ಶಾಸಕ ಪರ್ಗತ್ ಸಿಂಗ್ ಮೇಲೆ ಹಲ್ಲೆ

ಚಂಡೀಗಡ, ಎ.6: ಶಿರೋಮಣಿ ಆಕಾಲಿ ದಳದ ಶಾಸಕ ಮತ್ತು ಭಾರತ ಹಾಕಿ ತಂಡದ ಮಾಜಿ ನಾಯಕ ಪರ್ಗತ್ ಸಿಂಗ್ ಮೇಲೆ ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ಓರ್ವನು ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಚಂಡೀಗಡದ ಸೆಕ್ಟರ್ 9 ಮಾರುಕಟ್ಟೆ ಬಳಿ ನಡೆದಿದೆ.
ಪರ್ಗತ್ ಸಿಂಗ್ ಅವರಿಗೆ ಸೆಕ್ಟರ್ 22 ಪ್ರದೇಶದ ನಿವಾಸಿ ಕಮಲ್‌ಜಿತ್ ಸಿಂಗ್ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಹಲ್ಲೆಯಿಂದಾಗಿ ಪರ್ಗತ್ ಸಿಂಗ್ ಅವರ ಕೈ ಬೆರಳಿಗೆ ಗಾಯವಾಗಿದೆ. ಆರೋಪಿ ಕಮಲ್‌ಜಿತ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Next Story





