Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪನಾಮಾ ಪೇಪರ್: ಗಣ್ಯಾತಿ ಗಣ್ಯರ ಹೂರಣ...

ಪನಾಮಾ ಪೇಪರ್: ಗಣ್ಯಾತಿ ಗಣ್ಯರ ಹೂರಣ ಬಯಲು?

ರಮಾನಂದ ಶರ್ಮಾರಮಾನಂದ ಶರ್ಮಾ7 April 2016 11:41 PM IST
share
ಪನಾಮಾ ಪೇಪರ್: ಗಣ್ಯಾತಿ ಗಣ್ಯರ ಹೂರಣ ಬಯಲು?

ದಿಲ್ಲಿಯ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ, ಪನಾಮಾ ಪೇಪರ್ ಹೆಸರಿನಲ್ಲಿ ವಿಶ್ವದ ಹಲವು ರಾಷ್ಟ್ರಗಳ ಸಿನೆಮಾ, ಕಾರ್ಪೊರೇಟ್ ಉದ್ಯಮ, ರಾಜಕೀಯ ಮತ್ತು ಕ್ರೀಡಾ ರಂಗದ ಗಣ್ಯಾತಿಗಣ್ಯರು ವಿದೇಶಗಳ ರಹಸ್ಯ ಕಂಪೆನಿಗಳಲ್ಲಿ ಭಾರೀ ಪ್ರಮಾಣದ ಹಣ ತೊಡಗಿಸಿದ ಪ್ರತಿಷ್ಠಿತ ಸೆಲೆಬ್ರಿಟಿಗಳ ವಿಸ್ತೃತ ವರದಿಯನ್ನು ಪ್ರಕಟಿಸಿದ್ದು, ಈ ಹೆಸರುಗಳನ್ನು ನೋಡಿ, ಪ್ರಜ್ಞಾವಂತ ಜಗತ್ತು ಬೆಚ್ಚಿ ಬಿದ್ದಿದೆ. ಈ ಪಟ್ಟಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರಿದ್ದು, ಇವರಲ್ಲಿ ಸಮಾಜದ ಪ್ರತಿಷ್ಠಿತ who is who ಸೆಲೆಬ್ರಿಟಿಗಳು ಕಾಣುತ್ತಿದ್ದು, ದೇಶ ‘‘ಇವರೂ ಇದರಲ್ಲಿ ಇದ್ದಾರಾ’’ ಎಂದು ದಿಗ್ಭ್ರಮೆ ವ್ಯಕ್ತಪಡಿಸುತ್ತಿದೆ. ಇದರಲ್ಲಿ ಕರ್ನಾಟಕದ ಮಂತ್ರಿಗಳೊಬ್ಬರ ಮಗನೂ ಇದ್ದು. ಪ್ರಖ್ಯಾತ ವಕೀಲ ಹರೀಶ್ ಸಾಳ್ವೆ, ಸೋಲಿ ಸೊರಾಬ್ಜಿಯವರ ಮಗ, ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ರೈ ಯಂಥ ಪ್ರತಿಷ್ಠಿತರು ಇದ್ದಾರಂತೆ. ಉದ್ಯಮಿಗಳು ಇಂತಹ ಆರೋಪಗಳನ್ನು ಎದುರಿಸುವದು ತೀರಾ ಸಾಮಾನ್ಯ. ಆದರೆ, ನ್ಯಾಯ, ನೀತಿ, ಧರ್ಮಕ್ಕಾಗಿ ಹೋರಾಡುವ ಕೆಲವು ವಕೀಲರೂ ಇದರಲ್ಲಿ ಕಾಣುವುದು ಸೋಜಿಗದ ವಿಷಯ. ಭಾರತೀಯರ idol ಮತ್ತು ಬಿಗ್ ಬಿ ಎಂದೇ ಜನಪ್ರಿಯರಾದ, ಅಮೂಲ್ಯ ಭಾರತದ ರಾಯಭಾರಿಯಾದ ಅಮಿತಾಭ್ ಕೂಡಾ ಈ ಸಮೂಹದಲ್ಲಿರುವುದು ತೀರಾ ಆಶ್ಚರ್ಯ. ವಿಪರ್ಯಾಸವೆಂದರೆ ಕಳೆದ ವಾರವಷ್ಟೇ ಅವರು ಭಾರತದ ಮುಂದಿನ ರಾಷ್ಟ್ರಪತಿಯಾಗಬಹುದು ಎನ್ನುವ ವದಂತಿಗಳು ಮಾಧ್ಯಮಗಳಲ್ಲಿ ಹರಿದಾಡಿತ್ತು.

ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಜನತೆ ಮತ್ತು ಸಂಘ ಸಂಸ್ಥೆಗಳು ನಮ್ಮಂತೆ ತಪ್ಪುಗಳನ್ನು ಮಾಡುತ್ತಾರೆ ಮತ್ತು ಅಪರಾಧಗಳನ್ನು ಎಸಗುತ್ತಾರೆ. ಮೊದ ಮೊದಲು ಅವುಗಳನ್ನು ಸಮರ್ಥಿಸಿಕೊಂಡರು. ಕೊನೆಗೊಮ್ಮೆ ಬಾಯಿಬಿಟ್ಟು ಟೆನಿಸ್ ತಾರೆ ಶರಪೋವಾಳಂತೆ ತಮ್ಮ ಹೃದಯವನ್ನು ಹಗುರಮಾಡಿಕೊಳ್ಳುತ್ತಾರೆ. ಪನಾಮಾ ಮೂಲದ ಮೊಸ್ಸಾಕ್ ಪೊನ್ಸೆಕಾ ಕಂಪೆನಿ 45 ದೇಶಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದ್ದು, ಸುಮಾರು 700 ಸಿಬ್ಬಂದಿ ಮೂಲಕ ಕಾನೂನು ಸೇವೆಯನ್ನು ನೀಡುತ್ತದೆ. ಭಾರತವೂ ಸೇರಿ ಜಗತ್ತಿನಾದ್ಯಂತವಿರುವ ತನ್ನ ಗ್ರಾಹಕರಿಗೆ ತಮ್ಮ ದೇಶಗಳಲ್ಲಿ ತೆರಿಗೆ ವಂಚಿಸಿ ತಮ್ಮ ಗಳಿಕೆಯ ಬಹುಪಾಲನ್ನು ರಹಸ್ಯ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಈ ಸೇವೆಗಾಗಿ ತನ್ನ ಗ್ರಾಹಕರಿಂದ ಶುಲ್ಕ ಪಡೆಯುತ್ತದೆ. ತನ್ನ ಗ್ರಾಹಕರ ಗೌಪ್ಯತೆಯನ್ನು ಕಾಯ್ದು ಕೊಳ್ಳುವುದು ಈ ಕಂಪೆನಿಯ ವಿಶೇಷವೆಂದು ಹೇಳಲಾಗುತ್ತದೆ. ಈ ಸಂಸ್ಥೆ ಈಗ ತಾನು ನಿರ್ವಹಿಸಿದ ಖಾತೆಗಳ ಬಗೆಗೆ 1.15 ಕೋಟಿ ರೂ. ದಾಖಲೆಗಳನ್ನು ಹೊರಹಾಕಿದ್ದು, ಲಕ್ಷಾಂತರ ಖ್ಯಾತನಾಮರು ಅಡಗಿಸಿಟ್ಟ ಸಂಪತ್ತಿನ ಬಗೆಗೆ ಮಾಹಿತಿ ನೀಡಿದೆ.

 ಪನಾಮಾ ಉತ್ತರ ಮತ್ತು ದಕ್ಷಿಣ ಅಮೆರಿಕಾದ ಮಧ್ಯದ ಸಣ್ಣ ದೇಶ. ಇದು ಸ್ವಿಝರ್‌ಲೆಂಡ್, ಕ್ಲೇಮನ್ ಐ ಲೆಂಡ, ಬ್ರಿಟಿಷ್ ವರ್ಜೀನಿಯಾ, ಬಹಾಮಾ ದಂತೆ ತೆರಿಗೆ ಗಳ್ಳರ ಸ್ವರ್ಗವೆಂದು ಹೇಳಲಾಗುತ್ತದೆ. ಇನ್ನೂರು ಲಕ್ಷಕ್ಕಿಂತ ಹೆಚ್ಚು ನಕಲಿ ಕಂಪೆನಿಗಳನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಲಾಗುತ್ತದೆ. ಅಮೇರಿಕಾದ ಕಂಪೆನಿಗಳು ಮತ್ತು ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡುತ್ತಿದ್ದು, ಸುಮಾರು ಶತಕೋಟಿ ಡಾಲರ್ ಹೂಡಿಕೆ ಮಾಡಿರಬಹುದು ಎಂದು ಅಂದಾಜು ಮಾಡಲಾಗುತ್ತಿದೆ. ಇದರ ಸತ್ಯಾ ಸತ್ಯತೆ ನಿಖರವಾಗಿ ತಿಳಿಯಬೇಕಾಗಿದೆ. ಸುಮಾರು 40 ವರ್ಷಗಳ ಇತಿಹಾಸ ಇರುವ ಈ ಸಂಸ್ಥೆ 200ಕ್ಕೂ ಹೆಚ್ಚು ದೇಶಗಳಿಗೆ ಸಂಬಂಧಿಸಿದ 2,14,000 ವಿದೇಶಿ ಸಂಸ್ಥೆಗಳ ವಿವರ ಹೊಂದಿದೆ ಎಂದು ವರದಿ ಹೇಳುತ್ತದೆ.

