‘ಇಂದು ರಾಜಭವನಕ್ಕೆ ಬೀಗ’
ದೇವೇಗೌಡರಿಗೆ ಅವಮಾನ
ಬೆಂಗಳೂರು, ಎ.6: ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರಿಗೆ ಅವಮಾನ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಧೋರಣೆಯನ್ನು ಖಂಡಿಸಿ ಯುವ ಜೆಡಿಎಸ್ ಘಟಕದ ವತಿಯಿಂದ ಎ.7ರಂದು ಮಧ್ಯಾಹ್ನ 12 ಗಂಟೆಗೆ ರಾಜಭವನಕ್ಕೆ ಬೀಗ ಜಡಿಯುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ನಗರದ ಆನಂದ್‌ರಾವ್ ವೃತ್ತದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿಯಿಂದ ‘ರಾಜಭವನಕ್ಕೆ ಬೀಗ ಜಡಿಯುವ ಬೃಹತ್ ಪ್ರತಿಭಟನಾ ಪಾದಯಾತ್ರೆ’ ಆಯೋಜಿಸಿರುವುದಾಗಿ ಬಿಬಿಎಂಪಿ ಯುವ ಜನತಾದಳ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ತಿಳಿಸಿದ್ದಾರೆ.
ರಾಜ್ಯ ಸರಕಾರ ರಚನೆ ಮಾಡಿರುವ ಎಸಿಬಿಯನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಲು ದೇವೇಗೌಡರು ಪೂರ್ವಾನುಮತಿ ಪಡೆದು ರಾಜಭವನಕ್ಕೆ ಆಗಮಿಸಿ 45 ನಿಮಿಷಗಳು ಕಾಯ್ದರೂ ವಿಶ್ರಾಂತಿಯ ಸಬೂಬು ನೀಡಿ ಭೇಟಿಯನ್ನು ನಿರಾಕರಿಸಿದ ರಾಜ್ಯಪಾಲ ವಿ.ಆರ್.ವಾಲಾ ವರ್ತನೆಯನ್ನು ಖಂಡಿಸಿ ರಾಜಭವನಕ್ಕೆ ಬೀಗ ಜಡಿಯುವ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





