ಸರಕಾರದಲ್ಲಿ ಅಸಮರ್ಥ ಸಚಿವರಿಲ್ಲ: ಖಾದರ್
ಬೆಂಗಳೂರು, ಎ.6: ರಾಜ್ಯ ಸರಕಾರದಲ್ಲಿ ಯಾರೂ ಅಸಮರ್ಥ ಸಚಿವರು ಇಲ್ಲ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರಕಾರದಲ್ಲಿ ಅಸಮರ್ಥ ಸಚಿವರಿದ್ದಾರೆ ಎಂಬುದನ್ನು ನಾನು ಕೇಳೆ ಇಲ್ಲ. ಎಲ್ಲ ಸಚಿವರು ಸಮರ್ಥರಿದ್ದಾರೆ ಎಂದರು.
ಸಚಿವ ಸ್ಥಾನ ಯಾರ ಕುಟುಂಬದ ಆಸ್ತಿಯೂ ಅಲ್ಲ. ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ತಲೆ ಬಾಗುತ್ತೇನೆ ಎಂದು ಖಾದರ್ ಹೇಳಿದರು.
ಸಮಾನ ಮನಸ್ಕ ಶಾಸಕರ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು ಸಭೆಗಳನ್ನು ನಡೆಸಲು ಆಂತರಿಕ ಸ್ವಾತಂತ್ರವಿದೆ. ಆದರೆ, ಅಂತಿಮವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಕಾಂಗ್ರೆಸ್ ಹೈಕಮಾಂಡ್‌ಗೆ ಮಾತ್ರವಿದೆ ಎಂದರು.
Next Story





