Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರಜಾತಂತ್ರದ ಕೆಲವು ಪ್ರಹಸನಗಳು

ಪ್ರಜಾತಂತ್ರದ ಕೆಲವು ಪ್ರಹಸನಗಳು

ವಾರ್ತಾಭಾರತಿವಾರ್ತಾಭಾರತಿ6 April 2016 11:40 PM IST
share
ಪ್ರಜಾತಂತ್ರದ ಕೆಲವು ಪ್ರಹಸನಗಳು

ಪ್ರಹಸನ 1:

ಕಾಡನ್ನು ಉಳಿಸಿ.

ಕಾಡನ್ನು ಬೆಳೆಸಿ.

ಕಾಡನ್ನು ಅಳಿಯಲು ಬಿಡದಿರಿ.

ಹಸಿರು ನಮ್ಮ ಉಸಿರು.

ಕಾಡ್ಗಿಚ್ಚಿಗೆ ಅವಕಾಶ ನೀಡದಿರಿ.

ಇಂಥ ಹಲವು ಫಲಕಗಳನ್ನು ಹಿಡಿದ ಪಟ್ಟಣಗಳ, ನಗರಗಳ, ಮಹಾನಗರಗಳ ನೂರಾರು ಶಾಲಾ ಮಕ್ಕಳು ಬೀದಿ ಮೆರವಣಿಗೆಯಲ್ಲಿ ಹೋಗುತ್ತಾರೆ. ಅವುಗಳನ್ನು ವ್ಯವಸ್ಥೆ ಮಾಡಿದ ಸರಕಾರೇತರ ಅಥವಾ ಸ್ವಯಂಸೇವಾ ಸಂಸ್ಥೆಯ ಪರಿಸರ ರಕ್ಷಣೆಯ ದೊಡ್ಡ ಬ್ಯಾನರ್ ಮೆರವಣಿಗೆಯ ಮುಂಭಾಗದಲ್ಲಿ ಎತ್ತರಕ್ಕೆ ರಾರಾಜಿಸುತ್ತದೆ. ಮೆರವಣಿಗೆ ಮುಗಿದಲ್ಲಿ ಒಂದು ಭಾಷಣ; ಅಗತ್ಯವಿದ್ದರೆ ಸಂಬಂಧಿಸಿದ ಸರಕಾರಿ ಅಧಿಕಾರಿಗಳಿಗೆ ಒಂದು ಮನವಿ ಪತ್ರ. ಮಕ್ಕಳಿಗೆ ಒಂದಿಷ್ಟು ಪಾನೀಯ, ತಿಂಡಿ. ಅವುಗಳ ವೀಡಿಯೊ ಮಾಡುತ್ತಾರೆ. ಅದನ್ನು ಮುದ್ರಣ, ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ವ್ಯಸ್ಥಾಪಕರು ಈ ಬಗ್ಗೆ ಒಂದು ಸಂದರ್ಶನ ನೀಡುತ್ತಾರೆ. ವಿದೇಶಗಳಿಗೂ ಈ ಸುದ್ದಿ ತಲುಪಿಸಲಾಗುತ್ತದೆ. ಯಾರೂ ಕೇಳುವುದಿಲ್ಲ: ಕಾಡು ಎಲ್ಲಿದೆ?

ಸಂಬಂಧಿಸಿದ ಸಂಸ್ಥೆಗೆ ದೇಶ ವಿದೇಶಗಳಿಂದ ಕೆಲವು ಸಾವಿರ ಡಾಲರ್ ದೇಣಿಗೆ ಬರುತ್ತದೆ. ಸಂಸ್ಥೆಯ ಮುಖ್ಯರಿಗೆ ಮರ್ಸಿಡಿಸ್ ಬೆಂಜ್ ಕಾರು ಬಂದರೂ ಬರಬಹುದು. ಎಲ್ಲೋ ಕಾಡು ಉರಿಯುತ್ತಿರುತ್ತದೆ; ಅಳಿಯುತ್ತಿರುತ್ತದೆ. ಮರ ವ್ಯಾಪಾರಿಗಳೂ ಅರಣ್ಯ ಅಧಿಕಾರಿಗಳೂ ರಾಜಕಾರಣಿಗಳೂ ಪ್ರವಾಸಿ ಮಂದಿರ ಇಲ್ಲವೇ ಇತರ ತಾರಾ ಹೊಟೇಲುಗಳಲ್ಲಿ ಒಂದೆಡೆ ಸೇರಿ ಮೇಜವಾನಿ ಮಾಡುತ್ತ ಕೇಕೇ ಹಾಕುತ್ತ ನಲಿಯುತ್ತಾರೆ.

