Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಂದು ಐಐಟಿಯಿಂದ ತಿರಸೃತನಾಗಿದ್ದ...

ಅಂದು ಐಐಟಿಯಿಂದ ತಿರಸೃತನಾಗಿದ್ದ ವ್ಯಕ್ತಿಯೀಗ 50 ಕೋ.ರೂ.ವಹಿವಾಟಿನ ಕಂಪನಿಯ ಒಡೆಯ!

ವಾರ್ತಾಭಾರತಿವಾರ್ತಾಭಾರತಿ7 April 2016 8:58 PM IST
share
ಅಂದು ಐಐಟಿಯಿಂದ ತಿರಸೃತನಾಗಿದ್ದ ವ್ಯಕ್ತಿಯೀಗ 50 ಕೋ.ರೂ.ವಹಿವಾಟಿನ ಕಂಪನಿಯ ಒಡೆಯ!

ಹೈದರಾಬಾದ್,ಎ.7: ಶ್ರೀಕಾಂತ ಬೊಲ್ಲ ಆಂಧ್ರಪ್ರದೇಶದ ಪೂರ್ವ ಕರಾವಳಿಯಲ್ಲಿರುವ ಕುಗ್ರಾಮದಲ್ಲಿ ಹುಟ್ಟಿದಾಗಲೇ ದೃಷ್ಟಿಯನ್ನು ಕಳೆದುಕೊಂಡಿದ್ದ. ಈ ಅಂಧ ಮಗುವನ್ನು ಸಾಕುವುದಕ್ಕಿಂತ ಅದನ್ನು ದೂರ ಮಾಡುವುದೇ ಉತ್ತಮ ಎಂದು ನೆರೆಕರೆಯವರು ಶ್ರೀಕಾಂತನ ಹೆತ್ತವರಿಗೆ ಫುಕ್ಕಟೆ ಸಲಹೆಯನ್ನು ನೀಡಿದ್ದರು. ಆದರೆ ತಿಂಗಳಿಗೆ ಕೇವಲ 1,600 ರೂ.ಗಳನ್ನು ದುಡಿಯುತ್ತಿದ್ದ ಬಡ ಹೆತ್ತವರು ಮಗನಿಗೆ ಉತ್ತಮ ಶಿಕ್ಷಣ ನೀಡಿ ಆತನನ್ನು ಸ್ವಾವಲಂಬಿಯಾಗಿಸಲು ಅಂದೇ ನಿರ್ಧರಿಸಿದ್ದರು.

       ನಾನು ಏನು ಬೇಕಾದರೂ ಮಾಡಬಲ್ಲೆ

ಈಗ 23 ವರ್ಷಗಳ ಬಳಿಕ ಅದೇ ಶ್ರೀಕಾಂತ ಬೊಲ್ಲ ಹೈದರಾಬಾದ್‌ನ ಬೊಲ್ಲಂತ್ ಇಂಡಸ್ಟ್ರೀಸ್‌ನ ಸಿಇಓ ಆಗಿದ್ದಾರೆ. ಪರಿಸರಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುವ ಈ ಕಂಪನಿಯು ನಿರುದ್ಯೋಗಿ,ದೈಹಿಕ ವಿಕಲ ವ್ಯಕ್ತಿಗಳಿಗೆ ಉದ್ಯೋಗ ನೀಡುವುದರ ಜೊತೆಗೆ ವಾರ್ಷಿಕ 50 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ.

ಜಗತ್ತು ನನ್ನತ್ತ ನೋಡಿ ‘ಶ್ರೀಕಾಂತ,ನಿನಗೆ ಏನೂ ಮಾಡಲು ಸಾಧ್ಯವಿಲ್ಲ ’ಎಂದು ಹೇಳಿದರೆ ನಾನು ಅದನ್ನು ತಿರುಗಿ ನೋಡಿ ‘ನಾನು ಏನು ಬೇಕಾದರೂ ಮಾಡಬಲ್ಲೆ ’ಎಂದು ಹೇಳುತ್ತೇನೆ ಎನ್ನುವ ಛಾತಿ ಶ್ರೀಕಾಂತ ಅವರದ್ದು. ತನಗೆ ವಿದ್ಯಾಭ್ಯಾಸ ಕೊಡಿಸಿದ್ದಕ್ಕಾಗಿ ತನ್ನ ಹೆತ್ತವರಿಗೆ ತಾನು ಚಿರಋಣಿ ಎನ್ನುವ ಶ್ರೀಕಾಂತ,ತಾನು ಈ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎನ್ನುತ್ತಾರೆ.

              ಡಾ.ಕಲಾಂ ಜೊತೆ ಕಾರ್ಯ

ಶ್ರೀಕಾಂತ ತನ್ನ ಪ್ರಾರಂಭಿಕ ಶಿಕ್ಷಣ ಪಡೆದ ಶಾಲೆಗೆ ಅವರ ಬಗ್ಗೆ ಕಿಂಚಿತ್ತೂ ದಯೆಯಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸದಾ ಅವರನ್ನ್ನು ಗೇಲಿ ಮಾಡುತ್ತಲೇ ಇದ್ದರು. ಆದರೆ ಬಳಿಕ ಶ್ರೀಕಾಂತ ವಿಶೇಷ ಮಕ್ಕಳಿಗಾಗಿಯೇ ಇರುವ ಶಾಲೆಯನ್ನು ಸೇರಿಕೊಂಡಿದ್ದರು. ಅಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಶ್ರೀಕಾಂತ ಚದುರಂಗ ಮತ್ತು ಕ್ರಿಕೆಟ್‌ನಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದರು.

