ಪುತ್ತೂರು: ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿದ್ಯಾ ಪ್ರಥಮ ಸ್ಥಾನ

ಪುತ್ತೂರು: ಶ್ರೀವಿದ್ಯಾ ಪಾದೇಕಲ್ಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಕ್ಟೋಬರ್ 2015 ರಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ದ.ಕ.ಜಿ.ಪ.ಸ.ಮಾ.ಹಿ.ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾ 95.5% ಅಂಕಗಳನ್ನು ಪಡೆದು ಪುತ್ತೂರು ಕೇಂದ್ರದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇವಳು ಶ್ರೀ ಗಾನಸರಸ್ವತಿ ಸಂಗೀತ ಕಲಾಶಾಲೆಯ ಶ್ರೀಮತಿ ವೀಣಾ ರಾಘವೇಂದ್ರ ಅವರ ಶಿಷ್ಯೆ. .ವಿವೇಕಾನಂದ ಎಂಜಿನಿಯರಿಂಗ್ ಮಹಾವಿದ್ಯಾಲಯದ ಗಣಿತ ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಕುಮಾರ್ ಪಿ.ಎನ್ ಹಾಗೂ ದಿವ್ಯ ಕೆ.ಎಸ್.ರವರ ಪುತ್ರಿ.
Next Story