ಇದರ ನಡುವೆ ಬಡವನೊಬ್ಬ ತನ್ನ ಒಂದು ಮರವನ್ನು ಕಡಿದು ಬಳಸಿಕೊಳ್ಳುವುದಕ್ಕೆ ಕಚೇರಿ ಸುತ್ತಿ ಬಳಲಿ ವಿಫಲ ಶ್ರಮದಲ್ಲಿ ಜೀವ ಸವೆಸುತ್ತಾನೆ.

 *** *** *** *** *** *** *** *** *** *** *** *** *** *** *** *** *** *** *** *** *** ***

ಪ್ರಹಸನ 2:

ನಗರವನ್ನು ಸ್ವಚ್ಛಗೊಳಿಸಿ.

ನಗರದ ನೈರ್ಮಲ್ಯವನ್ನು ಕಾಪಾಡಿ.

ದೇಶವನ್ನು ಸ್ವಚ್ಛಗೊಳಿಸಿ.

ಇಂಥ ಫಲಕಗಳ ಸಹಿತ ಪೊರಕೆ ಹಿಡಿದ ನೂರಾರು (ಮತ್ತದೇ ಪಟ್ಟಣ, ನಗರ/ಮಹಾನಗರಗಳ) ಮಕ್ಕಳು ನಗರದ ಒಂದೆಡೆ ಸಭೆ ಸೇರುತ್ತಾರೆ. ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತಿತರ ಗಣ್ಯರು ಸ್ವಚ್ಛತೆಯ ಬಗ್ಗೆ ಭಾಷಣ ಬಿಗಿಯುತ್ತಾರೆ. ಫೋಟೋ ಸೆಷನ್ ನಡೆಯುತ್ತದೆ. ಒಂದಿಷ್ಟು ಕಸವನ್ನು ರಾಶಿ ಹಾಕಿ ಅದನ್ನು ಶಾಸಕರೊ ಸಂಸದರೊ ಅತ್ತಿಂದಿತ್ತ, ಇತ್ತಿಂದತ್ತ ಸರಿಸುತ್ತಾರೆ. ಕೈಚಪ್ಪಾಳೆ, ಜೈಕಾರ, ಉದ್ಘೋಷ ಸಭೆಯನ್ನು ತುಂಬುತ್ತದೆ. ಮಕ್ಕಳು ಪೊರಕೆ ಹಿಡಿದು ಬೀದಿ ಬೀದಿ ಅಲೆಯುತ್ತಾರೆ. ದೊಡ್ಡವರು ಅವರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಕಸವನ್ನು ಸಂಗ್ರಹಿಸಿ ಎಲ್ಲಿಗೋ ಒಯ್ಯುತ್ತಾರೆ. ಆದಿನದ ಮಟ್ಟಿಗೆ ಕೆಲವು ಕಡೆ ಸ್ವಚ್ಛವಾಗುತ್ತದೆ. ದಿನ ಕಳೆದಾಗ ಈ ಸ್ವಚ್ಛತಾ ಅಭಿಯಾನದ ಮಂದಿ ಅದೃಶ್ಯವಾಗುತ್ತಾರೆ. ನಿತ್ಯ ಪೊರಕೆ ಹಿಡಿಯಲು ಅವರೇನು ಗಾಂಧಿಗಳೇ?

