ಪುತ್ತೂರು: ವಿವಾಹಕ್ಕಾಗಿ ಚಿನ್ನಾಭರಣ ದಾನ

ಪುತ್ತೂರು: ಪುತ್ತೂರಿನಲ್ಲಿ ಎಂ.ಟಿ.ರಸ್ತೆಯಲ್ಲಿನ ಕರವಡ್ತ ವಲಿಯುಲ್ಲಾಹಿ ಫ್ರೆಂಡ್ಸ್ ಕಮಿಟಿ ವತಿಯಿಂದ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಬೀಪಾತುಮ್ಮ ಎಂಬವರ ಅನಾಥ ಪುತ್ರಿ ಮಮ್ತಾಜ್ ಅವರ ವಿವಾಹಕ್ಕಾಗಿ ರೂ. 35 ಸಾವಿರ ಮೌಲ್ಯದ ಚಿನ್ನಾಭರಣವನ್ನು ನೀಡಲಾಯಿತು.
ಊರಿನ ದಾನಿಗಳ ಸಹಕಾರದಲ್ಲಿ ಸಂಗ್ರಹಿಸಲಾದ ಹಣದಲ್ಲಿ ಚಿನ್ನಾಭರಣ ಖರೀದಿಸಲಾಗಿತ್ತು. ಕಮಿಟಿಯ ಅಧ್ಯಕ್ಷ ಅಬ್ದುಲ್ ರಝಾಕ್ ಚಿನ್ನಾಭರಣವನ್ನು ಬೀಪಾತುಮ್ಮ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ಕಾರ್ಯದರ್ಶಿ ಸುಲೈಮಾನ್ ಒಳತ್ತಡ್ಕ, ಖಜಾಂಜಿ ಅಬ್ದುಲ್ ಜಲೀಲ್ ಗೋಳಿಕಟ್ಟೆ, ಸದಸ್ಯ ಅಬ್ದುಲ್ಲ ಉಪಸ್ಥಿತರಿದ್ದರು.
Next Story





