ಒಮನ್ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಪೋರ್‌ಬಂದರಿನ ಅಜಯ್ ಲಾಲ್‌ಚೇತಾ

ರಾಜ್‌ಕೋಟ್, ಎ.7: ಪೋರ್‌ಬಂದರ್‌ನ ಮೂವತ್ತರೆಡರ ಹರೆಯದ ಎಡಗೈ ಸ್ಪಿನ್ನರ್ ಅಜಯ್ ಲಾಲ್‌ಚೇತಾ ಅವರು ಒಮನ್ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.
ಸೌರಾಷ್ಟ್ರ ಅಂಡರ್-16, ಸೌರಾಷ್ಟ್ರ ಅಂಡರ‍್-19, ಸೌರಾಷ್ಟ್ರಅಂಡರ್ -22 ತಂಡದಲ್ಲಿ ಅವರು ಆಡಿದ್ದರು. 2006ರಲ್ಲಿ ಉತ್ತಮ ಉದ್ಯೋಗ ಅರಸಿ ಒಮನ್‌ಗೆ ತೆರಳಿದ್ದರು ಒಮನ್ ತಂಡ ಸೇರ್ಪಡೆಗೊಂಡ ಅವರು 2015, ನ.21ರಂದು ಹಾಂಕಾಂಗ್ ವಿರುದ್ಧ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಓಮನ್ ತಂಡದ ಪರ ಅವರು ಈ ತನಕ 11 ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 7 ವಿಕೆಟ್ ಸಂಪಾದಿಸಿದ್ಧಾರೆ
ಕಳೆದ ಟ್ವೆಂಟಿ -20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದರು. ಮೊಹಲಿಯಲ್ಲಿ ಮಾ.4ರಂದು ಸ್ಕಾಟ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 26ಕ್ಕೆ 3ವಿಕೆಟ್ ಉಡಾಯಿಸಿ ಒಮನ್ ತಂಡಕ್ಕೆ ಸ್ಕಾಟ್ಲೆಂಡ್ ವಿರುದ್ಧ 15 ರನ್‌ಗಳ ಗೆಲುವಿಗೆ ನೆರವಾಗಿದ್ದರು.
Next Story





