ಅಚ್ಛೆ ದಿನ್ ಆನೆ ವಾಲಾ ಹೈ ಎಂದು ನಂಬಿದ್ದಾರೆ 41% ಜನರು !
ಇಟಿ-ಟಿಎನ್‌ಎಸ್ ಸಮೀಕ್ಷೆ

ನವದೆಹಲಿ : ಇಟಿ-ಟಿಎನ್‌ಎಸ್ ಸಮೀಕ್ಷೆಯೊಂದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಈಗಲೂ ತನ್ನ ಪ್ರಮುಖ ಬೆಂಬಲಿಗರಾದ ನಗರ ಪ್ರದೇಶದ, ಮುಖ್ಯವಾಗಿ ದೇಶದ ಏಳು ಅತ್ಯಂತ ದೊಡ್ಡ ನಗರಗಳಲ್ಲಿ ವಾಸಿಸುವ ವೃತ್ತಿಪರರಲ್ಲಿ ತಮ್ಮ ಛಾಪನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ಸರಿಸುಮಾರು ಎರಡು ವರ್ಷಗಳಾದ ನಂತರ ಹಲವು ವಿವಾದಗಳಿಗೆ ಸಿಲುಕಿರುವ ಹೊರತಾಗಿಯೂ ಹಾಗೂ ಸುಧಾರಣಾವಾದಿ ಕ್ರಮಗಳನ್ನು ಜಾರಿಗೊಳಿಸುವ ಆಶ್ವಾಸನೆಯನ್ನು ಈಡೇರಿಸದ ಹೊರತಾಗಿಯೂ ಸರಕಾರ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆಯೆಂದು ಈ ಸಮೀಕ್ಷೆ ತಿಳಿಸುತ್ತದೆ.
ಸರಕಾರದ ಆರ್ಥಿಕ ನೀತಿಗಳಿಗೆ ಸಮೀಕ್ಷೆಯಲ್ಲಿ ಭಾಗವಹಿಸಿದ 86% ಮಂದಿ ತಮ್ಮ ಒಪ್ಪಿಗೆ ಸೂಚಿಸಿದ್ದರೆ,62% ಜನರುಸರಕಾರ ಉದ್ಯೋಗಗಳನ್ನು ಸೃಷ್ಟಿಸುವ ತನ್ನ ಆಶ್ವಾಸನೆಗಳನ್ನು ಈಡೇರಿಸಿದೆಯೆಂದು ತಿಳಿಸಿದ್ದಾರೆ. 58% ಮಂದಿ ದೇಶದ ಭವಿಷ್ಯ ಮೋದಿ ಆಡಳಿತದಲ್ಲಿ ಉತ್ತಮವಾಗುವುದೆಂದು ಹೇಳಿದ್ದಾರೆ. ಇನ್ನೊಂದು ವಿಧದಲ್ಲಿ ಅವರೆಲ್ಲರೂ ‘ಅಚ್ಛೆ ದಿನ್ ಆನೆ ವಾಲಾ ಹೈ’ (ಅಚ್ಛೆ ದಿನ್ ಬರಬಹುದು) ಎಂದು ನಂಬಿದ್ದಾರೆ.
ಜೆಎನ್‌ಯುವಿವಾದದಿಂದ ಹುಟ್ಟಿಕೊಂಡ ರಾಷ್ಟ್ರೀಯತೆ ಹಾಗೂ ದೇಶದ್ರೋಹದ ವಿಚಾರದ ಚರ್ಚೆಗಳ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದವರನ್ನು ಪ್ರಶ್ನಿಸಲಾಗಿ, ಅವರಲ್ಲಿ 46% ಮಂದಿ ಈ ವಿವಾದ ಕಾಂಗ್ರೆಸ್ತಪ್ಪಿನಿಂದ ನಡೆದಿದೆಯೆಂದರೆ52% ಮಂದಿ ಸರಕಾರ ಈ ವಿಚಾರದಲ್ಲಿ ಸರಿಯಾದ ಕ್ರಮ ಕೈಗೊಂಡಿದೆಯೆಂದಿದ್ದಾರೆ.
ಸರಕಾರದ ಬಗ್ಗೆ ದೇಶದೆಲ್ಲೆಡೆಯಿರುವ ಜನರ ಭಾವನೆಗಳನ್ನು ಈ ಸಮೀಕ್ಷೆತಿಳಿಸುತ್ತಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಮೋದಿ ಹಾಗೂ ಬಿಜೆಪಿಯ ಕಟ್ಟಾ ಅನುಯಾಯಿಗಳೆಂದೇ ತಿಳಿಯಲಾದ ಮಂದಿಯಲ್ಲಿ ಸರಕಾರ ಹಾಗೂ ಪ್ರಧಾನಿಯ ಬಗ್ಗೆ ಇರುವ ಜನಪ್ರಿಯತೆಯ ಪ್ರಮಾಣವನ್ನು ಅಳೆಯಲು ಮಾಡಿದ ಪ್ರಯತ್ನವೆಂದೇ ಇದನ್ನು ಹೇಳಬಹುದು.
ಸಮೀಕ್ಷಾಕಾರರು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್ ಹಾಗೂ ಅಹಮದಾಬಾದ್ಇಲ್ಲಿನ 24ರಿಂದ 50 ವಯೋಮಿತಿಯ ಹಾಗೂ ವಾರ್ಷಿಕ ರೂ 3 ಲಕ್ಷದಿಂದ ರೂ. 20 ಲಕ್ಷ ಆದಾಯವಿರುವ 2000 ಜನರನ್ನು ಸಮೀಕ್ಷೆಯಲ್ಲಿ ಭಾಗಿಯಾಗಿಸಿದ್ದರು.
ಸಮೀಕ್ಷೆಯ ಅಂತಿಮ ಫಲಿತಾಂಶ ಹೀಗಿದೆ :ಮೋದಿಯವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ ಬಹಳ ಜನಪ್ರಿಯರು ಹಾಗೂಮೋದಿಗೆ 7.68 ಅಂಕ ದೊರೆತಿದ್ದರೆ ರಾಹುಲ್‌ಗೆ ದೊರೆತ ಅಂಕಗಳು3.61. ಅವರಿಗಿಂತ ವಿತ್ತ ಸಚಿವ ಅರುಣ್ ಜೇಟ್ಲಿಹೆಚ್ಚು ಅಂಕ (5.86) ಗಳಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ 41% ಮಂದಿ ಪ್ರಧಾನಿಗೆ 10ರಲ್ಲಿ 9 ಅಂಕ ನೀಡಿದ್ದಾರೆ.