ಮತ್ತೆ ಇನ್ನೊಂದು ಅಭಿಯಾನಕ್ಕೆ, ಕ್ಯಾಮರಾ ಕಣ್ಣಿಗೆ, ವೇದಿಕೆ ಸಿದ್ಧವಾಗಬೇಕು.

 *** *** *** *** *** *** *** *** *** *** *** *** *** *** *** *** *** *** 

ಪ್ರಹಸನ 3:

ಭಾರತ್ ಮಾತಾ ಕಿ ಜೈ!

 ಹೀಗೆ ಹೇಳಿದರೆ ಮಾತ್ರ ಭಾರತೀಯರು. ಹೇಳದವನಿಗೆ ಇಲ್ಲಿ ಬದುಕುವ ಹಕ್ಕಿಲ್ಲ. ಅವರು ಪಾಕಿಸ್ತಾನಕ್ಕೆ ಹೋಗಲಿ. (ಅದಕ್ಕೆ ಬೇಕಾದ ಪಾಸ್‌ಪೋರ್ಟ್ ನಮ್ಮ ಸರಕಾರ ಮಾಡಿಕೊಡುತ್ತದೆ. ಪಾಕಿಸ್ತಾನದಿಂದ ಕೊಡಬೇಕಾದ ವೀಸಾವನ್ನು ಯಾರು ಕೊಡುತ್ತಾರೆ?) 

ಹೋಗಲಿ; ಯೋಗಿಯಾದವನು ಸಮಚಿತ್ತವನ್ನು ಕಾಪಾಡಿಕೊಳ್ಳಬೇಕು. ಸಹಿಷ್ಣುವಾಗಿರಬೇಕು. ಯಾರ ಮೇಲೂ ಕೋಪಿಸಭಾರದು. ಬದುಕುವುದು ಬದುಕಗೊಡುವುದು ಆತನ ಧ್ಯೇಯವಾಗಿರಬೇಕು. ಯುದ್ಧಭೂಮಿಯಲ್ಲಿ ಯೋಗದ ಪಾಠ ಹೇಳುವ ರೀತಿಯಲ್ಲಿ ಜಗತ್ತನ್ನು ಕಟ್ಟಬೇಕು. ಇಡೀ ವಿಶ್ವವೇ ಒಂದು ಕುಟುಂಬವಾಗಬೇಕು.

ಭಾರತದ ಯೋಗಕ್ಕೆ ನೂರು ಮುಖ. ಭೌತಿಕ ಮತ್ತು ಆಧ್ಯಾತ್ಮಿಕ. ಆದರೆ ನಾವೀಗ ಅದನ್ನು ಒಂದು ದೈಹಿಕ ವ್ಯಾಯಾಮದ ಸ್ಥಿತಿಗಿಳಿಸಿ ಡ್ರಿಲ್ ಮಾಡಿದಂತೆ ಅಭ್ಯಾಸ ಮಾಡುತ್ತೇವೆ; ಮಾಡಿಸುತ್ತೇವೆ. ಅಪರೂಪಕ್ಕೊಬ್ಬರು ಇವುಗಳ ಅರಿವಿಲ್ಲದೆ ಜ್ಞಾನಯೋಗ, ಕರ್ಮಯೋಗದಲ್ಲಿದ್ದಾರೆ. ಉಳಿದವರು ವಿಷಾದಯೋಗದಲ್ಲಿದ್ದಾರೆ. ಗಾಂಧಿ ಹೇಳಿದ ಅನಾಸಕ್ತಿಯೋಗದಲ್ಲಿ, ಡಿವಿಜಿ ಹೇಳಿದ ಜೀವನಧರ್ಮಯೋಗದಲ್ಲಿ ಯಾರೂ ಇಲ್ಲವೇನೊ? ಆದರೆ ಬಾಬಾ ರಾಮದೇವ್ "ಕಾನೂನಿಗೆ ಹೆದರಿ ಸುಮ್ಮನಿದ್ದೇನೆ; ಇಲ್ಲವಾದರೆ ಭಾರತ್ ಮಾತಾ ಕಿ ಜೈ ಹೇಳದವರ ರುಂಡಗಳನ್ನು ಚೆಂಡಾಡುತ್ತಿದ್ದೆ" ಎಂದು ಅಟ್ಟಹಾಸ ಹಾಕುತ್ತಾರೆ. ಕಾನೂನು ಏನೂ ಮಾಡಲಾರದೆ "ಕುಂಯಿಕುಂಯಿ" ಎನ್ನುತ್ತಾ ಬಾಲಮುದುರಿಸಿ ಮೂಲೆಯಲ್ಲಿ ಕೂರುತ್ತದೆ. ಇನ್ನೆಲ್ಲೋ ಕೂತ ಸಾಧು ಬೆಕ್ಕನ್ನು ಗದರಿಸುತ್ತದೆ. ಈ ಯೋಗವನ್ನು ವಿಶ್ವದೆಲ್ಲೆಡೆ ಹಬ್ಬಿಸಬೇಕು. ಈಗಾಗಲೇ ಪಾಶ್ಚಾತ್ಯರು ಅದರ ಬಗ್ಗೆ ವಿಪರೀತ ಒಲವನ್ನು ತೋರಿಸಿದ್ದಾರೆ. ಅಲ್ಲಿ ಯೋಗ ನೆಲೆಗೊಂಡರೆ ಭಾರತವು ವಿಶ್ವ ವಂದ್ಯವಾಗುತ್ತದೆ.

