ಉ.ಕ.: ಜಿಪಂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟ
ಕಾರವಾರ, ಎ.6: ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ (ಅ) ವರ್ಗ ಮೀಸಲಾಗಿದೆ. ಮುಂಡಗೋಡ ಪಾಳಾ ಕ್ಷೇತ್ರದಿಂದ ಆಯ್ಕೆಯಾಗಿರುವ ಜಯಮ್ಮಾ ಕೃಷ್ಣ ಹಿರೇಹಳ್ಳಿ ಮತ್ತು ಭಟ್ಕಳ ತಾಲೂಕಿನ ಹೆಬಳೆ ಕ್ಷೇತ್ರದಿಂದ ಆಯ್ಕೆಯಾಗಿರುವ ಜಯಶ್ರೀ ಮೊಗೇರ್ ಪರಿಶಿಷ್ಟ ಜಾತಿ ಮಹಿಳೆಯರಾಗಿದ್ದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಅ ವರ್ಗ ಮೀಸಲಾಗಿದ್ದು, ಕ್ಷೇತ್ರವಾರು ಮೀಸಲಾತಿಯ ಪ್ರಕಾರ ಹಳಿಯಾಳ ತೇರಗಾಂವ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂತೋಷ ಶಂಕರ ರೇಣಕೆ, ಕುಮಟಾ ಹೆಗಡೆ ಕ್ಷೇತ್ರದಿಂದ ಆಯ್ಕೆಯಾಗಿರುವ ರತ್ನಾಕರ್ ಜಿ.ನಾಯ್ಕ, ಜೊಯಿಡಾ ಕ್ಷೇತ್ರದಿಂದ ಆಯ್ಕೆಯಾಗಿರುವ ರಮೇಶ್ ಜಿ.ನಾಯ್ಕ, ಕಾರವಾರ ಚಿತ್ತಾಕುಲ ಕ್ಷೇತ್ರದಿಂದ ಆಯ್ಕೆಯಾಗಿರುವ ಪಂಡರಿನಾಥ ಕೃಷ್ಣಾ ಮೇಥಾ, ಹೊನ್ನಾವರ ಮಂಕಿ ಕ್ಷೇತ್ರದಿಂದ ಆಯ್ಕೆಯಾಗಿರುವ ದೀಪಕ್ ಜಿ. ನಾಯ್ಕ ಸಾಲಿನಲ್ಲಿದ್ದಾರೆ.
ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಅರ್ಹರಾಗಿರುವ ಇಬ್ಬರ ಪೈಕಿ ಎರಡನೇ ಅವಧಿಗೆ ಆಯ್ಕೆಯಾದ ಜಯಶ್ರೀ ಮೊಗೇರ್ ಅವರಿಗೆ ದೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಪಕ್ಷ ವಲಯದಿಂದ ಕೇಳಿ ಬಂದಿವೆ. ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಮಿಸಲಾತಿ ಪ್ರಕಾರ ಪೈಪೋಟಿ ಆರಂಭವಾಗಿದ್ದು ಕುತೂಹಲ ಹೆಚ್ಚಿಸಿದೆ. ಅಧ್ಯಕ್ಷ ಪಟ್ಟ ಮಹಿಳೆಗೆ ಮೀಸಲಾಗಿರುವುದರಿಂದ ಪುರುಷರಿಗೆ ಉಪಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಇದೆ. ಡಿಎಫ್‌ಒ ಎಡಕುಂಡಲು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ನಗರಸಭೆ ಎಇಇ ಕೆ.ಎಂ.ರವಿಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜು, ವೀರಾಜಪೇಟೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.







