ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಮೆಡಿಕಲ್ ಟೂರಿಸಂ ಫೆಸಿಲಿಟೇಟರ್ ಕೋರ್ಸ್ ಆರಂಭ

ದುಬೈ ಎ.7: ಗಲ್ಫ್ ಮೆಡಿಕಲ್ ಯುನಿವ ರ್ಸಿಟಿಯಲ್ಲಿ ‘ಮೆಡಿಕಲ್ ಟೂರಿಸಂ ಫೆಸಿಲಿಟೇಟರ್ ಸರ್ಟಿಫಿಕೇಟ್ ಕೋರ್ಸ್’ನ್ನು ಆರಂಭಿಸಲಾಗಿದೆ.
ಮೂರು ತಿಂಗಳ ಕೋರ್ಸ್ ಇದಾ ಗಿದ್ದು, ಇತ್ತೀಚೆಗೆ ಅಜ್ಮಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಕೋರ್ಸ್‌ಗೆ ಚಾಲನೆ ನೀಡಲಾಯಿತು. ಅಭ್ಯರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ವಾರಾಂತ್ಯದಲ್ಲಿ ಬೆಳಗ್ಗೆ ಹಾಗೂ ಸಂಜೆ ತರಗತಿಯನ್ನು ನಡೆಸಲಾಗುತ್ತದೆ. ವಿವಿಧ ಪ್ರವಾಸ ಉದ್ಯಮ ಸಂಸ್ಥೆಗಳ ಮಾಹಿತಿ, ವೈದ್ಯಕೀಯ ವ್ಯವಸ್ಥೆ, ಕಾನೂನು ಹಾಗೂ ನೈತಿಕ ವಿಚಾರಗಳನ್ನು ಒಳಗೊಂಡಂತೆ ಈ ಕೋರ್ಸ್ ಮೆಡಿಕಲ್ ಟೂರಿಸಂ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story





