ಉಡುಪಿ: ಜಿಲ್ಲಾಮಟ್ಟದ ಹಗ್ಗ-ಜಗ್ಗಾಟ ಸ್ಪರ್ಧೆ

ಉಡುಪಿ, ಎ.7: ಅಂಬಲಪಾಡಿ ಬಂಕೇರ್‌ಕಟ್ಟದಲ್ಲಿ ಎನ್.ಸಿ. ಯೂತ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಸ್ಪಧೆಯಲ್ಲಿ ‘ಪಟ್ಟೆ ಜೋಕುಲ ಕಂಬುಲ’ ಹಾಗೂ ‘ಪಡುಕೆರೆ ಫ್ರೆಂಡ್ಸ್’ ತಂಡಗಳು ಅಗ್ರಸ್ಥಾನಗಳನ್ನು ಗೆದ್ದುಕೊಂಡವು.
ಪುರುಷರ ವಿಭಾಗದಲ್ಲಿ ಕೈಪುಂಜಾಲಿನ ಜೈ ವೀರಮಾರುತಿ ತಂಡ ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕೊಳ ಹನುಮಾನ್ ನಗರದ ಹನುಮಾನ್ ವಿಠೋಬ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡವು. ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಸ್ಪರ್ಧಾಕೂಟವನ್ನು ಉದ್ಘಾ ಟಿಸಿದರು. ಮಾಜಿ ಶಾಸಕ ಕೆ.ರಘುಪತಿ ಭಟ್ ಹಗ್ಗ ಜಗ್ಗಾಟದ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ, ಉಡುಪಿ ಮತ್ತು ದ.ಕ.ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು. ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಎನ್.ಸಿ.ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ ಗೌರವ ಸಲಹೆಗಾರ ಎ.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





