ಕಚೇರಿ ಸ್ಥಳಾಂತರ
ಬೆಂಗಳೂರು, ಎ. 6: ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯುತ್ ಪರೀಕ್ಷಣಾಲಯ ಕೇಂದ್ರ ಕಚೇರಿಯನ್ನು ಎ. 11 ರಿಂದ ಕರ್ನಾಟಕ ರಾಜ್ಯ ನಿರ್ಮಾಣ ನಿಗಮ ನಿಯಮಿತ ನಿರ್ಮಾಣ ಭವನವನ್ನು ಸ್ಥಳಾಂತರಿಸಲಾಗಿದೆ.
ಸದ್ಯ ಈ ಕಚೇರಿಯು 2ನೆ ಮಹಡಿ, ಅಂಚೆ ಪೆಟ್ಟಿಗೆ ಸಂಖ್ಯೆ 5148, ಡಾ. ರಾಜ್‌ಕುಮಾರ್ ರಸ್ತೆ, ಒಂದನೇ ಬ್ಲಾಕ್, ರಾಜಾಜಿನಗರ ಬೆಂಗಳೂರು- 560 010ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಮುಂದೆ ವಿದ್ಯುತ್ ಪರೀಕ್ಷಣಾಲಯದ ಕೇಂದ್ರ ಕಚೇರಿಯೊಡನೆ ವ್ಯವಹರಿಸುವವರು ಮೇಲ್ಕಂಡ ಕಚೇರಿ ವಿಳಾಸವನ್ನು ಸಂಪರ್ಕಿಸುವಂತೆ ರಾಜ್ಯ ಮುಖ್ಯ ವಿದ್ಯುತ್ ಪರೀಕ್ಷಕ ಡಿ.ಎಚ್.ಬಸವರಾಜು ಅವರು ತಿಳಿಸಿದ್ದಾರೆ.
Next Story





