ಆರೋಗ್ಯ ವ್ಯವಸ್ಥೆಗೆ ಬೇಕು ಹೊಸ ನಿಯಮಗಳು
ಭಾರತದ ಆರೋಗ್ಯ ವ್ಯವಸ್ಥೆಯು ಶಿಕ್ಷಣ ವ್ಯವಸ್ಠೆಯ ನಿಯಮಗಳನ್ನು ಅನುಸರಿಸುವುದು ಸೂಕ್ತ; ಹೇಗೆಂದರೆ ಪ್ರತಿ ಕಡಿಮೆ ಶ್ರೇಣಿಯ ಮಕ್ಕಳನ್ನು ಯಾವುದೇ ಅಡ್ಡದಾರಿಯ ಸಹಾಯವಿಲ್ಲದೆ ಉನ್ನತ ಶ್ರೇಣಿಗೆ ಸಿದ್ಧ ಪಡಿಸುವಂತೆ. ಆದರೆ ಆರೋಗ್ಯ ವ್ಯವಸ್ಥೆಯಲ್ಲಿ ಕೆಲವು ಸಲ ಅಡ್ಡದಾರಿಗಳು ಸಹಾಯಮಾಡುತ್ತವೆ. ಉದಾಹರಣೆಗೆ, ಪ್ರಾಥಮಿಕ ಆರೋಗ್ಯ ಆಸ್ಪತ್ರೆಗಳಲ್ಲಿ ಆವಶ್ಯಕತೆ ಇರುವ ರೋಗಿಗಳಿಗೆ ಅಂದಾಜು ಶೇ.70 ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಇದನ್ನು ಅಭಿವೃದ್ಧಿಗೊಳಿಸುವ ಆವಶ್ಯಕತೆ ಇದೆ.
ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ(RSBY) ಅಡಿಯಲ್ಲಿ ಚಿಕಿತ್ಸಾ ವೆಚ್ಚವನ್ನು ಬಡತನ ರೇಖೆಯಡಿಯಿರುವ ಐದು ಜನರ ಕುಟುಂಬಕ್ಕೆ 1 ಲಕ್ಷಗಳಷ್ಟು ವಿಸ್ತರಿಸಿರುವುದು ಒಂದು ಐತಿಹಾಸಿಕ ಹೆಜ್ಜೆ. ಆದರೆ ಪ್ರಾಥಮಿಕ ಚಿಕಿತ್ಸೆಯತ್ತ ಗಮನ ಹರಿಸದಿರುವುದು ಮಾತ್ರ ಖೇದಕರ ಸಂಗತಿ.
ಪ್ರಾಥಮಿಕ ಚಿಕಿತ್ಸೆಯು, ಚಿಕಿತ್ಸೆಯ ಒಂದು ಮೂಲಭೂತ ಭಾಗವಾಗಿದ್ದು, ಅನಾರೋಗ್ಯದ ಆರಂಭ ಮತ್ತು ಅವುಗಳು ಉಂಟುಮಾಡುವ ಸಂಕೀರ್ಣತೆಯನ್ನು ಮತ್ತು ಮಾರಣಾಂತಿಕತೆಯನ್ನು ತಡೆಗಟ್ಟುತ್ತದೆ. ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಯಡಿ ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರುವ ಕುಟುಂಬದವರ ಚಿಕಿತ್ಸೆಗೆ 1 ಲಕ್ಷದ ಯೋಜನೆಯಲ್ಲಿ ಶೇ.5ರಷ್ಟು ಹಣವನ್ನು ಅಂದರೆ ಅಂದಾಜು 25 ಪ್ರಾಥಮಿಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಪ್ರಸವಪೂರ್ವ ಆರೈಕೆ ಸಮಾಲೋಚನೆಗಳ ಚಿಕಿತ್ಸೆಗೆ ನೀಡಲು ನಿರ್ಧರಿಸಲಾಗಿದೆ. ಉಳಿದ ಶೇ.95 ರಷ್ಟು ಹಣವನ್ನು ಖಾತೆಯಲ್ಲಿ ಉಳಿತಾಯ ಮಾಡುವುದು.