10ನೇ ತರಗತಿಯಲ್ಲಿ ಶೇ.90ರಷ್ಟು ಅಂಕಗಳನ್ನು ಪಡೆದಿದ್ದರೂ ಪಿಯುಸಿ ವಿಜ್ಞಾನ ತರಗತಿಗೆ ಸೇರಿಕೊಂಡು ಕೋರ್ಸ್ ಪೂರೈಸಲು ಆತ ತುಂಬ ಕಷ್ಟಪಟ್ಟಿದ್ದರು. ಅದಾದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಐಐಟಿಗಳು ಮತ್ತು ಇತರ ಉನ್ನತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಬಯಸಿ ಅರ್ಜಿಗಳನ್ನು ಸಲ್ಲಿಸಿದಾಗಲೂ ತೊಂದರೆಗಳ ಸರಮಾಲೆಯೇ ಎದುರಾಗಿತ್ತು. ಆತ ಅಂಧ ಎಂಬ ಕಾರಣಕ್ಕೆ ಐಐಟಿ ಹಾಲ್‌ಟಿಕೆಟ್ಟನ್ನೇ ನೀಡಿರಲಿಲ್ಲ.
ಹುಟ್ಟಿನಿಂದ ಅಂಧನಾಗಿದ್ದರೂ ಸಾಧನೆಯಿಂದ ನಾನು ಅಂಧನಾಗಿರಲಿಲ್ಲ. ಆದರೆ ಜನರ ಗ್ರಹಿಕೆಗಳು ನನ್ನನ್ನು ನಿಜವಾಗಿ ಅಂಧನನ್ನಾಗಿಸಿದವು ಎಂದು ನೆನಪಿಸಿಕೊಂಡಿದ್ದಾರೆ ಶ್ರೀಕಾಂತ.

ಅವರ ಸಹನೆ ಮತ್ತು ಬುದ್ಧಿಮತ್ತೆ ಅವರಿಗೆ ವೌಲ್ಯಾಧಾರಿತ ಶಿಕ್ಷಣದ ಮೂಲಕ ಯುವಜನರ ಸಬಲೀಕರಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಲೀಡ್ ಇಂಡಿಯಾ ಯೋಜನೆಗಾಗಿ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನೊದಗಿಸಿತ್ತು.

    ಐಐಟಿಯಿಂದ ತಿರಸ್ಕೃತನನ್ನು ಎಂಐಟಿ ಅಪ್ಪಿಕೊಂಡಿತು

ಐಐಟಿಯಿಂದ ತಿರಸ್ಕೃತಗೊಂಡ ಶ್ರೀಕಾಂತರ ಮನೋಬಲ ಇನ್ನಷ್ಟು ಹೆಚ್ಚಾಯಿತು ಮತ್ತು ಅವರು ವಿದೇಶಿ ವಿವಿಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಅಮೆರಿಕದ ಅತ್ಯಂತ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಯಲ್ಲಿ ಪ್ರವೇಶ ಗಿಟ್ಟಿಸಿಕೊಂಡ ಮೊದಲ ಅಂತಾರಾಷ್ಟ್ರೀಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಅವರದಾಗಿತ್ತು. ಅಮೇರಿಕದಲ್ಲಿ ಓದುತ್ತಿರುವಾಗಲೇ ಅವರು ಭಾರತಕ್ಕೆ ಮರಳಿದ ನಂತರ ತನ್ನಂತಹ ದೈಹಿಕ ವಿಕಲರ ಕನಸುಗಳನ್ನು ನನಸಾಗಿಸಲು ಏನನ್ನಾದರೂ ಮಾಡಬೇಕು ಎಂಬ ದೃಢ ನಿರ್ಧಾರವನ್ನು ತಳೆದಿದ್ದರು.

ಸುಮಾರು 3000 ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೃತ್ತಿಪರತೆಯನ್ನು ಪಡೆದುಕೊಳ್ಳುವಲ್ಲಿ ನೆರವಾದ ಶ್ರೀಕಾಂತರಿಗೆ ಅವರ ಉದ್ಯೋಗದ ಬಗ್ಗೆ ಚಿಂತೆಯುಂಟಾದಾಗ ತಾನೇ ಸ್ವಂತ ಕಂಪನಿಯನ್ನು ಸ್ಥಾಪಿಸಿದರು. ಇಂದು ಅವರ ಕಂಪನಿಯಲ್ಲಿ ಸುಮಾರು 150 ದೈಹಿಕ ವಿಕಲರು ಅನ್ನವನ್ನು ಕಂಡುಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X