ಬೋಳೂರು: ನವೀಕೃತ ಚಿತಾಗಾರ ಉದ್ಘಾಟನೆ

ಮಂಗಳೂರು, ಎ.6: ನಗರದ ಬೋಳೂರಿನ ನವೀಕೃತ ವಿದ್ಯುತ್ ಚಿತಾಗಾರವನ್ನು ಇಂದು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 20 ಲಕ್ಷ ರೂ. ವೆಚ್ಚದಲ್ಲಿ ಈ ಚಿತಾಗಾರ ನವೀಕರಣ ಮಾಡಲಾಗಿದ್ದು, ಇನ್ನು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸ್ಕ್ರಬ್ಬರ್ಸ್ ಮತ್ತು ಪೂರಕ ಚಿಮಿಣಿ ನಿರ್ಮಿಸಬೇಕಿದೆ. ಆಗ ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆ ನೀಡಲಿದೆ ಎಂದರು.
ನಂದಿಗುಡ್ಡ ಚಿತಾಗಾರದ ಸಿಲಿಕಾನ್ ವೆಸೆಲ್ ಹಾಳಾಗಿದ್ದು, ಶೀಘ್ರ ದುರಸ್ತಿಗೊಳಿಸುವುದಾಗಿ ಹೇಳಿದರು. ಮೇಯರ್ ಹರಿದಾಸ್, ಕಾರ್ಪೊರೇಟರ್‌ಗಳಾದ ಲ್ಯಾನ್ಸಿ ಲೋಟ್ ಪಿಂಟೊ, ಶಶಿಧರ ಹೆಗ್ಡೆ, ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಅಧೀಕ್ಷಕ ಇಂಜಿನಿಯರ್ ಶಿವಶಂಕರ ಸ್ವಾಮಿ, ಸಹಾಯಕ ಕಾರ್ಯಕಾರಿ ಇಂಜಿನಿಯರ್ ಯಶವಂತ ಕಾಮತ್, ಗುರುರಾಜ ಮರಳಹಳ್ಳಿ, ವಿಶ್ವನಾಥ್, ಟಿ.ಕೆ.ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
Next Story





