟು ಆರೋಪದಲ್ಲಿ ಬಂಧಿತ ಇಸ್ಮಾಯಿಲ್ ತಂದೆಯ ಅಳಲು

ಭಟ್ಕಳ: ವಿಸಿಟ್ ವಿಸಾದಡಿ ದುಬೈಗೆ ತೆರಳುತ್ತಿದ್ದ ಭಟ್ಕಳದ ವ್ಯಕ್ತಿ ಐಎಸ್‌ಐಎಸ್ ನೊಂದಿಗೆ ಸಂಬಂಧ ಇದೆ ಎಂಬ ಆರೋಪದಡಿ ಇಂಟೆಲಿಜೆನ್ಸ್ ನವರು ಪುಣೆಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

 ಬಂಧಿತ ವ್ಯಕ್ತಿಯನ್ನು ಇಲ್ಲಿನ ಅಮೀನುದ್ದೀನ್ ರಸ್ತೆಯ ನಿವಾಸಿ ಇಸ್ಮಾಯಿಲ್ ಅಬ್ದುಲ್ ರವೂಫ್(34)ಎಂದು ಗುರುತಿಲಾಗಿದೆ.

ಘಟನೆಯ ವಿವರ:  ಬಂಧಿತ ವ್ಯಕ್ತಿ ಒಂದು ತಿಂಗಳ ವಿಸಿಟ್ ವಿಸಾದಡಿ ಮಂಗಳವಾರ ರಾತ್ರಿ ಪೂಣೆಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳು ಹೋಗಿದ್ದು ಅಲ್ಲಿನ ಸುರಕ್ಷದಳದವರು ವಸ್ತುಗಳನ್ನು ಪರೀಕ್ಷಿಸಿಸಬೇಕೆಂದು ತಡೆದರು ಎನ್ನಲಾಗಿದ್ದು ಅದರಲ್ಲಿ ಮಾಂಸ ಇದ್ದು ಅದರ ತಪಾಸಣೆಯಾದ ಮೇಲೆ ನಿನ್ನನ್ನು ಬಿಡಲಾಗುವುದು ಎಂದು ಹೇಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು ನಾಳೆ ಬುಧವಾರ ಮುಂಬೈ ಮೂಲಕ ದುಬೈಗೆ ತೆರಳುವುದಾಗಿ ಭಟ್ಕಳದಲ್ಲಿರುವ ತಂದೆ ಅಬ್ದುಲ್ ರವೂಫ್ ರಿಗೆ ಮಂಗಳವಾರ ರಾತ್ರಿ 12 ಗಂಟೆ ಸುಮಾರು ದೂರವಾಣಿ ಮೂಲಕ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆದರೆ ಇಂದು ಆತನ ಎನ್.ಐ.ಎ ನವರು ಆತನನ್ನು ಬಂದಿಸಿ ವಿಚಾರಣೆಗಾಗಿ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ ಆತನ ಕುಟುಂಬ ಮೂಲಗಳು ದೃಢಪಡಿಸಿವೆ.