ತೊಂಬತ್ತರ ದಶಕದ ಆರ್ಥಿಕ ಸುಧಾರಣೆ, ಉದಾರೀಕರಣ ಮತ್ತು ಜಾಗತೀಕರಣದವರೆಗೆ ಈ ಸಂಸ್ಥೆಗೆ ಭಾರತದ ಸಂಗಡ ಯಾವುದೇ ವ್ಯವಹಾರ ಇರಲಿಲ್ಲ. ಆ ನಂತರ ತೆರಿಗೆ ಸ್ವರ್ಗ ದೇಶಗಳಲ್ಲಿ ಇಂತಹ ಕಂಪೆನಿಗಳನ್ನು ಸ್ಥಾಪಿಸುವ ಮೊಸಾಕ್ ಫೊನ್ಸೆಕಾ ಸಂಸ್ಥೆಗೆ ಭಾರತ ಅತಿದೊಡ್ಡ ವ್ಯವಹಾರ ಕೇಂದ್ರವಾಗಿದೆಯಂತೆ. 2003ರ ವರೆಗೆ ಯಾವುದೇ ಭಾರತೀಯ ಪ್ರಜೆಯು ವಿದೇಶಿ ಸಂಸ್ಥೆಯನ್ನು ಸ್ಥಾಪಿಸುವಂತಿರಲಿಲ್ಲ. 2004 ರಲ್ಲಿ ವಿದೇಶಿ ವಿನಿಮಯ ರವಾನೆ (foreign exchange remittance) ಗೆ ಅನುಮೋದನೆ ನೀಡಲಾಗಿದ್ದು , 25,000 ಡಾಲರ್ ಕಳಿಸಬಹುದಿತ್ತು. ಈಗ ಈ ಮಿತಿಯನ್ನು 2,50,000 ಡಾಲರ್‌ಗೆ ಏರಿಸಲಾಗಿದೆ. ಈ ರವಾನೆಯು ಹೂಡಿಕೆಗೆ ಸೀಮಿತವಾಗಿದ್ದು ಕಂಪೆನಿಗಳನ್ನು ನಿರ್ಮಿಸುವ ಅವಕಾಶ ಕೊಟ್ಟಿರಲಿಲ್ಲ. ಕಾನೂನು ಪ್ರಕಾರ ಕಂಪೆನಿಗಳನ್ನು ಸ್ಥಾಪಿಸುವುದರಲ್ಲಿ ಯಾವುದೇ ಅಪರಾಧ ಇರುವುದಿಲ್ಲ. ಅದರೆ, ಈ ಬಗೆಗೆ ಪೂರಾ ಮಾಹಿತಿಯನ್ನು ಭಾರತ ಸರಕಾರಕ್ಕೆ ಕೊಡಬೇಕಾಗುತ್ತದೆ. ಈ ಕಂಪೆನಿಗಳು ಬಹುತೇಕ ಶೆಲ್ ಕಂಪೆನಿಗಳಾಗಿದ್ದು,( ಟೊಳ್ಳು), ಇವುಗಳಲ್ಲಿ ಯಾವುದೇ manufacturing, production ಅಥವಾ ಸೇವೆ ದೊರಕುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ವಿದೇಶಿ ಕಂಪೆನಿಗಳನ್ನು, ಸಂಸ್ಥೆಗಳನ್ನು ಆರಂಭಿಸುವದು ಸುಲಭ. ಕೇವಲ ಪಾಸ್‌ಪೋರ್ಟ್ ಪ್ರತಿ, ಬ್ಯಾಂಕ್ ರೆಫೆರೆನ್ಸ್ಸ್ ಮತ್ತು ವೃತ್ತಿ ದಾಖಲೆ ಪತ್ರಗಳು ಇಂತಹ ಕಂಪೆನಿಗಳನ್ನು ತೆರೆಯಲು ಸಾಕು. ಇದನ್ನು ಫಲಾನುಭವಿಗಳು ತೆರಿಗೆ ಯೋಜನೆ ಎಂದು ಕರೆದರೆ, ನಮ್ಮ ತೆರಿಗೆ ಇಲಾಖೆ ತೆರಿಗೆ ವಂಚನೆ ಯೋಜನೆ ಎಂದು ಕರೆಯುತ್ತಾರೆ.

