ಪ್ರಧಾನಿ ಐಎಸ್‌ಐ ಏಜೆಂಟ್: ಆಪ್ ಮುಖಂಡ
ಹೊಸದಿಲ್ಲಿ, ಎ.6: ಪ್ರಧಾನಿ ನರೇಂದ್ರ ಮೋದಿ ಐಎಸ್‌ಐ ಏಜೆಂಟ್ ಇದ್ದಂತೆ ದಿಲ್ಲಿ ನೀರಾವರಿ ಖಾತೆ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಕಪಿಲ್ ಮಿಶ್ರಾ ಹೋಲಿಸಿದ್ದಾರೆ,
ಪಾಕಿಸ್ತಾನ ಜಂಟಿ ತನಿಖಾ ತಂಡ ಪಠಾಣ್‌ಕೋಟ್ ದಾಳಿ ಬಗ್ಗೆ ತನಿಖೆ ನಡೆಸಲು ಘಟನಾ ಸ್ಥಳಕ್ಕೆ ಅವಕಾಶ ನೀಡಿದ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿದ ಅವರು, ಈಗ ಐಎಸ್‌ಐ ಏಜೆಂಟ್ ನಮ್ಮ ಪ್ರಧಾನಿಯಾಗಿದ್ದಾರೆಯೇ? ಪ್ರಧಾನಿಯವರು ಭಾರತ ವಿರೋಧಿ ಶಕ್ತಿಗಳಿಗೆ ಶರಣಾಗಿರುವುದು ಗಂಭೀರ ವಿಚಾರವಲ್ಲವೇ? ಎಂದು ಪ್ರಶ್ನಿಸಿದ್ದರು.
Next Story