ಈ ಕುರಿತಂತೆ ಭಟ್ಕಳದಲ್ಲಿರುವ ಬಂಧಿತ ವ್ಯಕ್ತಿಯ ತಂದೆ ಅಬ್ದುಲ್ ರವೂಫ್ ರನ್ನು ಮಾಧ್ಯಮಗಳ ಸಂಪರ್ಕಿಸಿದಾಗ ನನ್ನ ಮಗ ಇಸ್ಮಾಯಿಲ್ ಇಲ್ಲಿನ ಹಪ್ಪಳದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಎಂಟನೆ ತರಗತಿ ವರೆಗೆ ಮಾತ್ರ ಓದಿದ್ದಾನೆ. ಕಂಪ್ಯೂಟರ್, ಇಂಟರ್‌ನೆಟ್ ಇವುಗಳ ಕುರಿತು ಪ್ರಾಥಮಿಕ ಜ್ಞಾನವೂ ಇರದ ಈತನಿಗೆ ಐ.ಎಸ್.ಐಎಸ್. ಎಂದರೆ ಏನೂ ಎಂಬುದು ತಿಳಿಯದು ಇಂತಹ ವ್ಯಕ್ತಿ ಐಎಸ್‌ಐಎಸ್ ನೊಂದಿಗೆ ಸಂಬಂಧ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಇದು ಅಮಾಯಕ ನನ್ನ ಮಗನನ್ನು ಸಿಲುಕಿಸುವ ಪ್ರಯತ್ನವಾಗಿದೆ ಕೂಡಲೆ ಆತನ ವಿಚಾರಣೆ ನಡೆಸಿ ಬಿಡುಗಡೆ ಮಾಡಬೆಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮುಸ್ಲಿಮ್ ಯುವಕರನ್ನು ಯುವಕರನ್ನು ಜೈಲಿಗೆ ತಳ್ಳಲು ಸುಲಭ ಅಸ್ತ್ರ ಐಎಸ್‌ಐಎಸ್: ನಮ್ಮಲ್ಲಿನ ಸುರಕ್ಷ ಎಜೆನ್ಸಿಗಳು ದೇಶದ ಮುಸ್ಲಿಮ್ ಯುವಕರನ್ನು ಬಂಧಿಸಲು ಐಎಸ್‌ಐಎಸ್ ಎಂಬ ಅಸ್ತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅಮಾಯಕ ಮುಸ್ಲಿಮರು ಸುಲಭವಾಗಿ 6-7 ತಿಂಗಳು ಜೈಲಿನಲ್ಲಿ ಕೊಳೆಯುವಂತೆ ಮಾಡಲು ಸರ್ಕಾರವೇ ಹಣೆದ ತಂತ್ರವಾಗಿದ್ದು ಇಂತಹ ಮನೋಸ್ಥಿತಿಯಿಂದ ಸರ್ಕಾರ, ಪೊಲೀಸರು, ಹಾಗೂ ಸುರಕ್ಷಾ ಎಜೆನ್ಸಿಯವರು ಹೊರಬರಬೇಕು ಎಂಬ ಮಾತುಗಳು ಮುಸ್ಲಿಮ್ ವಲಯದಲ್ಲಿ ಕೇಳಿಬರುತ್ತಿದ್ದು ಇಂದಿನ ಘಟನೆಗೆ ಕುರಿತಂತೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಐಎಸ್‌ಐಎಸ್ ಕರಾಳ ಮುಖ ಈಗ ಎಲ್ಲರಿಗೂ ಗೊತ್ತಿದೆ. ಇದರ ಕುಕೃತ್ಯಗಳನ್ನು ಸಮಾಜದ ಎಲ್ಲ ಸಂಘಟನೆಗಳು ಬಲವಾಗಿ ಖಂಡಿಸಿವೆ. ಇದರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇಷ್ಟೆಲ್ಲ ಗೊತ್ತಿದ್ದೂ ಮುಸ್ಲಿಮ್ ಯುವಕರು ಅದರ ಬಲೆಗೆ ಬೀಳಲಾರರು. ಇದೆಲ್ಲಾವೂ ಸುಳ್ಳು ಮುಸ್ಲಿಮರನ್ನು ಸಿಲುಕಿಸಲು ಐಎಸ್.ಐಎಸ್ ಎಂಬ ಅಸ್ತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮುಸ್ಲಿಮ ಸಮುದಾಯದ ಮುಖಂಡರು ಆರೋಪಿಸುತ್ತಿದ್ದಾರೆ.

ಬಂಧಿತ ಇಸ್ಮಯಿಲ್ ನಿಗೆ ಪತ್ನಿ, ತಂದೆ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಬಂಧಿತ ಇಸ್ಮಾಯಿಲ್ನ ತಂದೆ ಅಬ್ದುಲ್ ರವೂಫ್

ಬಂಧಿತ ಇಸ್ಮಾಯಿಲ್‌ನ ತಂದೆ ಅಬ್ದುಲ್ ರವೂಫ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X