ಯೋಗೇನ ಚಿತ್ತಸ್ಯ ಪದೇನ ವಾಚಾ

 ಮಲಂ ಶರೀರಸ್ಯ ಚ ವೈದ್ಯಕೇನಾ

 ಯೋಪಾಕರೋತ್ತುಂ ಪ್ರವರಂ ಮುನೀನಾಂ

ಪತಂಜಲಿಂ ಪ್ರಾಂಜಲಿರಾನತೋಶ್ಮಿ॥

***  *** *** *** *** *** *** *** *** *** *** *** *** *** *** *** *** *** *** *** ***

ಪ್ರಹಸನ 4:

2 ಸ್ಟೇಟ್ಸ್ ಎಂಬ ಸಿನೆಮಾ ಬಂದಿತ್ತು. ಚೇತನ್ ಭಗತ್ ಅವರ ಕಾದಂಬರಿಯನ್ನು ಆಧರಿಸಿದ್ದು. ಆದರೆ ನಾವೀಗ ನೋಡುತ್ತಿರುವ ಹೊಸ ಸಿನೆಮಾ ಇನ್ನೊಂದು ಹಂತದ್ದು.

ಕಾಂಗ್ರೆಸ್ ಶಕ್ತಿಹೀನವಾಗಿದೆ. ಅದಕ್ಕೆ ಆಳುವ ಶಕ್ತಿಯಿಲ್ಲ. ಭಾಜಪ ಶಕ್ತಿಯುತವಾಗಿದೆ. ಅದಕ್ಕೆ ಆಳಲು ಗೊತ್ತಿಲ್ಲ. ಇನ್ನುಳಿದ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಅಷ್ಟೋ ಇಷ್ಟೋ ಶಕ್ತಿಯನ್ನು ಹೊಂದಿ ಆರಕ್ಕೆ ಏರದೆ, ಮೂರಕ್ಕೆ ಇಳಿಯದೆ ನಿಂತಿವೆ. ದೇಶದ ಕುರಿತ ನಿಷ್ಠೆ, ಭಕ್ತಿ ಇವೆಲ್ಲವೂ ಸ್ವಾರ್ಥ ಸಾಧನೆಯ, ದ್ವೇಷ ಸಾಧನೆಯ ಒಂದು ನಾಟಕವಾಗುತ್ತಿದೆ. ಮನೆಯೊಳಗಿರಬೇಕಾದ ಜಾತಿ, ಮತ, ಧರ್ಮ ಇವೆಲ್ಲವೂ ಬೀದಿಗೆ ಬಂದಿವೆ. ಸ್ಪರ್ಧೆಗಿಳಿದವರಂತೆ ಜಾತೀಯತೆ ವಿಜೃಂಭಿಸುತ್ತಿದೆ.ಮಹಿಳೆಯರನ್ನು ಗೌರವಿಸುತ್ತೇವೆಂದು ಸದಾ ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸುವ ಈ ದೇಶ ನಿತ್ಯವೆಂಬಂತೆ ರೇಪ್ ಪ್ರಕರಣಗಳನ್ನು ಕಾಣುತ್ತಿದೆ. ಮನುಷ್ಯನ ವಿಕೃತಿಗೆ ನೈಜೀರಿಯಾದ ಬೋಕೊ ಹರಾಮ್ ಮಾತ್ರವಲ್ಲ ನಮ್ಮ ಸರಕಾರೇತರ ಸ್ವಯಂಸೇನೆಗಳು ಪ್ರತೀಕವಾಗಿವೆ.

