ಮದುವೆಯಾಗು ಇಲ್ಲದಿದ್ದರೆ ಕೆಳಗೆ ಹಾರುತ್ತೇನೆ ಎಂದು ನೀರಿನ ಟ್ಯಾಂಕ್ ಏರಿ ಕುಳಿತ ವಿದ್ಯಾರ್ಥಿನಿ

ವಾರಣಾಸಿ, ಎಪ್ರಿಲ್.7: ಪ್ರೇಮದ ದೆವ್ವ ಹಿಡಿಸಿಕೊಂಡ ವಿದ್ಯಾರ್ಥಿನಿಯೊಬ್ಬಳು ಎರಡು ಬಾರಿ ನೀರಿನ ಟ್ಯಾಂಕ್‌ಗೆ ಹತ್ತಿ ತನ್ನನ್ನು ಮದುವೆಯಾಗದಿದ್ದರೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ಪ್ರೇಮಿಗೆ ಬೆದರಿಕೆ ಹಾಕಿದ ಘಟನೆ ಬುಧವಾರ ಡಿರೆಕಾ ನೌಕರರ ಕ್ಲಬ್ ಸಮೀಪ ನಡೆದಿರುವುದಾಗಿ ವರದಿಯಾಗಿದೆ.
ಹುಡುಗಿ ಇಂಟರ್‌ಮೀಡಿಯಟ್ ವಿದ್ಯಾರ್ಥಿನಿಯಾಗಿದ್ದು ಅವಳ ಪ್ರಿಯತಮ ಕೂಡಾ ವಿದ್ಯಾರ್ಥಿಯಾಗಿದ್ದಾನೆ. ಮೊದಲ ಬಾರಿ ಅವಳನ್ನು ಅವಳ ಪ್ರಿಯತಮನೇ ಮನವೊಲಿಸಿ ಕೆಳಗೆ ಬರುವಂತೆ ಮಾಡಲು ಯಶಸ್ವಿಯಾಗಿದ್ದ. ಆದರೆ ನಂತರ ಅವಳು ಟ್ಯಾಂಕ್ ಹತ್ತಿ ಮದುವೆಯ ಬೇಡಿಕೆಯಿಟ್ಟು ಅವಳಿಗೆ ಬೆದರಿಕೆಯೊಡ್ಡಿದಾಗ ಪೊಲೀಸರ ನೆರವು ಪಡೆಯಬೇಕಾಯಿತು ಎಂದು ವರದಿಗಳು ತಿಳಿಸಿವೆ.
ಇವರಿಬ್ಬರು ಕಳೆದ ನಾಲ್ಕು ತಿಂಗಳಿಂದ ಪ್ರೀತಿಸುತ್ತಿದ್ದರಂತೆ. ವಿದ್ಯಾರ್ಥಿನಿ ತಾನು ಪ್ರೀತಿಸುವವನನ್ನು ಮದುವೆಯಾಗಲು ಬಯಸುತ್ತಿದ್ದಳು. ಹಿಂದೆ ಅವನು ಅವಳ ಮನೆಯಲ್ಲಿ ಬಾಡಿಗೆದಾರನಾಗಿದ್ದ. ಅವಳ ಪ್ರಿಯತಮನ ತಂದೆ ಸಿಆರ್‌ಪಿಎಫ್ ಹವಾಲ್ದಾರ್ ಆಗಿದ್ದು ಝಾರ್ಕಂಡ್‌ನಲ್ಲಿದ್ದಾರೆ. ಹುಡುಗಿಯ ತಂದೆ ತೀರಿಹೋಗಿದ್ದು, ಹುಡುಗನೊಂದಿಗೆ ತನ್ನ ಮಗಳು ಪ್ರೇಮದಲ್ಲಿದ್ದಾಳೆಂದು ತಿಳಿದಾಗ ಅವಳ ತಾಯಿ ಹುಡುಗನ ಫ್ಯಾಮಿಲಿಯನ್ನು ಬಾಡಿಗೆಯಿಂದ ಬಿಡಿಸಿದ್ದರು ಎಂದು ವರದಿಯಾಗಿದೆ.