ಈ ಹಿಂದೆ ಆರ್‌ಎಸ್‌ಬಿವೈ ಈ ಯೋಜನೆಯನ್ನು ಸಂಯೋಜಿಸಲು ಪ್ರಯತ್ನಿಸಿದಾದರು ಪರಿವೀಕ್ಷಣೆ ಕಷ್ಟವಾಗುವುದರಿಂದ ವಿಫಲವಾಗಿತ್ತು. ಪ್ರಾಥಮಿಕ ಆರೋಗ್ಯ ಚಿಕಿತ್ಸೆಯನ್ನು ಹಲವಾರು ಪೂರೈಕೆದಾರರು ಸಣ್ಣ ಪ್ರಮಾಣದಲ್ಲಿ ಒದಗಿಸುತ್ತಿದ್ದರು. ಆದರೆ ಈಗ ಭೂಮಿಕೆಯನ್ನು ಬದಲಾಯಿಸಿದ್ದು ಗ್ರಾಮೀಣ ರೋಗಿಗಳಿಗೆ ನಗರದ ವೈದ್ಯರು ತಂತ್ರಜ್ಞಾನದ ಬಳಕೆ ಮುಖಾಂತರ ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಸಮಾಲೋಚನೆಗಳನ್ನು ನೀಡಲು ಸಾಧ್ಯವಿದೆ. ಪರಿಕರಣೆಗಳ ಯೋಗ್ಯ ಸಂಗ್ರಹವಿದ್ದು, 2ಜಿ ಸಿಮ್ ಕಾರ್ಡ್‌ಗಳು ವೈದ್ಯರನ್ನು ಸಮುದಾಯಗಳಿಗೆ ಅವಶ್ಯವಿದ್ದಾಗ ಒದಗಿಸಲು ಸಹಾಯಮಾಡುತ್ತವೆ.
ಪ್ರತಿರಕ್ಷಣೆ: ಭಾರತ ಅಡಿಪಾಯ ಬಲಪಡಿಸುವಿಕೆ ಈ ತಂತ್ರಜ್ಞಾನ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಲಾ ಸಮಸ್ಯೆಗಳ ಎದುರಿಸಬಲ್ಲ ಸಾಮರ್ಥ್ಯವನ್ನು ನೀಡುತ್ತದೆ. ಟೆಲಿಮೆಡಿಸಿನ್ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಆಯ್ಕೆಗಳನ್ನು ಕಳೆದ ಐದು ವರ್ಷಗಳಿಂದ ಹುಟ್ಟುಹಾಕಿದೆ. ಉದ್ಯಮಿಗಳು ನಡೆಸುತ್ತಿದ್ದ ವೈದ್ಯಕೀಯ ಕೇಂದ್ರಗಳು ಕೆಲವು ಗ್ರಾಮೀಣ ಭಾಗಗಳ ಅಗತ್ಯಗಳನ್ನು ಪೂರೈಸುತ್ತಿದ್ದವು. ಇನ್ನು ಮುಂದೆ ಆರ್‌ಎಸ್‌ಬಿವೈ ಈ ಗುಣಮಟ್ಟವನ್ನು ಸಾಧಿಸುತ್ತದೆ. ಹಾಗೂ ಇದೇ ನೆಟ್‌ವರ್ಕನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸಲು ಬಳಸಬಹುದು ಮತ್ತು ಉದ್ಯಮಶೀಲತೆ ಪ್ರೋತ್ಸಾಹಿಸಲು ಮತ್ತು ಖಾಸಗಿ ಬಂಡವಾಳ ಆಕರ್ಷಿಸಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರ್‌ಎಸ್‌ಬಿವೈ ಜೊತೆಗೂಡಿ ಶಸ್ತ್ರಚಿಕಿತ್ಸೆಗಳನ್ನು ಕೂಡ ನಡೆಸಬಹುದು. ಇತ್ತೀಚಿನ ಸಂಶೋಧನೆಗಳು ಈ ವಿಧಾನಗಳನ್ನು ಬೆಂಬಲಿಸುತ್ತವೆ. ಲಾನ್ಸೆಟ್ ಕಮಿಷನ್ ಜಾಗತಿಕ ಸಂಸ್ಥೆಯ ವರದಿಯ ಪ್ರಕಾರ ಶೇ.97ರಷ್ಟು ದಕ್ಷಿಣ ಏಷ್ಯಾದ ಜನರು ಮೂಲಭೂತ ಶಸ್ತ್ರಚಿಕಿತ್ಸೆಯ ಕೊರತೆಯಿಂದ ವಂಚಿತರಾಗಿದ್ದಾರೆ ಎಂದು ತಿಳಿಸುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೊರತೆ ತುಂಬಿಸಲು ಪ್ರಾಥಮಿಕ ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸುವ ಅಗತ್ಯವಿದೆ. 900 ದಶಲಕ್ಷ ಗ್ರಾಮೀಣ ಜನಸಂಖ್ಯೆಗೆ ಚಿಕಿತ್ಸೆ ನೀಡಲು ಕನಿಷ್ಠ 27,421 ವೈದ್ಯರ ಆವಶ್ಯಕತೆ ಇದೆ. ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ವೈದ್ಯರ ಪಾತ್ರ ದ್ವಿತೀಯ ಮತ್ತು ತೃತೀಯ ಸೇವೆಗಳ ಆವಶ್ಯಕತೆಯನ್ನು ಸ್ಪಷ್ಟಪಡಿಸುತ್ತದೆ. ಮತ್ತು ತಂತ್ರಜ್ಞಾನದ ಸಹಾಯದಿಂದ ವಿಶ್ವಾಸಾರ್ಹ ಮೇಲ್ವಿಚಾರಣೆಯನ್ನು ಕೈಗೊಳ್ಳಬಹುದು.