ಇಸ್ಲಾಮಿಕ್ ಸ್ಟೇಟ್ ಎಂಬ ಸಂಘಟನೆ ತಂದೊಡ್ಡುವ ಅಪಾಯದ ಕುರಿತು ಮಧ್ಯಪೂರ್ವ ರಾಷ್ಟ್ರಗಳು ಎಚ್ಚೆತ್ತಿವೆ. ಆದರೂ ನಿಯಂತ್ರಿಸಲಾಗದೆ ಒದ್ದಾಡುತ್ತಿವೆ. ಹಿಂದೂ ರಾಷ್ಟ್ರವಾಗಿದ್ದ ನೇಪಾಳ ವಾಸ್ತವವನ್ನು ಅರಿತು ಜಾತ್ಯತೀತವಾಗಿದೆ. ಬಾಂಗ್ಲಾದೇಶವೂ ಜಾತೀಯ ಕವಚವನ್ನು ಕಳಚಿಕೊಳ್ಳುತ್ತಿದೆ. ಇದನ್ನು ಅರಿತೂ ಭಾರತದಲ್ಲಿ ಇನ್ನೊಂದು ಬಹುಸಂಖ್ಯಾತ ಹಿಂದೂ ಸ್ಟೇಟ್ ಉದಯವಾಗಲು ಯತ್ನಿಸುತ್ತಿದೆ. ಇದನ್ನು ನಿಯಂತ್ರಿಸುವವರಾರು? ಈ ದೇಶದಲ್ಲಿ ಏನು ನಡೆಯುತ್ತಿದೆ? ನಮ್ಮ ಹೊಣೆಗಾರಿಕೆಯೇನು? ಅತಂತ್ರವಾಗುವುದೇ ಭಾರತದ ಪ್ರಜಾತಂತ್ರದ ಸಾಧನೆಯೇ?

ಇನ್ನೊಂದೆಡೆ ದ್ವೇಷದ ಕಾಡ್ಗ್ಗಿಚ್ಚಿಗೆ ಚಿಂತನೆ ಬಲಿಯಾಗುತ್ತಿದೆ. ನಳಂದ, ತಕ್ಷಶಿಲೆಯಂತಹ ವಿಶ್ವವಿದ್ಯಾನಿಲಯಗಳ ವೈಭವವನ್ನು ಕಂಡ ಈ ದೇಶ ಈಗ ವಿದ್ಯಾರ್ಥಿಗಳ ನಡುವೆ ಕಂದರವನ್ನು ನಿರ್ಮಿಸುತ್ತಿದೆ. ಪೂತನಿಯ ಎದೆ ಎಳೆಯ ಮನಸ್ಸುಗಳಿಗೆ ವಿಷವೂಣಿಸುತ್ತಿದೆ. ಫೇಸ್‌ಬುಕ್‌ನ ಹೊರತಾಗಿ ಇನ್ಯಾವ ಪುಸ್ತಕವನ್ನೂ ಓದದೆ ಇಡೀ ದೇಶದ ಸಂಸ್ಕೃತಿ, ರಾಜಕೀಯ ಸ್ಥಿತಿಯನ್ನು ಚಾಣೂರ-ಮುಷ್ಟಿಕರಂತಹ ಯುವಕರು ಬಣ್ಣಿಸಹೊರಟಿದ್ದಾರೆ. ಎಲ್ಲಿದ್ದಾನೆ ಕೃಷ್ಣ?

