ದ.ಕ. ಕೆಲವೆಡೆ ಅಕಾಲಿಕ ಮಳೆ
ಮಂಗಳೂರು, ಎ.6: ಜಿಲ್ಲೆಯಲ್ಲಿ ಮಂಗಳೂರು ಸೇರಿದಂತೆ ವಿವಿಧ ಕಡೆ ಬುಧವಾರ ಮುಂಜಾನೆಯ ವೇಳೆ ಅಕಾಲಿಕ ಮಳೆ ಸುರಿದಿದೆ. ಮಂಗಳೂರು ತಾಲೂಕಿನ ಹಲವು ಪ್ರದೇಶಗಳಲ್ಲಿ ಇಂದು ಮುಂಜಾನೆ 4ರ ಸುಮಾರಿಗೆ ಕೆಲ ಹೊತ್ತು ಸ್ವಲ್ಪ ಮಳೆ ಯಾಗಿದೆ.
ಸುಳ್ಯ ಸೇರಿದಂತೆ ಕೆಲವೆಡೆ ನಿನ್ನೆ ಸಂಜೆಯೂ ಮಳೆ ಸುರಿದಿದೆ.
ತೀವ್ರ ತಾಪಮಾನದಿಂದ ತತ್ತರಿಸಿದ್ದ ಜನತೆಗೆ ಅಕಾಲಿಕ ಮಳೆ ತಂಪೆರೆದಿದೆ. ಆದರೆ ಮಧ್ಯಾಹ್ನದ ಬಳಿಕ ತಾಪಮಾನ ಎಂದಿನಂತೆ ಜನರನ್ನು ಕಾಡಿದೆ.
Next Story