ಕಳೆದ ವರ್ಷ HSBCಯ ಜಿನೇವಾ ಶಾಖೆಯಲ್ಲಿರುವ ಸುಮಾರು 1,500 ಭಾರತೀಯರ ರಹಸ್ಯ ಖಾತೆಗಳ ಬಗೆಗೆ ಮಾಹಿತಿ ಬಹಿರಂಗವಾಗಿತ್ತು. ಈ ವರ್ಷ ಪನಾಮಾ ಪೇಪರ್ಸ್. ಮುಂದೆ ಇನ್ನೇನೋ? ಕಾನೂನನ್ನು ತಿರುಚಿ, ತಮಗೆ ಬೇಕಂತೆ ಅರ್ಥೈಸಿ ಶ್ರೀಮಂತರಾಗುವ ಮತ್ತು ಸರಕಾರಕ್ಕೆ ನ್ಯಾಯವಾಗಿ ಕೊಡಬೇಕಾದ ತೆರಿಗೆಯನ್ನು ತಪ್ಪಿಸುವ ಕೆಲವರ ಚಾಕಚಕ್ಯತೆ ತೀರಾ ಆಶ್ಚರ್ಯಕರ. ಅವರು ಕಾನೂನಿನ ಬಾಹುಗಳಿಂದ ನುಣುಚಿಕೊಳ್ಳುವುದೂ ಅಷ್ಟೇ ವಿಚಿತ್ರ.

ಈ ಪ್ರಕರಣದಲ್ಲಿ ಮಾಧ್ಯಮದ ಪಾತ್ರ ಮಾತ್ರ ಪ್ರಶಂಸನೀಯ. ಇದು ನಿಸ್ಸಂಶಯವಾಗಿ ಮಾಧ್ಯಮದ ಕೂಸು. ಇದು ಮಾಧ್ಯಮದ ನೂರಾರು ವರ್ಷಗಳ ಇತಿಹಾಸದಲ್ಲಿ ಅತಿ ಮಹತ್ವವಾದ ತನಿಖಾ ಪತ್ರಿಕೋದ್ಯಮವಾಗಿದೆ. ವಿಶ್ವದ 110 ಪತ್ರಿಕೆಗಳು ಎಂಟು ತಿಂಗಳುಗಳ ಕಾಲ ನಿರಂತರ ಕೆಲಸ ಮಾಡಿ ಈ ಮಾಹಿತಿಯನ್ನು ಹೊರಹಾಕಿವೆ. ಭಾರತದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ 25 ವರದಿಗಾರರು, 76 ರಾಷ್ಟ್ರಗಳ 375 ವರದಿಗಾರರ ಸಂಗಡ ಸೇರಿ ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದು ಇನ್ನೊಂದು ಹೆಗ್ಗಳಿಕೆ.

ಸರಕಾರ ಈ ನಿಟ್ಟಿನಲ್ಲಿ ತನಿಖೆ ಅರಂಭಿಸಿದ್ದು, ಸತ್ಯ ಹೊರಬೀಳುವುದೇ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೇ, ಅಥವಾ ಇನ್ನಿತರ ಇಂತಹ ತನಿಖೆಗಳ ದಾರಿ ಹಿಡಿಯುವುದೇ ಎನ್ನುವುದನ್ನು ಪ್ರಜ್ಞಾವಂತರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X