1975ರ ತುರ್ತು ಪರಿಸ್ಥಿತಿಯನ್ನು ವಿವರಿಸುವ ಅಡಿಗರ "ದೆಹಲಿಯಲ್ಲಿ" ಪದ್ಯ ಹೇಳುವಂತೆ 

"ಒಗ್ಗಿತೇ ಕಂಕನಿಗೆ ಕಳ್ಳಪೂಜಾರಿತನ

ಬೃಹನ್ನಳೆಗೆ ಹೆಂಕುಳಿಯ ವೇಷ?

ವಲಲ ಮರೆತನೆ ಗದೆಯ

ಸೈರಂಧ್ರಿಗೂ ತರವೆ

ಕೀಚಕನ ಹೆಡೆಯಡಿಯ ತೊತ್ತುಗೆಲಸ?"

*** *** *** *** *** *** *** *** *** *** *** *** *** *** *** *** *** *** *** *** ***

ಪ್ರಹಸನ 5:

ಸಾಧುಸಂತರು ಹಿಂದೆ ಕಾಡಿನಲ್ಲಿದ್ದರು. ಕಾಡು ಅಳಿದಂತೆ ಆನೆಗಳು ಊರಿಗೆ ಬರುತ್ತವೆ. ಆದರೆ ಈ ಸಾಧು ಸಂತರು ನಾಡಿನ ಸುಖಸೌಕರ್ಯಗಳಿಗೆ ಆಸೆಪಟ್ಟಂತೆ ಮಹಾನಗರಗಳಲ್ಲಿ ವೈಭವೋಪೇತ ಜೀವನವನ್ನು ನಡೆಸಲು ಬಯಸಿದ್ದಾರೆ. ಇವರಿಗೆ ಒತ್ತಾಸೆಯಾಗಿ ನಮ್ಮ ವಿವಿಧ ಜಾತಿ ಜನಾಂಗಗಳ ಮಠಗಳು ಅವುಗಳಲ್ಲಿನ ಮಠಾಧೀಶರು ನಿಂತಿದ್ದಾರೆ. ಪ್ರಭುದಾಸ್ ಎಂಬ ಕೃಷ್ಣ ಪಂಥದ ಸನ್ಯಾಸಿಯೊಬ್ಬರು ವಿದ್ಯಾರ್ಥಿಗಳು, ಯುವಜನರು ತುಂಬಿದ್ದ ಸಭೆಯಲ್ಲಿ ಹೇಳಿದ ಮಾರ್ಮಿಕ ಮಾತುಗಳು ಅಂತರ್ಜಾಲದಲ್ಲಿ ಸುದ್ದಿಮಾಡಿದವು. ಅವರು ಹೇಳಿದ್ದು: ಸ್ವಲ್ಪ ಹಣ ಸಂಪಾದಿಸಬೇಕಾದರೆ ಯಾವುದಾದರು ಸಾಮಾನ್ಯ ಉದ್ಯೋಗ ಪಡೆಯಿರಿ. ಇನ್ನೂ ಹೆಚ್ಚು ಸಂಪಾದಿಸಬೇಕಾದರೆ ಸಾಫ್ಟ್‌ವೇರ್ ಉದ್ಯೋಗಕ್ಕೆ ಸೇರಿ. ಮತ್ತೂ ಹೆಚ್ಚು ಸಂಪಾದಿಸಭೆೇಕಾದರೆ ಉದ್ಯಮಿಗಳಾಗಿ ಕೋಟಿ ಸಂಪಾದಿಸಿ; ಅದೂ ಸಾಲದಿದ್ದರೆ ರಾಜಕೀಯ ಸೇರಿ ನೂರಾರು ಕೋಟಿ ಸಂಪಾದಿಸಿ; ಸಾವಿರಾರು ಕೋಟಿ ಸಂಪಾದಿಸಬೇಕಾದರೆ ಸನ್ಯಾಸಿಗಳಾಗಿ. ಅಲ್ಲಿ ಎಲ್ಲವೂ ಇದೆ. ಬಾಬಾ ರಾಮದೇವ್ ಅವರ ಪತಂಜಲಿ ಬ್ರಾಂಡ್ ಈಗ ಇದೇ ರೀತಿಯ ಉದ್ಯಮವಾಗಿದೆ. ಭಾರತೀಯ/ಕರ್ನಾಟಕ ಸಾಧುಸಂತರ, ಮಠಾಧೀಶರ (ಇದನ್ನು ಚರ್ಚ್, ಮಸೀದಿ, ಗುರುದ್ವಾರ ಮುಂತಾದ ಇತರ ಎಲ್ಲ ಪೂಜಾ ಸ್ಥಾನಗಳೆಂದು ಓದಿಕೊಳ್ಳತಕ್ಕದ್ದು!) ಮಾದರಿ ನಡತೆಯ ಕಾಯ್ದೆಯನ್ನು ತರುವ ಕಾಲ ಬಂದಿದೆ.

