ಕಾರ್ಯನಿರತ ಪತ್ರಕರ್ತರ ಸಂಘ: ವಾರ್ಷಿಕ ಪ್ರಶಸ್ತಿ ಪ್ರಕಟ
ಶಿವಮೊಗ್ಗ, ಎ. 7: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎರಡನೆಯ ವರ್ಷದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ. ಜೀವಮಾನ ಸಾಧನೆಗೆ ನೀಡಲಾಗುವ ‘ಮಿಂಚು ಶ್ರೀನಿವಾಸ್’ ಪ್ರಶಸ್ತಿಯನ್ನು ಸಾಗರದ ಹಿರಿಯ ಪತ್ರಕರ್ತ ಅ.ರಾ.ಶ್ರೀನಿವಾಸ್‌ರವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ರವಿಕುಮಾರ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾ ಡಿದರು. ಅತ್ಯುತ್ತಮ ರಾಜಕೀಯ ವಿಶ್ಲೇಷಣಾ ವರದಿಗೆ ನೀಡಲಾಗುವ ‘ಎಂ.ನಾಗೇಂದ್ರರಾವ್’ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ್ತಿ ಕವಿತಾ ಪ್ರಶಾಂತ್, ಅತ್ಯುತ್ತಮ ಸಾಂಸ್ಕೃತಿಕ ವರದಿ ‘ಎಚ್.ಎಸ್.ರಂಗಸ್ವಾಮಿ’ ಪ್ರಶಸ್ತಿಗೆ ಮಲೆನಾಡು ಮಿತ್ರ ಪತ್ರಿಕೆ ವರದಿಗಾರ ದತ್ತಾತ್ರೇಯ ಹೆಗಡೆ, ಅತ್ಯುತ್ತಮ ಮಾನವೀಯ ವರದಿ ‘ಗಂಗಮ್ಮ ನಾಗಯ್ಯ’ ಪ್ರಶಸ್ತಿಗೆ ಎಚ್ಚರಿಕೆ ಪತ್ರಿಕೆಯ ವರದಿಗಾರ ನಿರಂಜನ ಮೂರ್ತಿ ಆಯ್ಕೆಯಾಗಿ
್ದಾರೆ. ಅತ್ಯುತ್ತಮ ಛಾಯಾಚಿತ್ರ ‘ಪ್ರಮೋದ್ ಮೆಳ್ಳಿಘಟ್ಟಿ’ ಪ್ರಶಸ್ತಿಗೆ ಶಿಕಾರಿಪುರದ ಪ್ರಜಾ ವಾಣಿ ಪತ್ರಿಕೆ ಛಾಯಾಗ್ರಾಹಕ ಎಚ್.ಎಸ್.ರಘು, ಅತ್ಯುತ್ತಮ ತನಿಖಾ ವರದಿ ‘ನಂಜುಂಡ ಶಾಸ್ತ್ರಿ’ ಪ್ರಶಸ್ತಿಗೆ ಸಾಗರದ ಚಾರ್ವಾಕ, ಕನ್ನಡಪ್ರಭ ಪತ್ರಿಕೆಯ ವರದಿ ಗಾರ ಎಚ್.ಬಿ.ರಾಘವೇಂದ್ರ ಅವರಿಗೆ ನೀಡಲಾಗುತ್ತಿದೆ ಎಂದರು. ಅತ್ಯುತ್ತಮ ದೃಶ್ಯ ಮಾಧ್ಯಮ ವರದಿ ‘ಪೇ. ದೇವಣ್ಣ ಮತ್ತು ಛಲಗಾರ ಗಣಪತಿ’ ಪ್ರಶಸ್ತಿಗೆ ಸ್ಕೈಲೈನ್ ವಾಹಿನಿಯ ವರದಿಗಾರ ಗೋ.ವ.ಮೋಹನ ಕೃಷ್ಣ, ಅತ್ಯುತ್ತಮ ಸಾಹಿತ್ಯಕ ವರದಿ ‘ಡಾ.ವಿಶ್ವನಾಥ್ ರಾವ್ (ನಾಗಾನಂದ)’ ಪ್ರಶಸ್ತಿಗೆ ಮಲೆನಾಡ ಎಕ್ಸ್ ಪ್ರೆಸ್ ಪತ್ರಿಕೆಯ ಶಿ.ಜು.ಪಾಶರವರು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅತ್ಯುತ್ತಮ ಪರಿಸರ ವರದಿಗೆ ಹೊಸದಿಗಂತ ಪತ್ರಿಕೆಯ ವರದಿಗಾರ್ತಿ ರೂಪಾಸಾಕ್ರೆ ಹಾಗೂ ಅತ್ಯುತ್ತಮ ಕ್ರೀಡಾ ವರದಿಗೆ ತೀರ್ಥಹಳ್ಳಿಯ ಡಾನ್ ರಾಮಣ್ಣ ಅವರಿಗೆ ನೀಡಲಾಗುತ್ತಿದೆ ಎಂ







