ಐಸ್‌ಲ್ಯಾಂಡ್ ಪ್ರಧಾನಿ ರಾಜೀನಾಮೆ

ಲಂಡನ್, ಎ. 6: ತನ್ನ ಕೋಟಿಗಟ್ಟಳೆ ಪೌಂಡ್ ಹೂಡಿಕೆಗಳನ್ನು ಮರೆಮಾಚಲು ತಾನು ವಿದೇಶಿ ಕಂಪೆನಿಯೊಂದನ್ನು ಬಳಸುತ್ತಿದ್ದೇನೆ ಎನ್ನುವುದು ಪನಾಮ ದಾಖಲೆಗಳಿಂದ ಬಹಿರಂಗಗೊಂಡ ಬಳಿಕ ಐಸ್‌ಲ್ಯಾಂಡ್ ಪ್ರಧಾನಿ ಸಿಗ್ಮಂಡರ್ ಡೇವಿಡ್ ಗನ್‌ಲಾಗ್‌ಸನ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಸೋಮವಾರ ದಾಖಲೆ ಗಳು ಬಹಿರಂಗವಾದ ಬಳಿಕ, ಪ್ರಧಾನಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಸಾವಿರಾರು ಮಂದಿ ಐಸ್‌ಲ್ಯಾಂಡ್ ಸಂಸತ್ತಿಗೆ ಮುತ್ತಿಗೆ ಹಾಕಿದ್ದರು.
ಹಗರಣಕ್ಕೆ ಸಂಬಂಧಿಸಿದ ಕಂಪೆನಿಯ ಮಾಲಕತ್ವ ಪ್ರಧಾನಿ ಮತ್ತು ಅವರ ಪತ್ನಿಯ ಹೆಸರಿನಲ್ಲಿದೆ ಎನ್ನುವುದು ಬಹಿರಂಗಗೊಂಡ ಬಳಿಕ ಅವರು ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
Next Story