*** *** *** *** *** *** *** *** *** *** *** *** *** *** *** *** *** *** *** *** ***

ಉಪಸಂಹಾರ:

ಭಾರತೀಯವೆಂಬುದು ಏನು? ಇತರರಿಗೆ ಸುಳ್ಳು ಹೇಳುತ್ತಾ ಕೊನೆಗೆ ಅದನ್ನೇ ಸತ್ಯವೆಂದು ನಂಬುವುದೇ? ಬಹಳ ಹಿಂದೆ ನಾವು ವಿಧಿಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದೆವು ಎಂದು ಪಂಡಿತ್ ನೆಹರು 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶಕ್ಕೆ ಹೆಮ್ಮೆಯಿಂದ ಹೇಳಿದ್ದರು. ಆರೇಳು ದಶಕಗಳ ನಂತರ ಆಗಿರುವುದೇನು? ಮೆಫಿಸ್ಟೋಫಿಲಿಸ್‌ನೊಂದಿಗೆ ಡಾಕ್ಟರ್ ಪಾಸ್ಟಸ್‌ನಂತೆ ಭಾರತವೂ ಒಪ್ಪಂದ ಮಾಡಿಕೊಂಡಿದೆಯೇ? ನಮ್ಮ ಮಕ್ಕಳಿಗೆ ನಾವು ಸ್ಮಶಾನ ಕುರುಕ್ಷೇತ್ರವನ್ನು ಬಿಟ್ಟುಹೋಗುತ್ತೇವೆಯೇ?

ಎಲ್ಲ ಯುಗಗಳೂ ಗೊಂದಲವನ್ನು ಎದುರಿಸಿದಾಗಲೇ ತಮ್ಮ ಅಂತ್ಯವನ್ನು ಕಂಡವು. ಅರಸೊತ್ತಿಗೆಗಳು ದ್ವೇಷ, ಅಸೂಯೆಗಳೇ ಕಾರಣವಾಗಿ ವಿನಾಶಗೊಂಡವು. ಆದರೆ ನಾವೇ ಶಾಶ್ವತವೆಂಬ ರೀತಿಯಲ್ಲಿ ಅತೀ ಅಹಂಕಾರವನ್ನು ತೋರಿಸುವ ಮಂದಿಗೆ ಏನು ಹೇಳಬಹುದು?

 ಸ್ವಯಂಕೃತಾಪರಾಧ ಸಹಸ್ರಾಣಿ...

***

share
ವಾರ್ತಾಭಾರತಿ
ವಾರ್ತಾಭಾರತಿ
Next Story
X